ಆ್ಯಪ್ನಗರ

ನಮ್ಮ ಕರ್ನಾಟಕ: ಕರ್ನಾಟಕ ಏಕೀಕರಣ ಸಮಿತಿ

ಬೆಳಗಾವಿಯಲ್ಲಿ ಕಾಂಗ್ರೆಸ್‌ ಸಮಾವೇಶ 1924ರಲ್ಲಿ ನಡೆಯಿತು...

Vijaya Karnataka 30 May 2018, 5:00 am
ಬೆಳಗಾವಿಯಲ್ಲಿ ಕಾಂಗ್ರೆಸ್‌ ಸಮಾವೇಶ 1924ರಲ್ಲಿ ನಡೆಯಿತು. ಇಲ್ಲಿ ಕರ್ನಾಟಕದ ಏಕೀಕರಣದ ಕುರಿತಾದ ಗಂಭೀರ ಚಿಂತನೆಗಳು ನಡೆಯುತ್ತಿದ್ದಂತೆಯೇ ಬೆಳಗಾವಿಯಲ್ಲಿ ಸಿದ್ದಪ್ಪ ಕಾಂಬ್ಳಿ ಎನ್ನುವವರ ಅಧ್ಯಕ್ಷತೆಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಮಾವೇಶ ನಡೆಯಿತು. ನಂತರ ಎಸ್‌. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಮಿತಿಯು ಕರ್ನಾಟಕದ ವಿವಿಧೆಡೆ ವರ್ಷಕ್ಕೆ ಎರಡು ಬಾರಿ ಸಭೆ ನಡೆಸಿತು. 1927ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕರ್ನಾಟಕ, ಆಂಧ್ರ ಮತ್ತು ಸಿಂಧ್‌ ಪ್ರಾಂತ್ಯಗಳ ಬಗ್ಗೆ ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತೆಂದು ಹೇಳಲಾಗಿದೆ.
Vijaya Karnataka Web namma karnataka ekikarna samithi
ನಮ್ಮ ಕರ್ನಾಟಕ: ಕರ್ನಾಟಕ ಏಕೀಕರಣ ಸಮಿತಿ


ಕರ್ನಾಟಕ ಏಕೀಕರಣ ಮಹಾ ಸಮಿತಿ

1946ರಲ್ಲಿ ಏಕೀಕರಣ ಸಮಿತಿಯ ಹತ್ತನೇ ಸಮಾವೇಶ ನಡೆಯಿತು. ಅದನ್ನು ಉದ್ಘಾಟಿಸಿದ ವಲ್ಲಭಬಾಯಿ ಪಟೇಲರ ಮಾತುಗಳು ಇನ್ನಷ್ಟ ಆಶಾಕಿರಣವನ್ನು ಮೂಡಿಸಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಕ್ಷಣವೇ ಚದುರಿಹೋದ ಕನ್ನಡ ನಾಡು ಒಂದಾಗುವುದೆಂಬ ಭರವಸೆಯನ್ನು ಪಟೇಲರು ನೀಡಿದ್ದರು. ನಿಜಲಿಂಗಪ್ಪನವರನ್ನು ಕನ್ನಡ ಏಕೀಕರಣ ಮಹಾಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಜಂಟಿ ಕಾರ್ಯದರ್ಶಿಗಳಾಗಿದ್ದ ಅಂದಾನಪ್ಪ ದೊಡ್ಡಮೇಟಿ ಮತ್ತು ಮಂಗಳವೇದ ಶ್ರೀನಿವಾಸರಾವ್‌ರವರನ್ನೊಡಗೂಡಿ ಕರ್ನಾಟಕದ ಸ್ವಾತಂತ್ರ್ಯ ಮತ್ತು ಏಕೀಕರಣಕ್ಕಾಗಿ ಶ್ರಮಪಟ್ಟ ನಿಜಲಿಂಗಪ್ಪನವರ ಕೊಡುಗೆಗಳು ಅವಿಸ್ಮರಣೀಯವೆನ್ನುವುದೂ ಓದುಗರು ಗಮನಿಸಬೇಕಾಗುತ್ತದ. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಮಹಾಸಮಿತಿಯು ಕರ್ನಾಟಕ ಏಕೀಕರಣ ಸಂಘವೆಂದು ಮರು ಹೆಸರು ಪಡೆಯಿತು. 1946ರಲ್ಲಿ ಮುಂಬಯಿಯಲ್ಲಿ ನಡೆದ ಸಮಾವೇಶದಲ್ಲಿ ಚದುರಿದ್ದ ಕನ್ನಡದ ಜನತೆಯನ್ನು ಒಗ್ಗೂಡಿಸುವದು ಮಾತ್ರವಲ್ಲ, ಹಲವಾರು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದರ ಬಗ್ಗೆಯೂ ಚರ್ಚೆಗಳಾದವು. ಮುಂದೆ ಈ ಸಂಘವು ಹಲವು ಸಭೆಗಳನ್ನು ದಾವಣಗೆರೆ, ಕಾಸಗೋಡು ಮೊದಲಾದ ಪ್ರದೇಶಗಳಲ್ಲಿ ನಡೆಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ