ಆ್ಯಪ್ನಗರ

ಗಾರ್ಡನ್‌ ಟಿಫ್ಸ್‌: ತೋಟದಲ್ಲಿ ಇರಲಿ ತುಂಬೆ ಗಿಡ

-ತುಂಬೆ ಹೂ ಪರಶಿವನಿಗೆ ಅತಿ ಪ್ರಿಯ ಎಂದೂ ಹೇಳಲಾಗುತ್ತದೆ ಇದನ್ನು ದ್ರೋಣ ಪುಷ್ಪ, ಚಿತ್ರಕ್ಷ ುಪ ಎಂದೂ ಕರೆಯಲಾಗುತ್ತದೆ...

Vijaya Karnataka 26 May 2018, 5:00 am
-ತುಂಬೆ ಹೂ ಪರಶಿವನಿಗೆ ಅತಿ ಪ್ರಿಯ ಎಂದೂ ಹೇಳಲಾಗುತ್ತದೆ. ಇದನ್ನು ದ್ರೋಣ ಪುಷ್ಪ, ಚಿತ್ರಕ್ಷ ುಪ ಎಂದೂ ಕರೆಯಲಾಗುತ್ತದೆ. ಬಿಳಿ ಹೂ ಶ್ರೇಷ್ಠವೆಂದು ಹೇಳಲಾಗುತ್ತದೆ. ತುಂಬೆ ಹೂ ಕೇವಲ ಬಿಳಿ ಮಾತ್ರವಲ್ಲದೆ ಕೆಂಪು, ಪಿಂಕ್‌ ಹಾಗೂ ಕಾಮನ ಬಿಲ್ಲಿನ ಎಲ್ಲಾ ಬಣ್ಣದಲ್ಲೂ ಕಂಡು ಬರುತ್ತದೆ.
Vijaya Karnataka Web thumbe


-ಅಲಂಕಾರಿಕ ಹೂ ಬಿಡುವ ತುಂಬೆ ಗಿಡವನ್ನು ಸೂಕ್ಷ ್ಮ ಆರೈಕೆಯೊಂದಿಗೆ ಹೂ ತೋಟದಲ್ಲಿ , ಟೆರೆಸ್‌ ಗಾರ್ಡನ್‌ನಲ್ಲಿ ಬೆಳೆಸಬಹುದು.

-ಗಿಡವು ಚಿಕ್ಕದಿರುವಾಗ ಸಣ್ಣ ಎಲೆಗಳನ್ನು ಹೊಂದಿದ್ದು ಪುಟ್ಟ ಬಿಳಿ ಹೂಗಳನ್ನು ಬಿಡುತ್ತದೆ ಇದರ ಎಲೆ ಹಾಗೂ ಹೂಗಳು ಉತ್ತಮ ಔಷಧಿ ಗುಣವನ್ನು ಹೊಂದಿವೆ.

-ಈ ಗಿಡಕ್ಕೆ ಸ್ವಲ್ಪವೇ ಸ್ಥಳದ ಅವಶ್ಯಕತೆ ಇರುವುದರಿಂದ ಗಿಡಗಳನ್ನು ಹೂ ತೋಟದ ಯಾವ ಭಾಗದಲ್ಲಿಯಾದರೂ ಸುಲಭವಾಗಿ ಬೆಳೆಸಬಹುದು.

-ಅಲಂಕಾರಿಕ ಗಿಡವಾಗಿ ಬೆಳೆಸುವುದಾದರೆ ತೋಟದ ಬಾರ್ಡರ್‌ ಗಿಡಗಳಾಗಿ ಬೆಳೆಸಬಹುದು. ಟೆರೆಸ್‌ನಲ್ಲಿ ಸಣ್ಣ ಪಾಟ್‌ಗಳಲ್ಲಿಯೂ ಬೆಳೆಯ ಬಹುದು. ಹೂಗಳು ಗೊಂಚಲಾಗಿ ಬೆಳೆಯುವುದರಿಂದ ಗಿಡ ಬಾಗದಂತೆ ನೋಡಿಕೊಳ್ಳಬೇಕು.

-ಈ ಗಿಡದ ಕಾಂಡ, ಬೇರು ಅತಿ ಸೂಕ್ಷ ್ಮವಾಗಿದ್ದು ನೀರು ಹಾಕುವಾಗ ಜಾಗರೂಕತೆ ವಹಿಸುವುದು ಅಗತ್ಯ. ಬೇರಿನ ಮೇಲ್ಭಾಗದ ಮಣ್ಣು ಕೊಚ್ಚಿ ಹೋಗದಂತೆ ಗಮನ ಹರಿಸಬೇಕು.

-ಹೂಗಳು ಪುಟ್ಟದಾಗಿರುವುದರಿಂದ ಗಿಡದಿಂದ ಬಿಡಿಸುವಾಗ ಸೂಕ್ಷ ್ಮವಾಗಿ ಬಿಡಿಸಬೇಕು. ಇಲ್ಲವಾದರೆ ಕಾಂಡ ಮುರಿದು ಗಿಡ ಹಾಳಾಗುತ್ತದೆ.

ಪಾರುಸುಧಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ