ಆ್ಯಪ್ನಗರ

ಮಹಿಳೆಯರು ಪಬ್, ಡಿಸ್ಕೋ, ನೈಟ್‌ ಪಾರ್ಟಿ‌ಗೆ ಹೋಗುವ ಮೊದಲು…

ಹುಡುಗಿಯರು ವಾರಾಂತ್ಯದಲ್ಲಿ ಬೇಸರ ಕಳೆಯಲು ಡಿಸ್ಕೋ ಅಥವಾ ಪಬ್ ಗೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.

Vijaya Karnataka Web 21 Sep 2021, 4:14 pm
ಮಹಿಳೆಯರು ಮತ್ತು ಹುಡುಗಿಯರನ್ನು ಚುಡಾಯಿಸುವಂತಹ ಜನರು ಪ್ರತಿಯೊಂದು ಕಡೆಯಲ್ಲೂ ಇದ್ದೇ ಇರುವರು. ಹೆಚ್ಚಾಗಿ ಪಬ್ ಮತ್ತು ಡಿಸ್ಕೋಗಳಿಗೆ ಹೋದರೆ ಆಗ ಹುಡುಗಿಯರಿಗೆ ತುಂಬಾ ಅಪಾಯವಿರುವುದು. ಹೀಗಾಗಿ ಅವರು ಇಂತಹ ಜಾಗಗಳಿಗೆ ಹೋಗುವ ವೇಳೆ ತುಂಬಾ ಎಚ್ಚರಿಕೆಯಿಂದ ಇರಬೇಕು.
Vijaya Karnataka Web these important things girls should keep in mind when going to pubs and discos
ಮಹಿಳೆಯರು ಪಬ್, ಡಿಸ್ಕೋ, ನೈಟ್‌ ಪಾರ್ಟಿ‌ಗೆ ಹೋಗುವ ಮೊದಲು…


ಮುಖ್ಯವಾಗಿ ಹುಡುಗಿಯರು ಸುರಕ್ಷಿತವಾಗಿ ಇರಲು ಕೆಲವು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಬ್ ಮತ್ತು ಡಿಸ್ಕೋಗಳಿಗೆ ಕೆಲವರು ಹುಡುಗಿಯರನ್ನು ಚುಡಾಯಿಸಲೆಂದೇ ಬರುವರು. ಹೀಗಾಗಿ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪಬ್ ಮತ್ತು ಡಿಸ್ಕೋಗೆ ಹೋಗುವ ವೇಳೆ ಹುಡುಗಿಯರು ಯಾವ ವಿಚಾರಗಳನ್ನು ಗಮನದಲ್ಲಿಡಬೇಕು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

​ನಿಮ್ಮ ಲೊಕೇಷನ್ ಮೋಡ್ ಆನ್ ಆಗಿರಲಿ

  • ಯಾವತ್ತಿಗೂ ಪಬ್ ಮತ್ತು ಡಿಸ್ಕೋಗೆ ಹೋಗುವ ವೇಳೆ ನೀವು ಲೊಕೇಷನ್ ಮೋಡ್ ಅನ್ನು ಆಫ್ ಮಾಡಬೇಡಿ. ಮೊಬೈಲ್ ನ್ನು ಫುಲ್ ಚಾರ್ಜ್ ಮಾಡಿಕೊಂಡು ಹೋಗಬೇಕು.
  • ನೀವು ಹೋಗುವಂತಹ ಜಾಗದ ಮ್ಯಾಪ್ ನ್ನು ಪೋಷಕರು ಅಥವಾ ನಿಮ್ಮ ಸ್ನೇಹಿತರಿಗೆ ಕಳುಹಿಸಿಕೊಡಿ. ಇದರಿಂದ ಯಾವುದೇ ಅಪಾಯವು ಕಾಡಿದರೆ ಆಗ ಬೇಗನೆ ಪ್ರತಿಕ್ರಿಯಿಸಬಹುದು.

​ನಂಬಿಕಸ್ಥ ಜನರೊಂದಿಗೆ ಹೋಗಿ

ನೀವು ಪಬ್ ಮತ್ತು ಡಿಸ್ಕೋಗೆ ಹೋಗುವಂತಹ ಜನರು ನಂಬಿಕಸ್ಥರಾಗಿರುವರೇ ಎಂದು ತಿಳಿಯಿರಿ. ನಿಮಗೆ ಅಷ್ಟೊಂದು ಪರಿಚಯವಿಲ್ಲದೆ ಇರುವ ಜನರೊಂದಿಗೆ ನೀವು ಹೋಗಬೇಡಿ. ಮಹಿಳೆಯರೊಂದಿಗೆ ವಿನಯತೆ ಪ್ರದರ್ಶಿಸದೆ ಇರುವ ಜನರೊಂದಿಗೆ ನೀವು ಹೋಗಬೇಡಿ. ಇಂತಹವರಿಂದ ದೂರ ಉಳಿಯುವುದು ಉತ್ತಮ.

​ಚುರುಕು ಮತ್ತು ಜಾಣತನ ಪ್ರದರ್ಶಿಸಿ

ನೀವು ಯಾವಾಗಲೂ ಹೊರಗಡೆ ಹೋಗುವ ವೇಳೆ ತುಂಬಾ ಚುರುಕುತನ ಮತ್ತು ಜಾಣ್ಮೆ ಪ್ರದರ್ಶಿಸಬೇಕು. ಯಾವುದೇ ಸಂದರ್ಭ ಬಂದರೂ ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿ. ನೀವು ಸ್ವತಂತ್ರವಾಗಿ ತುಂಬಾ ತೀಕ್ಷ್ಣ ಹಾಗೂ ಬಲಿಷ್ಠ ಹುಡುಗಿಯಾಗಬೇಕು.

​ಅತಿಯಾಗಿ ಕುಡಿಯಬೇಡಿ

ನೀವು ಪಬ್ ಮತ್ತು ಡಿಸ್ಕೋಗೆ ಹೋಗುವ ಸಂದರ್ಭದಲ್ಲಿ ಏನು ಮತ್ತು ಎಷ್ಟು ಕುಡಿಯಬೇಕು ಎನ್ನುವುದನ್ನು ಮೊದಲು ತಿಳಿಯಿರಿ. ನಿಮ್ಮ ಮಿತಿಗಿಂತ ಅಧಿಕವಾಗಿ ಕುಡಿಯಲು ಹೋಗಬೇಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕುಡಿಯಿರಿ. ಮನೆಗೆ ಸುರಕ್ಷಿತವಾಗಿ ಹಿಂದಕ್ಕೆ ಹೋಗುವ ಬಗ್ಗೆ ಕೂಡ ಆಲೋಚನೆ ಮಾಡಿ.

​ಏಕಾಂಗಿಯಾಗಿ ಕುಳಿತುಕೊಳ್ಳಬೇಡಿ

ಕೇವಲ ಕುಡಿಯುತ್ತಾ ಏಕಾಂಗಿಯಾಗಿ ಇರಬೇಡಿ. ಹಾಗೆ ಸ್ವಲ್ಪ ಡ್ಯಾನ್ಸ್ ಮಾಡಿ ಮತ್ತು ಜನರೊಂದಿಗೆ ಬೆರೆಯಿರಿ. ಒಳ್ಳೆಯ ಜನರೊಂದಿಗೆ ನಿಮಗೆ ಖುಷಿ ಸಿಗುವುದು.

​ಮೊದಲು ಜನರನ್ನು ತಿಳಿಯಿರಿ

  • ನೀವು ಡ್ಯಾನ್ಸ್ ಮಾಡಲು ಹೋಗುವ ಮೊದಲು ಯಾವ ವ್ಯಕ್ತಿಯ ಜತೆಗೆ ಡ್ಯಾನ್ಸ್ ಮಾಡಬಹುದು ಎಂದು ನೀವು ಮೊದಲೇ ತಿಳಿಯಿರಿ. ಅವರ ನಡವಳಿಕೆ ಬಗ್ಗೆ ದೂರದಿಂದ ಗಮನಿಸಿ. ನಿಮ್ಮೊಂದಿಗೆ ಸಮಯ ಕಳೆಯಲು ಅವರು ಅರ್ಹರೇ ಎಂದು ತಿಳಿಯಿರಿ.
  • ನೀವು ಪಬ್ ಅಥವಾ ಡಿಸ್ಕೋಗೆ ಹೋಗಿ ಅಲ್ಲಿ ಕುಡಿದ ಬಳಿಕ ನಿಮ್ಮ ಮಾಜಿ ಪ್ರೇಮಿ ಬಗ್ಗೆ ಅಥವಾ ಯಾವುದೇ ಸಮಸ್ಯೆಯ ಬಗ್ಗೆ ಅಳಲು ಹೋಗಬೇಡಿ. ಅತಿಯಾಗಿ ಕುಡಿಯಲು ಹೋಗಬೇಡಿ. ಡ್ಯಾನ್ಸ್ ಮಾಡಿ, ಮಾತನಾಡಿ, ಹಾಡಿ, ಬೊಬ್ಬೆ ಹಾಕಿ. ಇದು ನಿಮ್ಮ ಸಮಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ