ಆ್ಯಪ್ನಗರ

ಡೇ ಸ್ಪೆಷಲ್‌: ಶಾರ್ಕ್‌ ಜಾಗೃತಿ ದಿನ

ಜಲಚರ ಪ್ರಾಣಿಗಳಲ್ಲಿ ಮೀನುಗಳು ತಮ್ಮ ಆಕಾರ, ಗಾತ್ರ, ಬಣ್ಣಗಳಿಂದ ಎಲ್ಲರ ಗಮನ ಸೆಳೆಯುತ್ತವೆ ಶಾರ್ಕ್‌ ಕೂಡ ಇದರಿಂದ ಹೊರತಾಗಿಲ್ಲ...

Vijaya Karnataka 14 Jul 2018, 5:00 am
ಜಲಚರ ಪ್ರಾಣಿಗಳಲ್ಲಿ ಮೀನುಗಳು ತಮ್ಮ ಆಕಾರ, ಗಾತ್ರ, ಬಣ್ಣಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಶಾರ್ಕ್‌ ಕೂಡ ಇದರಿಂದ ಹೊರತಾಗಿಲ್ಲ. ಶಾರ್ಕ್‌ ತನ್ನ ಮೊನಚಾದ ಹಲ್ಲುಗಳಿಂದಲೇ ಅತ್ಯಂತ ಪ್ರಸಿದ್ಧ ವಾಗಿದೆ. ಶಾರ್ಕ್‌ ಮೀನಿಗೆ ಕನಿಷ್ಠ 50 ಹಲ್ಲುಗಳಿರುತ್ತವೆ. ಶಾರ್ಕ್‌ಗಳಲ್ಲಿ ಸಣ್ಣ ಗಾತ್ರದ ಮೀನುಗಳಿಂದ ಹಿಡಿದು ದೈತ್ಯಾಕಾರದ ಶಾರ್ಕ್‌ ಮೀನುಗಳಿವೆ. ಅವುಗಳಲ್ಲಿ ಪ್ರಧಾನವಾಗಿ ಎರಡು ವಿಧಗಳಿವೆ. ಅವುಗಳೆಂದರೆ ರೇ ಶಾರ್ಕ್‌ ಮತ್ತು ಸ್ಟೇಟ್‌ ಶಾರ್ಕ್‌. ಶಾರ್ಕ್‌ ಮೀನುಗಳ ರಚನೆ, ಆಕಾರ, ಗಾತ್ರ ಚರ್ಮದ ಹೊದಿಕೆ ಇವುಗಳ ಆಧಾರದ ಮೇಲೆ ಸುಮಾರು 450 ಕ್ಕೂ ಹೆಚ್ಚಿನ ಶಾರ್ಕ್‌ ಪ್ರಭೇದಗಳಿವೆ.
Vijaya Karnataka Web shark


ಶಾರ್ಕ್‌ ನರಭಕ್ಷಕ ಜಲಚರ. ಮಾನವ ಇದಕ್ಕೆ ಹೆದರಬೇಕು. ಆದರೆ ಈಗ ಮಾನವನಿಗೆ ಇವು ಹೆದರುವಂತಾಗಿದೆ. ಏಕೆಂದರೆ ಇದರ ಮೊನಚಾದ ಹಲ್ಲುಗಳಿಗೆ ಹಾಗೂ ಇದರ ರೆಕ್ಕೆಗಳ ಸೂಪ್‌ಗೆ ಬಹಳ ಬೇಡಿಕೆ ಇರುವುದರಿಂದ ಮಾನವ ಇದನ್ನು ಅಕ್ರಮವಾಗಿ ಬೇಟೆಯಾಡಿ ಕೊಲ್ಲುತ್ತಿದ್ದಾನೆ. ಇವುಗಳ ಅಸ್ತಿತ್ವವನ್ನು ನಾಶ ಮಾಡಲು ಮುಂದಾಗಿದ್ದಾನೆ. ಹಾಗಾಗಿ ಶಾರ್ಕ್‌ಗಳನ್ನು ಉಳಿಸುವ, ಶಾರ್ಕ್‌ಗಳಿಗೆ ಗೌರವ ಸಲ್ಲಿಸುವ ಹಾಗೂ ಜನರಲ್ಲಿ ಶಾರ್ಕ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 14 ರಂದು ಶಾರ್ಕ್‌ ಜಾಗೃತಿ ದಿನವನ್ನು ಅಮೆರಿಕ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಅನೇಕ ಪ್ರಾಣಿ ದಯಾ ಸಂಘಟನೆಗಳು ಶಾರ್ಕ್‌ ಕುರಿತ ಉಪನ್ಯಾಸ, ಸಾಕ್ಷ್ಯಚಿತ್ರ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ