ಆ್ಯಪ್ನಗರ

ಮಳೆಗಾಲಕ್ಕೆ ಅವಶ್ಯವಾದ ವಿಶೇಷ ಡಿಕೋರ್‌

ಮಾನ್ಸೂನ್‌ ಸಮಯದಲ್ಲಿ ಬ್ರೈಟ್‌ ಕಲರ್‌ಗಳ ಬಳಕೆ ಹಾಗೂ ಆ ಮೂಲಕ ಉಲ್ಲಾಸದಾಯಕ ವಾತಾವರಣ ಮನೆಯೊಳಗೆ ನಿರ್ಮಾಣ ಮಾಡಬೇಕು. ಹೀಗಾಗಿ ಬೇಸಿಗೆ ಕಳೆದು ಮಳೆಗಾಲ ಕಾಲಿಡುವಾಗ ಮನೆಯ ಬಣ್ಣಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

Agencies 6 Jun 2019, 12:41 pm
ಇನ್ನೇನು ಮಳೆಗಾಲ ಅಡಿಯಿರಿಸುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಮನೆಯಲ್ಲಿ ಸಹಜವಾಗಿಯೇ ಬೆಳಕು ಕಡಿಮೆಯಿರುತ್ತದೆ. ಕೃತಕ ಲೈಟಿಂಗ್‌ ಬದಲು ಮನೆಯನ್ನು ಬ್ರೈಟ್‌ ಮಾಡಲು ಸಾಕಷ್ಟು ಅವಕಾಶಗಳಿವೆ.
Vijaya Karnataka Web home


ಮಾನ್ಸೂನ್‌ ಕಾಲಿಡುತ್ತಿದ್ದಂತೆಯೇ ಮನೆಯೊಳಗೆ ಮಂದ ಬೆಳಕು. ಇದರಿಂದ ಒಂದಿಷ್ಟು ಸೋಮಾರಿತನದ ಮನಸ್ಥಿತಿ ಮೂಡಿದರೂ ಆಶ್ಚರ್ಯವಿಲ್ಲ. ಹೀಗಾಗಿ ಮಾನ್ಸೂನ್‌ ಸಮಯದಲ್ಲಿ ಬ್ರೈಟ್‌ ಕಲರ್‌ಗಳ ಬಳಕೆ ಹಾಗೂ ಆ ಮೂಲಕ ಉಲ್ಲಾಸದಾಯಕ ವಾತಾವರಣ ಮನೆಯೊಳಗೆ ನಿರ್ಮಾಣ ಮಾಡಬೇಕು. ಹೀಗಾಗಿ ಬೇಸಿಗೆ ಕಳೆದು ಮಳೆಗಾಲ ಕಾಲಿಡುವಾಗ ಮನೆಯ ಬಣ್ಣಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಲೀವಿಂಗ್‌ ರೂಂ:
ಲೀವಿಂಗ್‌ ರೂಂ ಬ್ರೈಟ್‌ ಮಾಡಬೇಕಾದರೆ ಗಾಢ ಕೆಂಪು, ನೀಲಿ ಅಥವಾ ಹಳದಿ ಬಣ್ಣಗಳನ್ನು ಬಲಿಯಬೇಕು. ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಖಚಿತವಾಗಿಯೂ ಲೆದರ್‌ ಫರ್ನಿಚರ್‌ಗಳಿಗೆ ಗುಡ್‌ಬೈ ಹೇಳಬೇಕು. ಯಾಕೆಂದರೆ ಅವುಗಳು ತೇವಾಂಶ ಹೀರಿಕೊಳ್ಳುತ್ತವೆ. ಹೀಗಾಗಿ ಮಾಮೂಲಿ ಸೋಫಾ ಮತ್ತು ಕಲರ್‌ ಕುಶನ್‌ ಬಳಸಬೇಕು.

ಅಡುಗೆ ಮನೆ:
ಇನ್ನು ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಆದರಲ್ಲೂ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆಡುಗೆ ಮಾಡುವ ಮೂಡ್‌ನ್ನು ಬದಲಾಯಿಸುವ ಸಾಮರ್ಥ್ಯ ಇದಕ್ಕಿರುತ್ತದೆ. ಹೀಗಾಗಿ ವಿನೂತನ ವಿನ್ಯಾಸಗಳತ್ತ ಗಮನ ಹರಿಸುವುದು ಉತ್ತಮ. ಅದಕ್ಕಾಗಿ ಚಿಕ್ಕ ಕಟ್ಲೇರಿ ಸಾಮಗ್ರಿ, ಫ್ಯಾನ್ಸಿ ಡೈನಿಂಗ್‌ ಸೆಟ್‌ ಬಳಸಬಹುದು. ಡೈನಿಂಗ್‌ ಟೇಬಲ್‌ನ ಮೇಲೆ ಹಾಸುವ ಬಟ್ಟೆ ತಿಳಿ ಬಣ್ಣದ್ದಾಗಿರಲಿ.

ಇನ್ನು ಡೋರ್‌ಮ್ಯಾಟ್‌ ಕೂಡ ಮಳೆಗಾಲದಲ್ಲಿ ಮನೆಯ ಸೌಂದರ್ಯ ಹೆಚ್ಚಿಸಲು ನೆರವಾಗುತ್ತವೆ. ದೂಳು, ಮಣ್ಣು, ಕಾಲಿನ ತೇವಾಂಶವನ್ನು ಸ್ವಚ್ಛವಾಗಿ ತೆಗೆಯುವಂತಹ ಡೋರ್‌ಮ್ಯಾಟ್‌ ಬಳಕೆ ಮಾಡಿ. ಬೆಳಕು ಕಡಿಮೆ ಹರಿದು ಬರುವ ಹಿನ್ನೆಲೆಯಲ್ಲಿ ಕಿಟಕಿಗಳಿಗೆ ದಪ್ಪವಾದ ಹಾಗೂ ಗಾಢ ವರ್ಣದ ಕರ್ಟನ್‌ಗಳು ಬೇಡ. ತಿಳಿ ಹಸಿರು, ತಿಳಿ ಹಳದಿ ಅಥವಾ ಬಿಳಿ ಬಣ್ಣದ ಕರ್ಟನ್‌ಗಳು ಮನೆಯೊಳಗೆ ನೈಸರ್ಗಿಕ ಬೆಳಕು ಬರುವಂತೆ ಮಾಡುತ್ತದೆ.

ಕರ್ಟನ್‌ ಬದಲು:
ಮೊದಲೇ ಸೂರ್ಯನ ಬೆಳಕು ಕಡಿಮೆಯಿರುತ್ತದೆ. ಅಂತಹ ಸಂದರ್ಭದಲ್ಲಿ ದಪ್ಪವಾದ ಕರ್ಟನ್‌ಗಳನ್ನು ಹಾಕಿದರೆ ಆಗ ಬೆಳಕಿಗೆ ಇನ್ನಷ್ಟು ತಡೆಯಾಗುತ್ತದೆ. ಮಳೆಗಾಲಕ್ಕೆ ಹೊಂದುವ ರೀತಿಯ ಬಣ್ಣಗಳಾದ ಹಸಿರು, ಅಕ್ವಾ, ತಿಳಿ ಹಳದಿ ಮೊದಲಾದ ಬಣ್ಣಗಳ ಪರದೆಗಳನ್ನು ಬಳಸಬೇಕು. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಒದ್ದೆಯಾಗುವ ದಪ್ಪ ಕರ್ಟನ್‌ಗಳನ್ನು ಒಣಗಿಸುವುದು ಕೂಡ ಕಷ್ಟಕರವಾಗುತ್ತದೆ.

ಸುಮಧುರ ಶಬ್ದ:
ಮಳೆಗಾಲದಲ್ಲಿ ಗಾಳಿ ಸಾಮಾನ್ಯ. ಈ ಗಾಳಿಯು ನಿಮ್ಮ ಮನೆಯ ಮೂಡ್‌ ಬದಲಾಯಿಸಲು ನೆರವಾಗುತ್ತದೆ. ಇದಕ್ಕಾಗಿ ಕಿರುಗಂಟೆಗಳನ್ನು ನೇತು ಹಾಕಬೇಕು. ಇದು ಹೊರಡಿಸುವ ನಿನಾದ ಮನೆ ತುಂಬಿ ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತದೆ. ಈಗಂತೂ ಗಂಟೆಗಳು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತದೆ. ನಮ್ಮ ಆಯ್ಕೆಗಳು ಕೂಡ ಸಾಕಷ್ಟಿರುತ್ತವೆ. ಮಳೆಗಾಲಕ್ಕೆ ಪ್ರತ್ಯೇಕವಾದ ಫರ್ನಿಚರ್‌ಗಳು ಕೂಡ ಇವೆ.

ಒಂದು ರೀತಿಯ ಈಸಿಚೇರ್‌ನಂತಿರುವ ಇದರಲ್ಲಿ ಹೊರಗೆ ಬೀಳುವ ಮಳೆಯನ್ನು ಸವಿಯುತ್ತಾ ಪುಸ್ತಕ ಓದಬಹುದು ಇಲ್ಲವೇ ಬಿಸಿಯಾಗ ಕಾಫಿ-ಟೀ ಕುಡಿದು ಎಂಜಾಯ್‌ ಮಾಡಬಹುದು. ಇನ್ನು ನಾನಾ ಆಕಾರದ ಕ್ಯಾಂಡ್ಲಿಯರ್‌, ಅಗರಬತ್ತಿ ಸೇರಿದಂತೆ ಸುವಾಸನೆ ಬೀರುವ ವಸ್ತುಗಳು ಮನೆಯಲ್ಲಿರಲಿ. ಇವು ಮಳೆಗಾಲದ ತೇವಾಂಶ ಸೃಷ್ಟಿಯಾಗುವ ಒಂದು ರೀತಿಯ ಅನಪೇಕ್ಷಿತ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ