ಆ್ಯಪ್ನಗರ

ಮನೆಯೊಳಗೆ ಮಾಲಿನ್ಯ ನಿಯಂತ್ರಿಸಿ

ಗಾಳಿಯನ್ನು ಶುದ್ಧಗೊಳಿಸುವ ಗಿಡಗಳ ಜೊತೆಗೆ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಿದರೆ ನೆಗೆಟಿವ್‌ ಶಕ್ತಿ ಹೊರ ಹೋಗುವುದರ ಜೊತೆಗೆ ಮನೆಯೊಳಗಿನ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ.

Agencies 25 May 2019, 2:11 pm
ಮನೆಯ ಹೊರಗಿನ ವಾತಾವರಣ ಮಾಲಿನ್ಯವನ್ನು ತಡೆಯುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ಒಳಗಡೆ ಅದನ್ನು ಕಡಿಮೆ ಮಾಡಲು ಸಾಧ್ಯವಿದೆ. ಗಾಳಿಯನ್ನು ಶುದ್ಧಗೊಳಿಸುವ ಗಿಡಗಳ ಜೊತೆಗೆ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಿದರೆ ನೆಗೆಟಿವ್‌ ಶಕ್ತಿ ಹೊರ ಹೋಗುವುದರ ಜೊತೆಗೆ ಮನೆಯೊಳಗಿನ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ.
Vijaya Karnataka Web Home


ಉಪ್ಪು ನೀರು: ಮನೆಯ ನೆಲವನ್ನು ಒರೆಸುವ ಸಂದರ್ಭದಲ್ಲಿ ನೀರಿಗೆ ಒಂದಿಷ್ಟು ಉಪ್ಪನ್ನು ಸೇರಿಸಿ. ಮರದ ಫ್ಲೋರಿಂಗ್‌ ಇದ್ದರೂ ಏನೂ ತೊಂದರೆಯಿಲ್ಲ. ಇದರಿಂದ ಮರ ಮತ್ತಷ್ಟು ಹೊಳಪು ಪಡೆದುಕೊಳ್ಳುತ್ತದೆ. ಟೈಲ್‌ ಫ್ಲೋರಿಂಗ್‌ ಆಗಿದ್ದರೂ ಇದರಿಂದ ಫ್ರೆಶ್‌ನೆಸ್‌ ಬಂದು ದೀರ್ಘ ಸಮಯ ಶುಚಿಯಾಗಿರುತ್ತದೆ.

ಗಿಡಗಳ ನೆರವು:
ನಿಸರ್ಗವು ತನ್ನನ್ನು ಸಂರಕ್ಷಿಸಿಕೊಳ್ಳಲು ತನ್ನದೇ ಆದ ದಾರಿಯನ್ನು ಕಂಡುಕೊಂಡಿದೆ. ಮನೆಯಲ್ಲಿ ಗಾಳಿಯನ್ನು ಶುಚಿಗೊಳಿಸುವ ಗಿಡಗಳನ್ನು ಇಟ್ಟರೆ ಒಳಗಿನ ಮಾಲಿನ್ಯ ಪ್ರಮಾಣ ಕಡಿಮೆಯಾಗುತ್ತದೆ. ಮನಿ ಪ್ಲಾಂಟ್‌, ಸ್ನೇಕ್‌ ಪ್ಲಾಂಟ್‌, ಅಲೋವೆರಾ, ಚೈನೀಸ್‌ ಎವರ್‌ಗ್ರೀನ್‌, ಪೀಸ್‌ ಲಿಲ್ಲಿ ಮೊದಲಾದ ಗಿಡಗಳನ್ನು ಇಟ್ಟರೆ ನೋಡಲು ಚೆಂದ ಕಾಣುವುದರ ಜೊತೆಗೆ ಮಾಲಿನ್ಯವೂ ಇಳಿಯುತ್ತದೆ.

ತುಳಸಿ ಗಿಡ:
ಅಡುಗೆ ಮನೆಯಲ್ಲಿ ಎರಡು ತುಳಸಿ ಗಿಡಗಳನ್ನು ಇಡಿ. ಇದು ನೆಗೆಟಿವ್‌ ಎನರ್ಜಿಯನ್ನು ಹೋಗಲಾಡಿಸುವುದರ ಜೊತೆಗೆ ಉಸಿರಾಟದ ಸಮಸ್ಯೆಗೂ ನಿವಾರಣೆ ನೀಡುತ್ತದೆ ಎಂಬುದು ಸಾಬೀತಾಗಿದೆ. ಜೊತೆಗ ಆಧ್ಯಾತ್ಮಿಕವಾಗಿಯೂ ಇದಕ್ಕೆ ತನ್ನದೇ ಆದ ಮಹತ್ವವಿದೆ.

ಹೂವಿನ ಚಿತ್ರ: ಅಡುಗೆ ಮನೆಯಿಂದ ಇಡೀ ಮನೆಗೆ ಚೈತನ್ಯ ಸಿಗುತ್ತದೆ. ಆದ್ದರಿಂದ ಇಲ್ಲಿ ಬ್ರೈಟ್‌ ಮತ್ತು ಪಾಸಿಟಿವ್‌ ಆಗಿರುವ ಚಿತ್ರ ಪಟಗಳನ್ನು ಹಾಕಬೇಕು. ಸಾಧ್ಯವಾದಷ್ಟು ಬ್ರೈಟ್‌ ಕಲರ್‌ನ ಹೂವಿನ ಚಿತ್ರಕ್ಕೆ ಪ್ರಾಧಾನ್ಯತೆ ನೀಡಬೇಕು.

ಅನವಶ್ಯಕ ವಸ್ತು:
ಮನೆಯಲ್ಲಿ ನಿರುಪಯುಕ್ತವಾಗಿರುವ ಚಾರ್ಜರ್‌, ವೈರ್‌, ಲ್ಯಾಪ್‌ಟಾಪ್‌ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್‌ ವಸ್ತುಗಳು ಇರಬಾರದು. ಅವು ನೆಗೆಟಿವ್‌ ಎನರ್ಜಿಯನ್ನು ಹೊರ ಸೂಸುತ್ತವೆ. ಇವುಗಳನ್ನು ನಿವಾರಿಸುವ ಮೂಲಕ ಪಾಸಿಟಿವ್‌ ಎನರ್ಜಿ ಮನೆಯಲ್ಲಿ ಓಡಾಡುವಂತೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ