ಆ್ಯಪ್ನಗರ

ನಮ್ಮ ಕರ್ನಾಟಕ: ಸವದತ್ತಿ ಯಲ್ಲಮ್ಮ ದೇವಸ್ಥಾನ

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಮುಖವಾದದ್ದು...

Vijaya Karnataka 12 Jul 2018, 5:00 am
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಮುಖವಾದದ್ದು. ಈ ದೇವಾಲಯ ಬೆಳಗಾವಿ ಜಿಲ್ಲಾ ಕೇಂದ್ರದಿಂದ 98 ಕಿ.ಮೀ. ಹಾಗೂ ಸವದತ್ತಿಯಿಂದ 5 ಕಿ.ಮೀ. ದೂರದಲ್ಲಿದೆ. ಗುಡ್ಡದ ಮೇಲಿನ ಕೊಳದಲ್ಲಿ ನಿರ್ಮಿಸಿದ ಪ್ರಾಚೀನ ಭವ್ಯ ದೇವಾಲಯದಲ್ಲಿ ತಾಯಿ ರೇಣುಕಾ ಯಲ್ಲಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನೋಡಲು ಆಕರ್ಷಕವಾಗಿರುವ ಈ ದೇವಾಲಯ ಪ್ರೇಕ್ಷಣೀಯ ಸ್ಥಳವಾಗಿದೆ.
Vijaya Karnataka Web savadatti


ಸೊಗಲ ಸೋಮೇಶ್ವರ : ಬೈಲ ಹೊಂಗಲದಿಂದ 16 ಕಿ.ಮೀ ದೂರದಲ್ಲಿ ಸೊಗಲ ಸೋಮೇಶ್ವರ ಜಿಲ್ಲೆಯ ಪ್ರಸಿದ್ಧ ಯಾತ್ರಾ ತಾಣವಾಗಿದೆ. ಇಲ್ಲಿ ವರ್ಷಕ್ಕೆ ಹನ್ನೆರಡು ತಿಂಗಳೂ ಸುರಿಯುವ ಒಂದು ಧಾರೆ ಇದ್ದು ಇದರಲ್ಲಿ ಸ್ನಾನ ಮಾಡಿ ಯಾತ್ರಾರ್ಥಿಗಳು ಸೋಮೇಶ್ವರನ ದರ್ಶನ ಮಾಡುವರು.

ಶಿರಸಂಗಿ: ಸವದತ್ತಿ ಮತ್ತು ರಾಮದುರ್ಗ ರಸ್ತೆಯಲ್ಲಿನ ಶಿರಸಂಗಿ, ಕಾಳಿಕಾ ದೇವಿಯ ಪುಣ್ಯ ಸ್ಥಳ. ಶಿರಸಂಗಿ ಗ್ರಾಮದ ಬಸ್‌ ನಿಲ್ದಾಣದಿಂದ 4 ಕಿ.ಮೀ. ದೂರ ಕ್ರಮಿಸಿದರೆ ಬೆಟ್ಟದ ತಪ್ಪಲಿನಲ್ಲಿ ಪುರಾತನ ಕಾಳಿಕಾ ದೇವಿಯ ದೇವಾಲಯವನ್ನು ಕಾಣಬಹುದು.

ಹಲಸಿ: ಹಲಸಿಯು ಹಿಂದೆ ಕದಂಬರ ರಾಜಧಾನಿಯಾಗಿತ್ತು. ದೇವಾಲಯಗಳು ಮತ್ತು ಬಸದಿಗಳಿಂದ ಕೂಡಿದ ಭುವನ ರಥ ನರಸಿಂಹ ದೇವಾಲಯವು ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿದೆ. ಸಮೀಪದಲ್ಲಿಯೇ ಇರುವ ನವಿಲು ತೀರ್ಥ, ಹಲಸಿ ಗ್ರಾಮ ಯೆಲ್ಲೂರುಗಢ, ಪ್ರಸಿದ್ಧ ಸ್ಥಳಗಳನ್ನು ಕಾಣಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ