ಡೈಲಿ ಯೋಗ: ಇಟ್ಟಿಗೆಗಳ ಸಹಾಯದಿಂದ ಭುಜಪೀಡಾಸನ
ವಿವರಣೆ:- ಜಮಖಾನವನ್ನು ನೆಲದ ಮೇಲೆ ಹಾಸಿ. ನಂತರ ಎರಡು ಇಟ್ಟಿಗೆಗಳನ್ನು ಒಂದಕ್ಕೊಂದು ಅಭಿಮುಖವಾಗಿ ಉದ್ದವಾಗಿ ಇಡಬೇಕು. ಈಗ ಎರಡೂ ಇಟ್ಟಿಗೆಗಳ ಮಧ್ಯದಲ್ಲಿ ನಿಂತು ಮುಂದೆ ಬಾಗಿ ಎರಡೂ ಹಸ್ತಗಳನ್ನು ಇಟ್ಟಿಗೆಯ ಮೇಲೆ ಊರಬೇಕು. ನಂತರ ಕಾಲುಗಳನ್ನು ಹಿಂದಿನಿಂದ ರಟ್ಟೆಯ ಮೇಲೆ ತೆಗೆದುಕೊಂಡು ಪಾದಗಳನ್ನು ಒಂದಕ್ಕೊಂದ ಸೇರಿಸಿ ಮೇಲೆ ಎತ್ತಬೇಕು. ಬೆನ್ನನ್ನು ಸ್ವಲ್ಪ ಮುಂದೆ ಬಾಗಿಸಿರಬೇಕು. ಮೊಣಕೈಗಳನ್ನು ಸ್ವಲ್ಪ ಮಡಚಿರಬೇಕು. ದೃಷ್ಟಿ ಮುಂದೆ ಇರಲಿ. ಈ ಆಸನದಲ್ಲಿ ಸಹಜ ಉಸಿರಾಟಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ವಾಪಸ್ ಬರುವುದು.
ಉಪಯೋಗ:- ಶರೀರವನ್ನು ಮೇಲೆ ಎತ್ತಲು ಇಟ್ಟಿಗೆಗಳು ಸಹಾಯವಾಗುವವು. ಕೈಗಳು ಮತ್ತು ಭುಜಗಳಿಗೆ ಶಕ್ತಿ ಬರುವುದು. ನಾಭಿ ಮತ್ತು ಪಕ್ಕೆಲುಬುಗಳಲ್ಲಿನ ಕೊಬ್ಬಿನಂಶ ಕರಗುವುದು.