ಆ್ಯಪ್ನಗರ

ನಾಯಿ ಸಾಕುತ್ತಿದ್ದೀರಾ? ಕೆಲವು ಸಲಹೆಗಳು

​ನಾಯಿ ಸಾಕುವಾಗ ಕೆಲವೊಂದು ಎಚ್ಚರಿಕೆ ಅಗತ್ಯ. ನಾಯಿಯ ಲಾಲನೆ ಪಾಲನೆ ಕುರಿತಂತೆ ಕೆಲವೊಂದು ಟಿಪ್ಸ್ ಇಲ್ಲಿದೆ.​

Agencies 7 May 2019, 4:22 pm
ಮನುಷ್ಯನ ಜತೆ ಅತ್ಯಂತ ಹೆಚ್ಚಿನ ಒಡನಾಟ, ಆಪ್ತತೆಯಿಂದ ಬೆಳೆಯುವುದೆಂದರೆ ಅದು ನಾಯಿಗಳು. ನಗರದಲ್ಲಿ ಕೂಡ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಯಿ ಸಾಕುತ್ತಾರೆ.
Vijaya Karnataka Web Pet


ನಾಯಿ ಸಾಕುವಾಗ ಕೆಲವೊಂದು ಎಚ್ಚರಿಕೆ ಅಗತ್ಯ. ನಾಯಿಯ ಲಾಲನೆ ಪಾಲನೆ ಕುರಿತಂತೆ ಕೆಲವೊಂದು ಟಿಪ್ಸ್ ಇಲ್ಲಿದೆ.

ನಾಯಿಗೆ ಎಣ್ಣೆ ಪದಾರ್ಥ ನೀಡಬೇಡಿ
ನಾಯಿಗಳನ್ನು ಸಾಕುವಾಗ ಅವುಗಳ ಆಹಾರ ಪದ್ಧತಿಯ ಮೇಲೆ ಸ್ವಲ್ಪ ಗಮನ ನೀಡಬೇಕು. ಇಲ್ಲವಾದರೆ ಅಪಾಯ ತಪ್ಪಿದ್ದಲ್ಲ.

ನಾಯಿಗಳಿಗೆ ಯಾವುದೇ ಕಾರಣಕ್ಕೂ ಎಣ್ಣೆಯ ಅಂಶವಿರುವ ಆಹಾರ ನೀಡಬಾರದು. ಉದಾಹರಣೆಗೆ ಚಿತ್ರಾನ್ನ, ಪುಳಿಯೊಗರೆ, ಉಪ್ಪಿಟ್ಟು ಮೊದಲಾದ ಆಹಾರ ಬೇಡ. ಯಾಕೆಂದರೆ ಎಣ್ಣೆ ಅಂಶವು ಅವುಗಳ ಮಿದುಳಿನಲ್ಲಿ ಹೊಸದೊಂದು ಬಗೆಯ ವಿಷಕಾರಿ ರಾಸಾಯನಿಕ ಅಂಶವನ್ನು ಉತ್ಪತ್ತಿ ಮಾಡುತ್ತದೆ. ಇದೇ ಕಾರಣಗಳಿಂದ ನಾಯಿಗೆ ಹುಚ್ಚು ಹಿಡಿಯುತ್ತದೆ.

ಚಾಕೋಲೆಟ್‌, ಐಸ್‌ಕ್ರೀಮ್‌ ನೀಡಬಾರದು. ಯಾಕೆಂದರೆ ಚಾಕೋಲೆಟ್‌ನಲ್ಲಿರುವ ಕೋಕೋ ಅಂಶವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಸೃಷ್ಟಿ ಮಾಡುತ್ತದೆ.

ಮೊಟ್ಟೆ, ಮೀನು, ಮಾಂಸವನ್ನು ಬೇಯಿಸಿ ಕೊಡಬೇಕು. ಹಸಿಯಾಗಿ ಯಾವ ಮಾಂಸವನ್ನು ತಿನ್ನಲು ಕೊಡಬೇಡಿ. ಯಾಕೆಂದರೆ ಣಾಯಿಯ ಹೊಟ್ಟೆಯಲ್ಲಿ ಲಾಡಿ ಹುಳು ಆಗುವ ಸಂಭವಿರುತ್ತದೆ.

ಯಾವುದೇ ಆಹಾರವನ್ನು ನೀಡಿದರು ಅದರಲ್ಲಿ ಖಾರ, ಉಪ್ಪು, ಹುಳಿ ಅಂಶ ಸಾಧ್ಯವಾದಷ್ಟು ಕಡಿಮೆ ಕೊಡಬೇಕು. ಈ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ನಾಯಿ ಬಹು ಬೇಗ ಚುರುಕಾಗುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ