ಆ್ಯಪ್ನಗರ

ಒಂಟಿತನವನ್ನು ಸಂಭ್ರಮಿಸಿ

ಪ್ರೇಮಿಗಳ ದಿನ ಕೇವಲ ಪ್ರೇಮಿಗಳಿಗೆ ಸೀಮಿತವಲ್ಲ. ಸಿಂಗಲ್‌ ಆದರೂ ಸಡಗರ ಪಡುವ ಮನಸ್ಸಿಗೆ ಈ ದಿನ ಕೂಡ ವಿಶೇಷ.

Vijaya Karnataka 13 Feb 2019, 5:00 am
ಪ್ರೇಮಿಗಳ ದಿನದ ಸಂದರ್ಭದಲ್ಲಿ ಎಲ್ಲರೂ ತಮ್ಮ ಸಂಗಾತಿ ಜತೆಗೆ ಖುಷಿಯಿಂದ ಕಾಲ ಕಳೆಯುವಾಗಿ ನೀವು ಮಾತ್ರ ಒಂಟಿ ಎನ್ನಬೇಡಿ. ಏಕೆಂದರೆ ನೀವು ಸಿಂಗಲ್‌ ಆಗಿದ್ದರೂ ಪ್ರೇಮಿಗಳ ದಿನವನ್ನು ಸಂಭ್ರಮಿಸಬಹುದು. ನಿಮ್ಮದೇ ವ್ಯಕ್ತಿತ್ವ, ಖುಷಿಯನ್ನು ಸಂಭ್ರಮಿಸಿ. ಅದಕ್ಕೆ ನಾನಾ ದಾರಿಗಳಿವೆ.
Vijaya Karnataka Web what do you do on valentines day when your single
ಒಂಟಿತನವನ್ನು ಸಂಭ್ರಮಿಸಿ


ಸೋಲೋ ಟ್ರಾವೆಲ್‌ ಮಾಡಿ:
ವ್ಯಾಲೆಂಟೈನ್ಸ್‌ ಡೇ ಸಂದರ್ಭದಲ್ಲಿ ಹಲವು ಆಫರ್‌ಗಳನ್ನು ಪ್ರವಾಸಿ ಕಂಪನಿಗಳು ನೀಡುತ್ತವೆ. ಅವುಗಳ ಪ್ರಯೋಜನ ಪಡೆಯಿರಿ.

ಶಾಪಿಂಗ್‌ ಮಾಡಿ: ನಿಮ್ಮ ಇಷ್ಟದ ವಸ್ತುಗಳನ್ನು ನೀವೋಬ್ಬರೇ ಹೋಗಿ ಖರೀದಿ ಮಾಡಿ.

ಮೆಚ್ಚಿನ ಹವ್ಯಾಸ: ಈ ದಿನ ನಿಮ್ಮ ನೆಚ್ಚಿನ ಹವ್ಯಾಸಕ್ಕಾಗಿ ಮೀಸಲಿಡಿ. ಇದು ನಿಮ್ಮನ್ನು ಖುಷಿಯಾಗಿಡುತ್ತದೆ.

ನಿಮ್ಮ ಭಾವನೆ ಬದಲಿಸಿಕೊಳ್ಳಿ: ಪ್ರೇಮಿಗಳ ದಿನವೆಂದರೆ ಪ್ರೇಮಿಗಳು ಜತೆಯಾಗಿ ಸಂಭ್ರಮಿಸುವ, ಯಾರಲ್ಲಿಯೋ ಪ್ರೇಮ ನಿವೇದಿಸಿಕೊಳ್ಳುವ ದಿನವಷ್ಟೇ ಅಲ್ಲ. ಒಂಟಿತನವನ್ನು ಕೂಡ ಸಂಭ್ರಮಿಸುವ ಕ್ಷಣ ಎಂದು ನಿಮ್ಮನ್ನು ನೀವೇ ಉತ್ತೇಜಿಸಿಕೊಳ್ಳಿ.

ಸ್ನೇಹಿತರೊಂದಿಗೆ ಸಮಯ ಕಳೆಯಿರಿ:
ನೀವು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿ. ಇದರಿಂದ ಮನಸ್ಸು ಉಲ್ಲಾಸಿತವಾಗಿರುತ್ತದೆ.

ನಿಮ್ಮನ್ನು ನೀವು ಹೊಸದಾಗಿ ನೋಡಿ:
ಈ ದಿನ ನಿಮಗೆ ನಿಮ್ಮ ವ್ಯಕ್ತಿತ್ವ, ಸಾಧಿಸಬೇಕಾದ ಗುರಿ, ಬದುಕಬೇಕಾದ ಸಕಾರಾತ್ಮಕ ಬದುಕಿಗೆ ಪ್ರೇರಣೆ ನೀಡಲಿ. ನಿಮ್ಮನ್ನು ನೀವು ಹೇಗೆ ಖುಷಿಯಾಗಿಟ್ಟುಕೊಳ್ಳಬಹುದು ಎಂಬುದರ ಆತ್ಮವಲೋಕನ ಮಾಡಿ.

ನಿಮಗೆ ನೀವು ಪ್ರಪೋಸ್‌ ಮಾಡಿ: ನೀವು ಯಾರಿಗೋ ಅಥವಾ ನಿಮಗೆ ಇನ್ಯಾರೋ ಪ್ರೇಮಿಗಳ ದಿನದಂದು ಪ್ರಪೋಸ್‌ ಮಾಡಬೇಕು ಎಂದೆಲ್ಲ ಬಯಸಬೇಡಿ. ನಿಮ್ಮನ್ನು ನೀವು ಮೊದಲು ಪ್ರೀತಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ