ಬೆಂಗಳೂರಿನ ರಾಜಾಜಿನಗರದ ಕೃಷ್ಣಗಿರಿಯಲ್ಲಿ ನಿರ್ಮಿಸಲಾಗಿರುವ ಇಸ್ಕಾನ್ ದೇವಾಲಯ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಶ್ರೀಕೃಷ್ಣ ಭಕ್ತರಿಗೆ ಪ್ರಿಯವಾದ ಸ್ಥಳವಿದು. ಈ ಶ್ರೀಮಂತ ದೇವಾಲಯ ಕೃಷ್ಣಾವತಾರದ ಭವ್ಯ ಸಂಕೇತವಾಗಿದ್ದು, ಅಸಂಖ್ಯಾತ ಜನರನ್ನು ಸೆಳೆಯುತ್ತಿದೆ. ಸಂಜೆಯ ಹೊತ್ತು ಇದರ ದೀಪಾಲಂಕಾರ ಮನಮೋಹಕವಾಗಿರುತ್ತದೆ. ಹೈಟೆಕ್ ದೇವಾಲಯವೆಂದು ಹೆಸರಾಗಿರುವ ಇಸ್ಕಾನ್ ದೇವಾಲಯದ ರಥೋತ್ಸವ ವರ್ಣರಂಜಿತವಾಗಿರುತ್ತದೆ. ಕೃಷ್ಣಗಿರಿಯ ಏಳು ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ದೇವಾಲಯ ಸಂಕೀರ್ಣ ವಾಸ್ತುಶಿಲ್ಪಕ್ಕೆ ಸಾಂಪ್ರದಾಯಿಕತೆ ಹಾಗೂ ಆಧುನಿಕತೆ ಎರಡೂ ಎರಕಗೊಂಡ ವಿಭಿನ್ನ ವಿನ್ಯಾಸವಾಗಿದೆ. ರಾಧಾಕೃಷ್ಣ ಮಂದಿರದ ಒಳಾಂಗಣ, ತೆಪ್ಪೋತ್ಸವ ಕೊಳ ಮೊದಲಾದವು ಕವಿ, ಕಲಾವಿದರಿಗೆ, ನೃತ್ಯ ಸಂಗೀತಗಾರರಿಗೆ, ಛಾಯಾಚಿತ್ರಗಾರರಿಗೆ ಸ್ಫೂರ್ತಿದಾಯಕವಾಗಿದೆ.
ಇಸ್ಕಾನ್ ದೇವಾಲಯ
ಬೆಂಗಳೂರಿನ ರಾಜಾಜಿನಗರದ ಕೃಷ್ಣಗಿರಿಯಲ್ಲಿ ನಿರ್ಮಿಸಲಾಗಿರುವ ಇಸ್ಕಾನ್ ದೇವಾಲಯ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು...
Vijaya Karnataka Web 16 Jul 2017, 5:30 am