ಆ್ಯಪ್ನಗರ

ಡೈಲಿ ಯೋಗ: ಇಟ್ಟಿಗೆಗಳ ಸಹಾಯದಿಂದ ಶಶಾಂಕಾಸನ

ಜಮಖಾನವನ್ನು ನೆಲದ ಮೇಲೆ ಹಾಸಬೇಕು. ನಂತರ ಜಮಖಾನದ ಒಂದು ತುದಿಯಲ್ಲಿ ಎರಡು ಇಟ್ಟಿಗೆಗಳನ್ನು ಅಡ್ಡವಾಗಿ ಇಡಬೇಕು ಹಾಗೂ ಜಮಖಾನದ ಮಧ್ಯದ ಭಾಗದಲ್ಲಿ ವಜ್ರಾಸನದಲ್ಲಿ ಇಟ್ಟಿಗೆಗಳಿಗೆ ಅಭಿಮುಖವಾಗಿ ಕುಳಿತುಕೊಳ್ಳಬೇಕು.

Vijaya Karnataka 20 Apr 2018, 5:00 am
ವಿವರಣೆ :-ಜಮಖಾನವನ್ನು ನೆಲದ ಮೇಲೆ ಹಾಸಬೇಕು. ನಂತರ ಜಮಖಾನದ ಒಂದು ತುದಿಯಲ್ಲಿ ಎರಡು ಇಟ್ಟಿಗೆಗಳನ್ನು ಅಡ್ಡವಾಗಿ ಇಡಬೇಕು ಹಾಗೂ ಜಮಖಾನದ ಮಧ್ಯದ ಭಾಗದಲ್ಲಿ ವಜ್ರಾಸನದಲ್ಲಿ ಇಟ್ಟಿಗೆಗಳಿಗೆ ಅಭಿಮುಖವಾಗಿ ಕುಳಿತುಕೊಳ್ಳಬೇಕು. ಈಗ ಪೃಷ್ಠವನ್ನು ಮೇಲೆ ಎತ್ತಿ ಮುಂದೆ ಬಾಗಿ ಎರಡೂ ಮೊಣಕೈಗಳನ್ನು ಇಟ್ಟಿಗೆಯ ಮೇಲೆ ಊರಬೇಕು. ಮೊಣಕೈಗಳನ್ನು ಮೇಲೆ ನೇರಮಾಡಿ ಎರಡೂ ಹಸ್ತಗಳನ್ನು ಒಂದಕ್ಕೊಂದು ಸೇರಿಸಬೇಕು. ಎದೆಯ ಭಾಗ ಮತ್ತು ರಟ್ಟೆಗಳನ್ನು ನೆಲದ ಕಡೆಗೆ ಎಳೆಯುತ್ತಿರಬೇಕು. ಸೊಂಟದಿಂದ ಕುತ್ತಿಗೆಯವರೆಗೆ ಬೆನ್ನನ್ನು ಹಿಗ್ಗಿಸಿರಬೇಕು. ಮೊಣಕಾಲುಗಳು ಹಿಂದೆ ಚಾಚಿ ನೆಲದ ಮೇಲಿರಲಿ. ದೃಷ್ಟಿ ಮುಂದೆ ಇರಲಿ. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ನಂತರ ವಾಪಸ್‌ ಬರಬೇಕು.
Vijaya Karnataka Web 6


ಉಪಯೋಗ:- ಈ ರೀತಿ ಇಟ್ಟಿಗೆಗಳ ಸಹಾಯದಿಂದ ಆಸನ ಮಾಡಿದಾಗ ಭುಜಗಳಲ್ಲಿನ ಬಿಗಿತ ದೂರವಾಗುವುದು. ವಿಶೇಷವಾಗಿ ಪ್ರೋಷರ್‌ ಶೋಲ್ಡರ್‌ ಸಮಸ್ಯೆ ದೂರವಾಗುವುದು. ಕುತ್ತಿಗೆ ನೋವು, ಸವೈರ್‍ಕಲ್‌ ಸ್ಪೌಂಡೀಲೈಸಿಸ್‌ ನಿವಾರಣೆಯಾಗುವುದು. ಎದೆಯಭಾಗ ವಿಶಾಲವಾಗುವುದು. ಬೆನ್ನಿನ ಭಾಗಕ್ಕೆ ಚೈತನ್ಯ ದೊರೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ