ಆ್ಯಪ್ನಗರ

ಡೈಲಿ ಯೋಗ: ದಿಂಬಿನ ಸಹಾಯದಿಂದ ಮಂಡೂಕಾಸನ

ಜಮಖಾನವನ್ನು ನೆಲದ ಮೇಲೆ ಹಾಸಬೇಕು ನಂತರ ಜಮಖಾನದ ಮಧ್ಯದ ಭಾಗದಲ್ಲಿ ದಿಂಬನ್ನು ಉದ್ದವಾಗಿಡಬೇಕು ದಿಂಬಿಗೆ ಅಭಿಮುಖವಾಗಿ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.

Vijaya Karnataka 10 Apr 2018, 5:00 am
ವಿವರಣೆ :- ಜಮಖಾನವನ್ನು ನೆಲದ ಮೇಲೆ ಹಾಸಬೇಕು. ನಂತರ ಜಮಖಾನದ ಮಧ್ಯದ ಭಾಗದಲ್ಲಿ ದಿಂಬನ್ನು ಉದ್ದವಾಗಿಡಬೇಕು. ದಿಂಬಿಗೆ ಅಭಿಮುಖವಾಗಿ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಹಿಂದೆ ಹಿಮ್ಮಡಿಗಳನ್ನು ಬಿಡಿಸಿ ಕಾಲಿನ ಹೆಬ್ಬೆರಳುಗಳನ್ನು ಒಂದಕ್ಕೊಂದು ತಾಗಿಸಿ. ಹಾಗೆಯೇ ಮಂಡಿಗಳನ್ನು ಅಗಲ ಮಾಡಿ ದಿಂಬನ್ನು ಎರಡೂ ತೊಡೆಗಳ ಮಧ್ಯದ ಭಾಗದಲ್ಲಿ ತೊಡೆಯ ಮೂಲದ ತನಕ ತೆಗೆದುಕೊಳ್ಳಬೇಕು. ನಂತರ ನಿಧಾನವಾಗಿ ಮುಂದೆ ಬಾಗಿ ಹೊಟ್ಟೆಯನ್ನು ದಿಂಬಿಗೆ ತಾಗಿಸಿ ವಿಶ್ರಾಂತಿ ಮಾಡಬೇಕು. ಈ ಸ್ಥಿತಿಯಲ್ಲಿ ಕೆನ್ನೆಯ ಭಾಗವನ್ನು ದಿಂಬಿಗೆ ತಾಗಿಸಿರಬೇಕು. ಮೊಣಕೈಗಳನ್ನು ದಿಂಬಿನ ಪಕ್ಕದಲ್ಲಿ ವಿಶ್ರಾಂತಿ ಸ್ಥಿತಿಯಲ್ಲಿಡಿ. ಕಣ್ಣುಗಳನ್ನು ಮೃದುವಾಗಿ ಮುಚ್ಚಿ ಒಂದಷ್ಟು ಸಮಯ ವಿಶ್ರಾಂತಿ ಪಡೆಯಬೇಕು. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ವಾಪಸ್‌ ಬರಬೇಕು.
Vijaya Karnataka Web daily yoga
ಡೈಲಿ ಯೋಗ: ದಿಂಬಿನ ಸಹಾಯದಿಂದ ಮಂಡೂಕಾಸನ


ಉಪಯೋಗ:- ಶರೀರ ಒತ್ತಡದಿಂದ ಬಳಲಿದ್ದಾಗ ಈ ಆಸನವನ್ನು ಮಾಡಿದರೆ ಶರೀರಕ್ಕೆ ಸಂಪೂರ್ಣವಾದ ವಿಶ್ರಾಂತಿ ದೊರೆಯುವುದು. ಮಾನಸಿಕ ಒತ್ತಡ ದೂರವಾಗುವುದು. ಸೊಂಟದ ನೋವು ನಿವಾರಣೆಯಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ