Please enable javascript.Don'ts for Wives: 5 Things You Should Not Do When Wife is at Home

ಸಂಗಾತಿ ಮನೆಯಲ್ಲಿ ಇಲ್ಲದ್ದಾಗ ಮಾಡಲೇಬಾರದ ಸಂಗತಿ

Vijaya Karnataka 21 Feb 2018, 4:45 pm
Subscribe

ದಾಂಪತ್ಯದ ಅಸಮಾಧಾನಕ್ಕೆ ಸಂಗಾತಿಯ ಸ್ನೇಹಿತರ ಮಧ್ಯ ಪ್ರವೇಶ ಕೂಡ ಕಾರಣವಿರಬಹುದು. ಕಾರಣವಿರಬಹುದು.

relationship alert
ಸಂಗಾತಿ ಮನೆಯಲ್ಲಿ ಇಲ್ಲದ್ದಾಗ ಮಾಡಲೇಬಾರದ ಸಂಗತಿ

*ಬಿಂದು

ದಾಂಪತ್ಯದ ಅಸಮಾಧಾನಕ್ಕೆ ಸಂಗಾತಿಯ ಸ್ನೇಹಿತರ ಮಧ್ಯ ಪ್ರವೇಶ ಕೂಡ ಕಾರಣವಿರಬಹುದು. ಪತಿ ಅಥವಾ ಪತ್ನಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರ ಸ್ನೇಹಿತರನ್ನು ಮನೆಗೆ ಆಹ್ವಾನಿಸುವ ಮುನ್ನ ಯೋಚಿಸಿ. ಏಕೆಂದರೆ ಇದೇ ಸ್ನೇಹ ಅನಗತ್ಯ ಸಂಬಂಧವೊಂದರ ಹುಟ್ಟಿಗೆ ಕಾರಣವಿರಬಹುದು ಅಥವಾ ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಬಹುದು.

1.ತಪ್ಪು ಕಲ್ಪನೆಗೆ ಅವಕಾಶ ಬೇಡ

ನಿಮ್ಮ ಸಂಗಾತಿಯ ಸ್ನೇಹಿತರೊಂದಿಗೆ ನೀವು ಒಳ್ಳೆಯ ಬಾಂಧವ್ಯ ಹೊಂದಿರಬಹುದು. ಆದರೆ ಈ ಬಗ್ಗೆ ನಿಮ್ಮ ಸಂಗಾತಿಗೆ ಅನುಮಾನವಿದ್ದರೆ ಅಥವಾ ಅಸೂಯೆ ಪಡುತ್ತಿದ್ದರೆ ಸಂಗಾತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರನ್ನು ಮನೆಗೆ ಆಹ್ವಾನಿಸಬೇಡಿ. ಏಕೆಂದರೆ ಅದು ನಿಮ್ಮಿಬ್ಬರ ನಡುವೆ ಜಗಳಕ್ಕೆ ಕಾರಣವಾಗಬಹುದು.

2.ಅತಿಯಾದ ಸಲುಗೆ ಅನಗತ್ಯ

ಸಂಗಾತಿಯ ಸ್ನೇಹಿತರೆಲ್ಲರೂ ನಿಮಗೂ ಸ್ನೇಹಿತರಾಗಬೇಕೆಂದೇನೂ ಇಲ್ಲ. ಹಾಗಾಗಿ ಅವರæೂಂದಿಗೆ ಅಂತರ ಕಾಯ್ದುಕೊಳ್ಳಿ. ಅನವಶ್ಯಕ ಸಲುಗೆ, ಚರ್ಚೆ ಬೇಡ.

3. ಫೋನ್‌ ನಂಬರ್‌ಗಳ ವಿನಿಮಯ

ಸಂಗಾತಿಯ ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಫೋನ್‌ ನಂಬರ್‌ಗÙ Ü ವಿನಿಮಯ ಬೇಡ. ತುರ್ತು ಪರಿಸ್ಥಿತಿಗೆಂದು ನಂಬರ್‌ ಇಟ್ಟುಕೊಂಡರೂ ಅನವಶ್ಯಕ ಮೆಸೇಜ್‌ ಅಥವಾ ಕಾಲ್‌ ಮಾಡಬೇಡಿ.

4.ಸಂಗಾತಿಗೆ ಮಾಹಿತಿ ಇರಲಿ

ನಿಮ್ಮ ಸಂಗಾತಿಯ ಅನುಪಸ್ಥಿತಿಯಲ್ಲಿ ಅವರ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಸಂಗಾತಿಗೆ ತಿಳಿಸಿ. ಸಂಗಾತಿಯ ಸ್ನೇಹಿತರೊಬ್ಬರೊಂದಿಗೆ ಹೆಚ್ಚಿನ ಸಮಯ ಕಳೆಯುವ ಪರಿಸ್ಥಿತಿ ಎದುರಾದಾಗ ನಿಮ್ಮ ಸ್ನೇಹಿತರನ್ನು ಸೇರಿಸಿಕೊಳ್ಳಿ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ