ಆ್ಯಪ್ನಗರ

ನವ ದಂಪತಿಗೆ ಕೆಲ ದಾಂಪತ್ಯ ಟಿಪ್ಸ್

ನವ ದಂಪತಿ ನಡುವೆ ಕಂಫರ್ಟ್‌ ಭಾವ ಸುಲಭವಾಗಿ ಮೂಡುವುದಿಲ್ಲ. ಆದರೆ ಇದಕ್ಕಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದಿದೆ ಸಮೀಕ್ಷೆ.

Vijaya Karnataka Web 18 Aug 2020, 5:42 pm
ಇಂಟಿಮೇಟ್‌ ಸಂಬಂಧದಲ್ಲಿ ಪರಸ್ಪರ ಅರಿಯಲು, ಮುಜುಗರ, ಭಯ, ಹಿಂಜರಿಕೆಯಿಂದ ಹೊರ ಬರುವ ಹೊತ್ತಿಗೆ ಮದುವೆಯಾಗಿ 2-3 ತಿಂಗಳು ಕಳೆದಿರುತ್ತದೆ. ಈ ಸಂಬಂಧ ನಡೆದ ಸಮೀಕ್ಷೆಯೊಂದರಲ್ಲಿ ಸಾವಿರಾರು ದಂಪತಿಗಳು ಪ್ರತಿಕ್ರಿಯಿಸಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
Vijaya Karnataka Web wedding night


ಒಂಟಿಯಾಗಿದ್ದಾಗ ರೂಢಿಸಿಕೊಂಡ ಕೆಲವು ಅಭ್ಯಾಸಗಳು ಕೂಡ ಮದುವೆಯ ಆರಂಭದ ದಿನಗಳಲ್ಲಿ ಸಂಗಾತಿ ಎದುರು ಕಿರಿಕಿರಿ, ಮುಜುಗುರ ಉಂಟು ಮಾಡುತ್ತವೆ ಎನ್ನಲಾಗಿದೆ. ಒಟ್ಟಾರೆ ಪುರುಷರು ಸಂಗಾತಿಯೊಂದಿಗೆ ಹಲವು ಸಂಗತಿಗಳಲ್ಲಿ ಕಂಪರ್ಟ್‌ ಫೀಲ್‌ ಮಾಡಲು ಎರಡು ತಿಂಗಳು ತೆಗೆದುಕೊಂಡರೆ ಮಹಿಳೆಯರು ಅದಕ್ಕಿಂತ ಒಂದು ತಿಂಗಳು ಹೆಚ್ಚು ತೆಗೆದುಕೊಳ್ಳುತ್ತಾರಂತೆ.

ಒಬ್ಬರು ಮತ್ತೊಬ್ಬರನ್ನು ಅರಿತುಕೊಳ್ಳಲು ಸಮಯ ಬೇಕು

ಲವ್‌ ಮ್ಯಾರೇಜ್‌ ಆಗಲಿ, ಅರೇಂಜ್ ಮ್ಯಾರೇಜ್‌ ಆಗಲಿ ಮದುವೆಗೆ ಮೊದಲಿದ್ದ ಲೈಫ್‌ಗಿಂತ ನಂತರದ ಲೈಫ್‌ ಭಿನ್ನವಾಗಿರುತ್ತದೆ. ಹೆಂಡತಿಯಾದವಳು ಒಂದು ವೇಳೆ ನಿಮ್ಮ ಜತೆ ಬೇಗ ಹೊಂದಿಕೊಂಡರೂ ಮನೆಯವರ ಜತೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ಅವಳು ಮಾಡಿದ್ದು ಕೆಲವೊಂದು ನಿಮಗೆ ಸರಿಕಾಣದಿದ್ದರೂ ತಾಳ್ಮೆಯಿಂದ ವಿವರಿಸಿ ಹೇಳಿ, ಆ ಮನೆಗೆ ಆಕೆ ಹೊಂದಿಕೊಳ್ಳಲು ನಿಮ್ಮ ಸಹಕಾರ ಬಹು ಮುಖ್ಯ.

ಗಂಡ-ಹೆಂಡತಿಗೆ ಆ ಸಮಯದಲ್ಲಿ ಕಾಡುವ ಭಯ! ಇದಕ್ಕೆ ಕಾರಣಗಳೇನು?


ಇನ್ನು ಖಾಸಗಿ ಬದುಕಿನಲ್ಲೂ ಹಲವು ಸವಾಲುಗಳಿರುತ್ತವೆ
ಇನ್ನು ಎಲ್ಲರ ಖಾಸಗಿ ಬದುಕು ಮೂವಿಯಲ್ಲಿ ಕಂಡಷ್ಟು ರೊಮ್ಯಾಂಟಿಕ್‌ ಆಗಿರುವುದಿಲ್ಲ. ಕೆಲವರಿಗೆ ತುಂಬಾ ಮುಜುಗರವಿರುತ್ತದೆ, ನಿಧಾನಕ್ಕೆ ಅವರು ಹೊಂದಿಕೊಳ್ಳಲು ಮೊದಲು ಮಾನಸಿಕವಾಗಿ ಅವರಿಗೆ ತುಂಬಾ ಹತ್ತಿರವಾಗಬೇಕು.

ಬಾಯಿ ಮಾತಿಗೂ ಗಂಡನಿಗೆ ಹೀಗೆಲ್ಲಾ ಹೇಳಬೇಡಿ ಆತನಿಗೆ ಆಗ್ಬರಲ್ಲ!

ಥ್ರಿಲ್‌ ನೀಡುವ ಕ್ಷಣಗಳಿರಲಿ
ನಿಮ್ಮ ಸಂಗಾತಿ ಜತೆ ಪ್ರತಿನಿತ್ಯ ಒಂದಿಷ್ಟು ಅಮೂಲ್ಯ ಕ್ಷಣಗಳನ್ನು ಕಳೆಯಲೇಬೇಕು. ಅದರಲ್ಲೂ ಥ್ರಿಲ್‌ ನೀಡುವ ಚಟುವಟಿಕೆಗಳು ನಿಮ್ಮ ದಾಂಪತ್ಯವನ್ನು ಸದಾ ಹಸನಾಗಿಡುವುದಲ್ಲದೆ ದಾಂಪತ್ಯ ದ್ರೋಹದಂತಹ ಸಮಸ್ಯೆಗಳಿಂದ ದೂರವಿಡಲು ಸಹಾಯ ಮಾಡುತ್ತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ