ಆ್ಯಪ್ನಗರ

ಮುಟ್ಟಿನ ಸಮಯದಲ್ಲಿ ಸೇರಿದರೆ ಗರ್ಭಧಾರಣೆಯಾಗುವುದೇ?

ಮುಟ್ಟಿನ ಸಮಯದಲ್ಲಿ ರಕ್ತಸ್ರಾವವಾಗುವುದರಿಂದ ವೀರ್ಯಾಣುಗಳು ಗರ್ಭದಲ್ಲಿ ಉಳಿಯಲು ಸಾಧ್ಯವಿಲ್ಲ, ಆದ್ದರಿಂದ ಈ ಸಮಯದಲ್ಲಿ ಗರ್ಭಧಾರಣೆಯಾಗುವುದಿಲ್ಲ ಎಂಬ ನಂಬಿಕೆ ಇದೆ, ಆದರೆ ಮುಟ್ಟಿನ ಸಮಯದಲ್ಲಿ ಪತಿ-ಪತ್ನಿ ಸೇರಿದರೆ ಗರ್ಭಧಾರಣೆಯಾಗಲು ಸಾಧ್ಯವಿಲ್ಲ ಎಂದು ಹೇಳಲು ಆಗುವುದಿಲ್ಲ.

TIMESOFINDIA.COM 8 Jul 2019, 12:50 pm
ಗರ್ಭಧಾರಣೆಯಾಗಿದೆ ಎಂಬ ಪ್ರಮುಖ ಸೂಚನೆ ನೀಡುವುದೇ ಮುಟ್ಟು ನಿಂತಾಗ. ಆದರೆ ಮುಟ್ಟಿನ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಭಧಾರಣೆಯಾಗುವುದೇ?
Vijaya Karnataka Web periods


ಸಾಮಾನ್ಯವಾಗಿ ಪಿರೀಡ್‌ ಸೈಕಲ್‌ನ ಮಧ್ಯದಲ್ಲಿ ಮಹಿಳೆಯರಲ್ಲಿ ಫಲವತ್ತತೆ ಅಧಿಕವಿರುತ್ತದೆ, ಈ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಭಧಾರಣೆಯಾಗುವುದು. ಮುಟ್ಟಾಗಿ7-19 ದಿನಗಳನ್ನು ಓವ್ಯೂಲೇಶನ್‌ ಪಿರೀಡ್‌ ಎಂದು ಹೇಳಲಾಗುವುದು. ಈ ಸಮಯದಲ್ಲಿ ವೀರ್ಯಾಣು ಅಂಡಾಣುವಿನ ಸಂಪರ್ಕಕ್ಕೆ ಬಂದಾಗ ಗರ್ಭಧಾರಣೆಯಾಗುವುದು.

ಗರ್ಭಧಾರಣೆಯಾಗುವುದಕ್ಕೂ ಓವ್ಯೂಲೇಶನ್‌ ದಿನಕ್ಕೂ ಒಂದಕ್ಕೊಂದು ಸಂಬಂಧವಿದೆ. ಕುಟುಂಬದಲ್ಲಿ ಹೊಸ ಸದಸ್ಯರನ್ನು ಬಯಸುವವರು ಈ ದಿನದ ಬಗ್ಗೆ ಗಮನ ಕೊಡುವುದು ಒಳ್ಳೆಯದು.

ಓವ್ಯೂಲೇಶನ್‌ ಆಗಿ 12-24 ಗಂಟೆಯಷ್ಟೇ ಅಂಡಾಣು ಗರ್ಭಧಾರಣೆಯ ಸಾಮರ್ಥ್ಯ ಹೊಂದಿರುತ್ತದೆ.

ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಮಕ್ಕಳಾಗುವುದಿಲ್ಲ ಎಂಬ ನಂಬಿಕೆ ಇದೆ. ಆ 5 ದಿನ ವೀರ್ಯಾಣುಗಳು ಗರ್ಭದಲ್ಲಿರಲು ಸಾಧ್ಯವಿಲ್ಲ ಎಂದು ಭಾವಿಸಲಾಗುವುದು, ಆದರೆ ಅದು ಸಂಪೂರ್ಣ ಸತ್ಯವಲ್ಲ, ಪುರುಷರ ವೀರ್ಯಾಣು ಮಹಿಳೆಯರ ದೇಹದಲ್ಲಿ 5 ದಿನಗಳವರೆಗೆ ಇರುತ್ತದೆ, ಆದ್ದರಿಂದ ಈ ಸಮಯದಲ್ಲಿ ಅಂಡಾಣು ಬಿಡುಗಡೆಯಾದಾಗ, ವೀರ್ಯಾಣು ಅಂಡಾಣು ಜತೆ ಸೇರಿದರೆ ಭ್ರೂಣದ ರೂಪ ತಾಳುವುದು.

ಅಲ್ಲದೆ ಓವ್ಯೂಲೇಶನ್‌ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು ಎಂದು ಪರಿಣಿತರು ಸಲಹೆ ನೀಡುತ್ತಾರೆ.
ಮುಟ್ಟಾದಾಗ ಕೆಲವರಿಗೆ ತುಂಬಾ ದಿನ ರಕ್ತಸ್ರಾವವಾದರೆ ಮತ್ತೆ ಕೆಲವರಿಗೆ 2-3 ದಿನಕ್ಕೆ ರಕ್ತಸ್ರಾವ ನಿಲ್ಲುವುದು. ಸಾಮಾನ್ಯವಾಗಿ 5 ದಿನ ರಕ್ತಸ್ರಾವ ಇರುತ್ತದೆ. ರಕ್ತಸ್ರಾವ ಬೇಗ ನಿಂತರೆ ಓವ್ಯೂಲೇಶನ್‌ ಪಿರೀಡ್‌ ಬೇಗ ಬರಬಹುದು. ಆದ್ದರಿಂದ ಮುಟ್ಟಿನ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಇದೆ ಎನ್ನಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ