ಆ್ಯಪ್ನಗರ

ಪ್ರೀತಿಯಲ್ಲಿ ಬಿದ್ದಿರುವ ಜೋಡಿಗಳು ಹೀಗೂ ಮಾಡುತ್ತಾರಂತೆ!!

ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುವ ಜೋಡಿ ಪ್ರೇಮಿಗಳು ಕೆಲವೊಮ್ಮೆ ತಾವು ಮಾಡುವ ಕೆಲಸಗಳಿಂದ ಇತರರಿಗೆ ಕಿರಿಕಿರಿ ಉಂಟುಮಾಡುತ್ತಾರೆ.

Vijaya Karnataka Web 28 Jul 2021, 11:11 am
ಪ್ರೀತಿ ಎನ್ನುವುದು ಹೇಳಿ ಕೇಳಿ ಬರುವುದಿಲ್ಲ. ಬಂದ ಮೇಲೆ ಹೋಗುವುದಿಲ್ಲ. ಪ್ರೀತಿಗೆ ಯಾವುದೇ ವಯಸ್ಸು, ಜಾತಿ ಎಂಬ ಅಂತರವಿಲ್ಲ. ಪ್ರೀತಿಯಲ್ಲಿ ತೇಲಲು ಆರಂಭವಾದ ಜೋಡಿಗಳ ಮನಸ್ಸಿನಲ್ಲಿ ಕೇವಲ ಸ್ವರ್ಗದಲ್ಲಿ ಓಡಾಡುವ ಅನುಭವ ಮಾತ್ರ ಇರುತ್ತದೆ ಎಂದು ಹೇಳುತ್ತಾರೆ.
Vijaya Karnataka Web these are the most annoying things new couples in love do
ಪ್ರೀತಿಯಲ್ಲಿ ಬಿದ್ದಿರುವ ಜೋಡಿಗಳು ಹೀಗೂ ಮಾಡುತ್ತಾರಂತೆ!!


ಆದರೆ ಇಂತಹ ಸಮಯವನ್ನು ಆನಂದಮಯವಾಗಿ ಕೇವಲ ತಾವು ಮಾತ್ರ ಕಳೆಯುವ ಹಾಗಿರಬೇಕು. ಆದರೆ ಕೆಲವೊಂದು ಜೋಡಿಗಳು ತಮ್ಮ ಹೊಸ ಸಂಬಂಧದ ಬಗ್ಗೆ ಏನಾದರೂ ಮಾಡಿ ಎಲ್ಲಾ ಕಡೆ ಹೇಳಿಕೊಳ್ಳಬೇಕು ಎನ್ನುವ ತವಕ ಹೊಂದಿರುತ್ತಾರೆ. ಕೆಲವರು ತಮಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಇತರರ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಇದು ನಂತರದಲ್ಲಿ ಯಾವ ಹಂತಕ್ಕೆ ತಿರುಗಲಿದೆ ಎಂಬುದು ಗೊತ್ತಿರುವುದಿಲ್ಲ.

ಪ್ರೀತಿಯಲ್ಲಿ ಬಿದ್ದು ಜೋಡಿಗಳು ಏನೇನು ಮಾಡಬಲ್ಲರು ಮತ್ತು ಅದರಿಂದ ಯಾವೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

​ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ತಕ್ಷಣವೇ ಅಪ್ಡೇಟ್ ಮಾಡುತ್ತಾರೆ

  • ಈಗಿನ ಕಾಲದ ಜನರು ತುಂಬಾ ಫಾಸ್ಟ್. ಅದರಲ್ಲೂ ಯುವಜನತೆ ತಂತ್ರಜ್ಞಾನದಲ್ಲಿ ಸದಾ ಮುಂದು. ತಮ್ಮ ಸುತ್ತಮುತ್ತ ನಡೆಯುವ ಯಾವುದೇ ವಿಚಾರಗಳ ಬಗ್ಗೆ ತುಂಬಾ ಕುತೂಹಲ ಮತ್ತು ಆಸಕ್ತಿ ಹೊಂದಿರುತ್ತಾರೆ.
  • ಒಂದು ವೇಳೆ ಅದೇ ರೀತಿಯ ಬದಲಾವಣೆ ತಮ್ಮ ಜೀವನದಲ್ಲಿ ಆದರೆ ಅದನ್ನು ಇತರರ ಜೊತೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹೊಸದಾಗಿ ಗೆಳೆತನದಲ್ಲಿ ಸಿಕ್ಕ ವ್ಯಕ್ತಿಯನ್ನು ಬಹಳ ಬೇಗನೆ ಹಚ್ಚಿಕೊಂಡು ಬಿಡುತ್ತಾರೆ. ಡೇಟಿಂಗ್ ಮಾಡಲು ಪ್ರಾರಂಭ ಮಾಡಿದ ದಿನದಿಂದ ತಮ್ಮ ಸೋಶಿಯಲ್ ಪ್ರೊಫೈಲ್ ಗಳಲ್ಲಿ ಪ್ರೀತಿಯ ಚಿಹ್ನೆಗಳನ್ನು ಹಾಕಿಕೊಳ್ಳುತ್ತಾ ತಮ್ಮ ಫೋಟೋಗಳನ್ನು ಅಪ್ಡೇಟ್ ಮಾಡುತ್ತಾರೆ, ತಾವು ಒಟ್ಟಿಗೆ ಭೇಟಿ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮುಂದಾಗುತ್ತಾರೆ.
  • ತಮ್ಮ ರೆಲೇಶನ್ಶಿಪ್ ಸ್ಟೇಟಸ್ ಬದಲಾಯಿಸುತ್ತಾರೆ. ಆದರೆ ತಮ್ಮ ಖಾಸಗಿ ವಿಷಯಗಳನ್ನು ಸಮಾಜದ ಪರಿಚಯ ಇಲ್ಲದ ವ್ಯಕ್ತಿಗಳ ಜೊತೆ ಹಂಚಿಕೊಳ್ಳುವ ಪ್ರಮೇಯ ನಿಜಕ್ಕೂ ಇದೆಯೇ?
  • ಅಷ್ಟಕ್ಕೂ ಈಗ ತಾನೆ ಪ್ರಾರಂಭವಾಗಿರುವ ಸಂಬಂಧ ಗಟ್ಟಿಯಾಗಿ ನಿಲ್ಲುತ್ತದೆ ಎಂಬ ಯಾವುದಾದರೂ ಗ್ಯಾರಂಟಿ ಇದೆಯೇ? ಒಂದು ವೇಳೆ ಸಂಬಂಧ ಮುರಿದು ಬಿದ್ದರೆ ಬೇರೆಯವರಿಗೆ ಹಾಸ್ಯಸ್ಪದವಾಗಿ ಕಾಣುವುದಿಲ್ಲವೇ? ಹಾಗಾಗಿ ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು.

ಪ್ರೀತಿ-ಪ್ರೇಮವೇ ಹಾಗೆ ಗುರು ಇಲ್ಲದೆ ಕಲಿಯುವ ವಿದ್ಯೆ!

​ಒಂದೇ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮುಂದಾಗುವುದು

  • ಹೊಸ ಸಂಬಂಧದಲ್ಲಿ ಆರಂಭದ ದಿನಗಳಲ್ಲಿ ತಮ್ಮ ಪ್ರೀತಿಯ ಸಂಗಾತಿಗೆ ಪರೋಕ್ಷವಾಗಿ ಪ್ರೀತಿಯನ್ನು ತಿಳಿಸುವ ಪರಿ ಇದು. ಬಹುತೇಕ ಜನರು ತಮ್ಮ ಸಂಗಾತಿಗೆ ಇಷ್ಟವಾದ ಬಣ್ಣದ ಬಟ್ಟೆಗಳನ್ನು ಧರಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
  • ಇನ್ನು ಕೆಲವರು ತಮ್ಮ ಸಂಗಾತಿ ಧರಿಸಿದ ಬಣ್ಣದ ಬಟ್ಟೆಗೆ ಅನುಗುಣವಾಗಿ ಹೊಂದಿಕೊಳ್ಳುವ ಈಗಿನ ಆಧುನಿಕ ಜೀವನಶೈಲಿಯ ವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಇದೆಲ್ಲವೂ ಕೇವಲ ಆರಂಭದಲ್ಲಿ ಕೆಲವು ದಿನಗಳವರೆಗೆ ಮಾತ್ರ ನಡೆಯುತ್ತದೆ. ಆನಂತರ ಕೇವಲ ತಮ್ಮಿಷ್ಟದ ಪ್ರಕಾರವೇ ನಡೆಯಬೇಕು ಎನ್ನುವ ಭಾವನೆ ಮನಸ್ಸಿನಲ್ಲಿ ಬಂದುಬಿಡುತ್ತದೆ. ಬಹುತೇಕ ಸಂಬಂಧಗಳು ಇದರಿಂದಲೇ ಮುರಿದು ಬೀಳುತ್ತವೆ ಎಂಬುದು ನೆನಪಿರಲಿ.

​ತಮ್ಮ ಮೊದಲಿನ ಗೆಳೆಯರನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ!

  • ಹೊಸ ಸಂಗಾತಿ ಸಿಕ್ಕ ಕೂಡಲೇ ಹಳೆಯ ಗೆಳೆಯರಿಗೆ ಹಾಗೂ ಗೆಳತಿಯರಿಗೆ ಗುಡ್ ಬಾಯ್ ಹೇಳುವುದು ಮಾಮೂಲಿ. ಆದರೆ ಇದು ತಪ್ಪು ಎಂದು ಹೇಳಬಹುದು.
  • ಏಕೆಂದರೆ ನಿಮಗೆ ಇದುವರೆಗೂ ಸಹಾಯ ಮಾಡಿದ ಗೆಳೆಯರನ್ನು ಇದ್ದಕ್ಕಿದ್ದಂತೆ ಮರೆತುಬಿಡುವುದು ಅಥವಾ ಅವರಿಂದ ದೂರ ಉಳಿಯುವುದು ಎಷ್ಟು ಸರಿ.
  • ನಿಮ್ಮ ಸಂಬಂಧವನ್ನು ಉಳಿಸಿಕೊಂಡು ಗೆಳೆತನವನ್ನು ಉಳಿಸಿಕೊಂಡು ಮುಂದೆ ಸಾಗಿದರೆ ಜೀವನ ಖಂಡಿತವಾಗಿ ಸುಖಮಯವಾಗಿರುತ್ತದೆ. ಅಷ್ಟೇ ಅಲ್ಲದೆ ಒಂದುವೇಳೆ ನಿಮ್ಮ ಹೊಸ ಸಂಬಂಧದಲ್ಲಿ ಏನಾದರೂ ಬಿರುಕು ಕಂಡು ಬಂದರೆ ಅದನ್ನು ಸರಿಪಡಿಸುವ ಪ್ರಯತ್ನವನ್ನು ಗೆಳೆಯರು ಮಾಡುತ್ತಾರೆ. ಹಾಗಾಗಿ ಗೆಳೆಯರ ನಿರ್ಲಕ್ಷತೆ ಸರಿಯಲ್ಲ.

​ತಮ್ಮ ಹೊಸ ಪ್ರೀತಿಯ ಬಗ್ಗೆ ಎಲ್ಲೆಲ್ಲೂ ಹೇಳಿಕೊಳ್ಳುವುದು

  • ಹೊಸ ಸಂಗಾತಿ ಸಿಕ್ಕಿದ ತಕ್ಷಣ ಮನಸ್ಸಿನ ಹಾರಾಟಕ್ಕೆ ಮಿತಿ ಇರುವುದಿಲ್ಲ. ಆದರೆ ಇದು ಇತರರಿಗೆ ಕಿರಿಕಿರಿ ಉಂಟು ಮಾಡಬಾರದು. ತಮ್ಮ ಪ್ರೀತಿಯ ಬಗ್ಗೆ ಎಲ್ಲೆಲ್ಲೂ ಹೇಳಿಕೊಳ್ಳುತ್ತಾ ಹೋದರೆ ಅದನ್ನು ಕೇಳಿಸಿಕೊಳ್ಳುವವರಿಗೆ ಖಂಡಿತ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಅಥವಾ ಅಸಮಾಧಾನದ ಭಾವನೆ ಬರುತ್ತದೆ.
  • ಕೆಲವರಂತೂ ತಮ್ಮ ಸಂಗಾತಿ ತಮ್ಮ ಜೊತೆ ರೋಮ್ಯಾಂಟಿಕ್ ಆಗಿ ನಡೆದುಕೊಂಡ ಸಂದರ್ಭದ ಬಗ್ಗೆಯೂ ಕೂಡ ಬೇರೆಯವರ ಜೊತೆ ಹೇಳಿ ಕೊಳ್ಳುತ್ತಾರೆ.
  • ಆದರೆ ಮೊದಲೇ ಹೇಳಿದಂತೆ ತಮ್ಮ ಖಾಸಗಿ ವಿಷಯಗಳನ್ನು ಈ ರೀತಿ ಬೇರೆಯವರ ಜೊತೆ ಹಂಚಿಕೊಳ್ಳುತ್ತಾ ಹೋದರೆ ಇದರಿಂದಲೇ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚು. ಕೊನೆಗೊಂದು ದಿನ ಬೇರೆಯವರು ನಿಮ್ಮನ್ನು ಆಡಿಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು. ಎಚ್ಚರ!

​ಪ್ರೀತಿಯ ಬಗ್ಗೆ ಪಾಠ ಮಾಡಲು ಪ್ರಾರಂಭ ಮಾಡುತ್ತಾರೆ

  • ಆರಂಭದಲ್ಲಿ ತಮ್ಮ ಪ್ರೀತಿಯ ಸವಿಯನ್ನು ಕಾಣುತ್ತಿರುವ ಜನರು ಅದರ ಬಗ್ಗೆ ಇತರರಿಗೆ ಪಾಠಮಾಡಲು ಪ್ರಾರಂಭಿಸುವುದು ನಿಜಕ್ಕೂ ವಿಷಾದನೀಯ. ತಮ್ಮ ಜೀವನ ಚೆನ್ನಾಗಿದೆ ಎಂದರೆ ಅದನ್ನು ತಾವು ಸಂಪೂರ್ಣವಾಗಿ ಆನಂದಮಯವಾಗಿ ಅನುಭವಿಸುವುದನ್ನು ಕಲಿಯಬೇಕು.
  • ಅದನ್ನು ಬಿಟ್ಟು ತಮ್ಮನ್ನು ಇನ್ನೊಬ್ಬರ ಜೊತೆ ಹೋಲಿಸಿಕೊಂಡು ಅವರಿಗೆ ತಿದ್ದಿ ಬುದ್ಧಿ ಹೇಳಲು ಹೋಗಬಾರದು. ಇದು ಕೂಡ ಇತರರಿಗೂ ಕಿರಿಕಿರಿ ಉಂಟು ಮಾಡುತ್ತದೆ.
  • ತಮ್ಮ ಪ್ರೀತಿ ಸಕ್ಸಸ್ ಆಯಿತು ಎಂದು ಸಿಂಗಲ್ ಆಗಿರುವವರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಲು ಹೋಗಬಾರದು. ಕೆಲವರು ಇದರಿಂದ ಕೋಪಗೊಂಡು ತಿರುಗಿಸಿ ಬಯ್ಯುವುದು ಉಂಟು. ಹಾಗಾಗಿ ತಮ್ಮ ಪ್ರೀತಿಯ ವಿಷಯವನ್ನು ಕೇವಲ ತಾವು ಮಾತ್ರ ಎಂಜಾಯ್ ಮಾಡುವುದು ಒಳ್ಳೆಯದು.

​ಗಮನಿಸಬೇಕಾದ ಅಂಶ

  • ನೀವು ಹೊಸದಾಗಿ ಪ್ರೀತಿಯಲ್ಲಿ ಬಿದ್ದಿರುವ ಸಮಯದಲ್ಲಿ ನಿಮ್ಮ ಅನುಭವಗಳನ್ನು ಕೇವಲ ನೀವು ಮಾತ್ರ ಅನುಭವಿಸಿದರೆ ಸಾಕು. ಅದು ಹನಿಮೂನ್ ಸಂದರ್ಭ ಆಗಿದ್ದರು ಅಷ್ಟೇ.
  • ನಿಮ್ಮ ಸ್ವಂತ ವಿಷಯಗಳನ್ನು ಬೇರೆಯವರ ಬಳಿ ಹೇಳಿ ಅವರಿಗೆ ಕಿರಿಕಿರಿ ಉಂಟು ಮಾಡಬಾರದು ಅಥವಾ ಬೇಸರ ತರಿಸುವ ಕೆಲಸವನ್ನು ಮಾಡಬಾರದು.

ಉಸಿರು ಕಟ್ಟುವ ಪ್ರೀತಿಯಲ್ಲಿ ಬಾಳುವುದರಲ್ಲಿ ಅರ್ಥವಿಲ್ಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ