ಆ್ಯಪ್ನಗರ

ವಿವಾಹ ಬಂಧನದಲ್ಲಿ ನೀವು ಮಾಡುವ ತಪ್ಪು ಏನು ಗೊತ್ತಾ?

ದಾಂಪತ್ಯ ಅಥವಾ ವಿವಾಹದ ಸಂಬಂಧದಲ್ಲಿ ಉಂಟಾಗುವ ಸಮಸ್ಯೆಗಳು ಯಾವವು? ಎನ್ನುವುದನ್ನು ಪರಿಶೀಲಿಸೋಣ.

Vijaya Karnataka Web 21 Jun 2021, 9:34 am
ವಿವಾಹ ಬಂಧನಕ್ಕೆ ಒಳಗಾಗುವ ಮೊದಲು ಸಂಗಾತಿಗಳು ಪರಸ್ಪರ ಹೆಚ್ಚು ಆಕರ್ಷಕರಾಗಿ ಹಾಗೂ ಅವರೇ ತಮ್ಮ ಜೀವವಾಗಿ ಕಾಣಿಸುತ್ತಾರೆ. ಅದೇ ಜೋಡಿ ಅಥವಾ ಪ್ರೇಮಿಗಳು ವಿವಾಹವಾದ ಬಳಿಕ ಈ ಮೊದಲು ಇದ್ದ ಆಕರ್ಷಣೆ ಹಾಗೂ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಹೊಂದಾಣಿಕೆಯ ಸಮಸ್ಯೆ, ಹವ್ಯಾಸಗಳಲ್ಲಿ ತೊಡಕು ಹಾಗೂ ಸಣ್ಣಪುಟ್ಟ ಸಮಸ್ಯೆಗಳಿಗೂ ಬೇಸರ ಉಂಟಾಗುವುದು. ಈ ಕಾರಣಗಳಿಂದಾಗಿಯೂ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅವು ದಾಂಪತ್ಯದ ಜೀವನದಲ್ಲಿ ಬೇಸರ ಹಾಗೂ ವೈಮನಸ್ಸು ಮೂಡುವುದು.
Vijaya Karnataka Web we bring to your attention the worst marriage habits of all
ವಿವಾಹ ಬಂಧನದಲ್ಲಿ ನೀವು ಮಾಡುವ ತಪ್ಪು ಏನು ಗೊತ್ತಾ?


ಸ್ನೇಹಿತರಿಗೆ ದೂರು ನೀಡುವುದು

ಸಂಗಾತಿಗಳ ನಡುವೆ ಕೆಲವು ತರ್ಕ, ವೈಮನಸ್ಸು, ಬಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಅವುಗಳ ವಿವರ ಅಥವಾ ಆ ಸಮಾಚಾರಗಳನ್ನು ಸ್ನೇಹಿತರಲ್ಲಿ ಅಥವಾ ಪಕ್ಕದ ಮನೆಯವರೊಂದಿಗೆ ಹಂಚಿಕೊಳ್ಳುತ್ತೇವೆ. ನಮ್ಮ ವೈಯಕ್ತಿಕ ಜೀವನ ಅಥವಾ ಸಂಗಾತಿಗಳ ನಡುವೆ ನಡೆಯುವ ಸಂಗತಿಗಳು ನಾಲ್ಕು ಗೋಡೆಯಿಂದ ಆಚೆ ಹೋಗಬಾರದು. ಸಂಗಾತಿಯ ನಡೆ ನುಡಿಗಳ ಬಗ್ಗೆ ಸೂಕ್ತ ಇತರ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು. ವೈಯಕ್ತಿಕ ಜೀವನದ ಸಂಗತಿಗಳನ್ನು ನಿಮ್ಮ ನಡುವೆಯೇ ಇಟ್ಟುಕೊಳ್ಳಬೇಕು. ಇತರರಿಗೆ ಹೇಳಿದಾಗ ಅವರು ಅವರ ಜ್ಞಾನಕ್ಕೆ ಅನುಸಾರವಾಗಿ ಸಲಹೆ ಸೂಚನೆ ನೀಡುತ್ತಾರೆ. ಅದು ನಿಮ್ಮ ಸಂಬಂಧದಲ್ಲಿ ತಪ್ಪಾದ ಫಲಿತಾಂಶ ನೀಡಬಹುದು. ಹಾಗಾಗಿ ಸಾಕಷ್ಟು ಚಿಂತನೆ ಹಾಗೂ ನಾಜೂಕಾದ ನಿರ್ಣಯ ಕೈಗೊಳ್ಳಬೇಕಾಗುವುದು.

​ಹೆಚ್ಚು ಸಮಯ ಮೊಬೈಲ್ ಬಳಸುವುದು

ಸಂಗಾತಿಯೊಂದಿಗೆ ಹಾಸಿಗೆಯಲ್ಲಿ ಮಲಗಿರುವಾಗ ಮೊಬೈಲ್ ಅನ್ನು ಪರಿಶೀಲಿಸುವುದು ಅಥವಾ ಇನ್ಯಾವುದೋ ವ್ಯಕ್ತಿಯೊಂದಿಗೆ ಮಾತನಾಡುವುದು ಮಾಡಬಾರದು. ಹಾಸಿಗೆಯಲ್ಲಿ ಅಥವಾ ನಿಮ್ಮ ಸಂಗಾತಿಯೊಂದಿಗೆ ಇರುವಾಗ ಮೊಬೈಲ್ ಅನ್ನು ಸೈಡ್‍ನಲ್ಲಿ ಇಡಿ. ಸಂಗಾತಿಯೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಿರಿ. ಸಂಗಾತಿಯೊಂದಿಗೆ ಮುದ್ದಾಡಿ. ಆ ಸಮಯ ಮತ್ತು ಪ್ರೀತಿಯನ್ನು ನೀವು ಇನ್ನೊಂದು ಬಾರಿ ಹುಡುಕಲು ಸಿಗದೆ ಹೋಗಬಹುದು.

ಡೈವೋರ್ಸ್ ತೆಗೆದುಕೊಳ್ಳಲು ನಿರ್ಧರಿಸುವ ಮುನ್ನ ಪ್ರಯತ್ನಿಸಬೇಕಾದ 8 ವಿಷಯಗಳು

ಮನೆಯಿಂದ ಆಚೆ ಇರುವಾಗ ಕೂಗಾಡುವುದು

ಕೆಲವು ಸಂಗಾತಿಗಳಿಗೆ ಮನೆಯಿಂದ ಹೊರಗೆ ಬಂದಾಗ ಕೂಗಾಡುವುದು ಅಥವಾ ವಿಚಿತ್ರವಾದ ವರ್ತನೆ ತೋರುವ ಹವ್ಯಾಸ ಇರುತ್ತದೆ. ಮನೆಯಿಂದ ಹೊರಗೆ ಬಂದಾಗ ಯಾವುದೋ ತಪ್ಪು ಅಥವಾ ಅಸಹನೀಯ ಸಂಗತಿ ಸಂಭವಿಸಬಹುದು ಅಂತಹ ಸಮಯದಲ್ಲಿ ಸಂಗಾತಿಯೊಂದಿಗೆ, ಗಡಸಾಗಿ ಮಾತನಾಡುವುದು, ಕೂಗಾಡುವುದು ಅಥವಾ ಜಗಳ ಮಾಡುವುದು ಮಾಡಬಾರದು. ಅದು ನಿಮ್ಮ ಸಂಬಂಧದಲ್ಲಿ ಹಾನಿ ಹಾಗೂ ತಪ್ಪನ್ನು ಉಂಟುಮಾಡುವಂತೆ ಮಾಡಬಹುದು. ಸಾಂಗತ್ಯದ ಬಗ್ಗೆ ಬೇಸರ ಉಂಟಾಗುವುದು.

​ಒಬ್ಬಂಟಿಯಾಗಿ ಹೆಚ್ಚು ಸಮಯ ಕಳೆಯುವುದು

ನಿಮ್ಮ ಸಮಯವನ್ನು ನೀವು ಕಳೆಯುವಾಗ ಒಂಟಿಯಾಗಿ ಇರಬಾರದು. ಸಂಗಾತಿಯನ್ನು ಒಂಟಿಯಾಗಿ ಬಿಟ್ಟು ನೀವು ಯಾವುದೋ ಕೆಲಸದಲ್ಲಿ ತಲ್ಲೀನರಾಗಿ ಇರಬೇಡಿ. ಮನೆ ಕೆಲಸ ಅಥವಾ ನಿನ್ಯಾವುದೋ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾಡುವಾಗ ಸಂಗಾತಿಯನ್ನು ನಿನ್ನೊಂದಿಗೆ ಸೇರಿಸಿಕೊಳ್ಳಿ. ನಿಮ್ಮ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಮಾಡಿಕೊಡಿ. ಆಗ ಹೆಚ್ಚು ಸಮಯ ಅವರೊಂದಿಗೆ ಆನಂದಿಸಲು ಹಾಗೂ ಕಳೆಯಲು ನಿಮಗೆ ಅನುಕೂಲವಾಗುವುದು.

ದಾಂಪತ್ಯ ಜೀವನದಲ್ಲಿ ಸದಾ ಪ್ರೀತಿ ಉಳಿಯಲು ಹೇಗೆ ಬದುಕಬೇಕು ಗೊತ್ತಾ?

​ಅನ್ಯೋನ್ಯತೆ ಕಳೆದುಕೊಳ್ಳುವುದು

ಮಕ್ಕಳು ಅಥವಾ ಮನೆ ಕೆಲಸ ಹೀಗೆ ವಿವಿಧ ಕೆಲಸಗಳಿಂದಾಗಿ ಸಂಗಾತಿಗಳ ನಡುವೆ ಅಂತರ ಬೆಳೆಯುವುದು. ಅದು ನಿಧಾನವಾಗಿ ಬೇಸರ ಹಾಗೂ ಒಂಟಿ ತನದ ಭಾವನೆಯನ್ನು ಹೆಚ್ಚಿಸುವುದು. ಎಷ್ಟೇ ಒತ್ತಡ ಅಥವಾ ಕೆಲಸಗಳಿದ್ದರೂ ನಿಮಗಾಗಿ ಹಾಗೂ ನಿಮ್ಮ ಸಂಗಾತಿಗಾಗಿ ಒಂದಿಷ್ಟು ಸಮಯವನ್ನು ಮೀಸಲಾಗಿ ಇಡಿ. ವಾರದಲ್ಲಿ ಎರಡು ಬಾರಿಯಾದರೂ ಸಂಭೋಗ ನಡೆಸಿ. ಅದು ನಿಮ್ಮ ಸಂಬಂಧ, ಆತ್ಮೀಯತೆ ಹಾಗೂ ಬಾಂಧವ್ಯವನ್ನು ಗಟ್ಟಿಯಾಗಿ ಹಿಡಿದಿಡುವುದು.

​ಒಬ್ಬರನ್ನೊಬ್ಬರು ನಗಿಸಲು ಮರೆಯುವುದು

ಸಂಬಂಧದಗಳ ನಡುವೆ ಪ್ರೀತಿ ಹಾಗೂ ಜವಾಬ್ದಾರಿಗಳ ನಡುವೆ ಒಂದಿಷ್ಟು ನಗು ಇರಬೇಕು. ಅದು ಇಬ್ಬರ ಮನಸ್ಸನ್ನು ಉಲ್ಲಾಸ ಹಾಗೂ ಸಂತೋಷಗಿ ಇಡಲು ಸಹಾಯ ಮಾಡುತ್ತದೆ. ಸಂಗಾತಿಯೊಂದಿಗೆ ಒಂದಿಷ್ಟು ತಮಾಷೆ ಹಾಗೂ ನಗುವನ್ನು ಹಂಚಿಕೊಳ್ಳುವುದರಿಂದ ಜೀವನವು ಸುಖಕರವಾಗಿ ಇರುತ್ತದೆ.

To Read in English Click: These are the worst marriage habits of all

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ