ಆ್ಯಪ್ನಗರ

ಸಮಯವಿಲ್ಲದವರಿಗೆ ಫಿಟ್ನೆಸ್‌ ಸ್ನಾಕಿಂಗ್‌

ಬಿಡುವೇ ಇಲ್ಲದವರು ಮಧ್ಯೆ ತಮಗಾಗಿ ಸ್ವಲ್ಪ ಸಮಯ ಮಾಡಿಕೊಂಡರೂ ಅದು ಹೆಚ್ಚಿನದೇ ಆಗಿರುತ್ತದೆ. ಎಲ್ಲೋ ಪ್ರತಿದಿನ ಬೆಳಗ್ಗೆ ಮನೆಯ ನಾಯಿಯನ್ನು ವಾಕ್‌ ಕರೆದುಕೊಂಡು ಹೋದೆ ಅದೂ ಸಣ್ಣದೊಂದು ವರ್ಕೌಟೇ ಆಗಿರುತ್ತದೆ.

Agencies 5 May 2019, 12:46 pm
ನೀವು ಸಿಕ್ಕಾಪಟ್ಟೆ ಬಿಝಿ, ವರ್ಕೌಟ್‌ ಮಾಡಲೂ ಸಮಯವಿಲ್ಲ ಎನ್ನುವರಿಗೆ ಬಂದಿರುವ ಪರಿಕಲ್ಪನೆ 'ಫಿಟ್ನೆಸ್‌ ಸ್ನಾಕಿಂಗ್‌'. ಸ್ನಾಕ್‌ ಎಂಬ ಪದ ಮಾತ್ರಕ್ಕೆ ಫಿಟ್ನೆಸ್‌ಗಾಗಿ ಸ್ನಾಕ್ಸ್‌ ತಿನ್ನುವ ಮಂತ್ರವನ್ನೇನಾದರೂ ನೀಡಿದ್ದಾರಾ ಎಂಬ ಅನಿಸಿಕೆ ಮೂಡುವುದು ಸಹಜ. ಆದರೆ, ಇದು ಹಾಗಲ್ಲ. ದೊಡ್ಡ ಊಟಗಳ ನಡುವೆ ಸಣ್ಣ ತಿನಿಸುಗಳನ್ನು ತಿನ್ನುವ ಹಾಗೆ ಮಧ್ಯೆ ಮಧ್ಯೆ ಸಣ್ಣಸಣ್ಣ ಬಾಡಿ ಎಕ್ಸರ್‌ಸೈಝ್‌ ಮಾಡಿಕೊಂಡರೂ ಸಾಕೆನ್ನುವುದು ಇದರರ್ಥ.
Vijaya Karnataka Web Snacking


ಬಿಡುವೇ ಇಲ್ಲದವರು ಮಧ್ಯೆ ತಮಗಾಗಿ ಸ್ವಲ್ಪ ಸಮಯ ಮಾಡಿಕೊಂಡರೂ ಅದು ಹೆಚ್ಚಿನದೇ ಆಗಿರುತ್ತದೆ. ಎಲ್ಲೋ ಪ್ರತಿದಿನ ಬೆಳಗ್ಗೆ ಮನೆಯ ನಾಯಿಯನ್ನು ವಾಕ್‌ ಕರೆದುಕೊಂಡು ಹೋದೆ ಅದೂ ಸಣ್ಣದೊಂದು ವರ್ಕೌಟೇ ಆಗಿರುತ್ತದೆ. ಬೆಳಗ್ಗೆ ಏಳುತ್ತಲೇ ಮೈಯನ್ನು ಸ್ವಲ್ಪ ಬಗ್ಗಿಸಿ ಕೊಂಚ ಆ್ಯಕ್ಟಿವ್‌ ಮಾಡಿಕೊಂಡರೆ ಅದೂ ಸಣ್ಣಮಟ್ಟಿನ ವ್ಯಾಯಾಮವನ್ನು ನೀಡುತ್ತದೆ. ಇದಲ್ಲದೇ ಅಂಗಳದಲ್ಲಿ ಗಾರ್ಡನ್‌ ಇದ್ದರೆ ಅವಕ್ಕೆ ನೀರು ಹಾಕುವುದು, ಅಲ್ಲಿನ ಕಳೆ ಕೀಳುವುದನ್ನು ಮಾಡಬಹುದು. ಫೋನಿನಲ್ಲಿ ಮಾತಾಡುತ್ತಲೇ ಕೊಂಚ ಬಗ್ಗೆ ಕಳೆ ಕಿತ್ತರೆ ಮೈಗಿಷ್ಟು ವ್ಯಾಯಾಮ ಆಗಿಯೇ ಆಗುತ್ತದೆ.

ಒಂದೇ ಸಮನೆ ಕಂಪ್ಯೂಟರ್‌ನಲ್ಲಿ ಕುಳಿತು ಕೆಲಸ ಮಾಡುವವರು ಮಧ್ಯದಲ್ಲಿ ಪಕ್ಕದ ಕ್ಯಾಬಿನ್‌ನಲ್ಲಿರುವವರ ಬಳಿ ಮಾತಾಡುವ ನೆಪದಲ್ಲಿ ಎದ್ದು ಹೋದರೆ ಅದೂ ಒಂದು ಚಲನೆಯೇ. ಬೆಳಗ್ಗಿನ ಹೊತ್ತು ಮನೆಯಲ್ಲಿ ಫೋನ್‌ ಕಾಲ್‌ ಒಂದಕ್ಕೆ ಕಾಯುತ್ತಿದ್ದರೆ ಈ ನಡುವಿನಲ್ಲಿಯೇ ಒಂದೆರಡು ಯೋಗಾಸನಗಳನ್ನು ಮಾಡಿಕೊಳ್ಳಬಹುದು. ಟಿವಿ ನೋಡುತ್ತಲೇ ಜಂಪ್‌ ಮಾಡಬಹುದು... ಹೀಗೆ ಅಲ್ಲಲ್ಲಿ ಸಿಗುವ ಸಮಯ ಅಂತರಗಳನ್ನು ದೈಹಿಕ ಫಿಟ್ನೆಸ್‌ಗಾಗಿ ಬಳಸಿಕೊಳ್ಳವುದು ಮುಖ್ಯ ಎನ್ನುತ್ತಾರೆ ತಜ್ಞರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ