ಆ್ಯಪ್ನಗರ

ಡೈಲಿ ಯೋಗ: ಇಟ್ಟಿಗೆ ಸಹಾಯದಿಂದ ಪಾಶ್ವೋರ್‍ತ್ತಾನಾಸನ

ಜಮಖಾನವನ್ನು ನೆಲದ ಮೇಲೆ ಹಾಸಬೇಕು ನಂತರ ಜಮಖಾನದ ಒಂದು ತುದಿಯಲ್ಲಿ ಒಂದು ಇಟ್ಟಿಗೆಯನ್ನು ಅಡ್ಡವಾಗಿ ಇಡಬೇಕು.

Vijaya Karnataka 21 Apr 2018, 5:00 am
ವಿವರಣೆ :- ಜಮಖಾನವನ್ನು ನೆಲದ ಮೇಲೆ ಹಾಸಬೇಕು. ನಂತರ ಜಮಖಾನದ ಒಂದು ತುದಿಯಲ್ಲಿ ಒಂದು ಇಟ್ಟಿಗೆಯನ್ನು ಅಡ್ಡವಾಗಿ ಇಡಬೇಕು. ಈಗ ಬಲಪಾದವನ್ನು ಇಟ್ಟಿಗೆಯ ಮೇಲೆ ಊರಿ, ಎಡಗಾಲನ್ನು ಹಿಂದೆ ಚಾಚಿ ಏಕಪಾದ ಪ್ರಸರಣಾಸನ ಸ್ಥಿತಿಗೆ ಬರಬೇಕು. ನಂತರ ಎರಡೂ ಹಸ್ತಗಳಿಂದ ಇಟ್ಟಿಗೆಯನ್ನು ಹಿಡಿದು ಕೈಕಿರುಬೆರಳಿನಿಂದ ಕೈನ ಮಣಿಗಂಟಿನವರೆಗೆ ನೆಲಕ್ಕೆ ತಾಗಿಸಿ. ನಿಧಾನವಾಗಿ ಸೊಂಟವನ್ನು ಮೇಲೆ ಎತ್ತಿ. ಎರಡೂ ಕಾಲುಗಳನ್ನು ನೇರಮಾಡಬೇಕು. ಎರಡೂ ಮಂಡಿಗಳು ಬಿಗಿಯಾಗಿರಲಿ. ನಾಭಿಯ ಭಾಗ ತೊಡೆಗೂ, ಎದೆಯ ಭಾಗ ಮಂಡಿಗೂ, ಹಣೆಯ ಭಾಗ ಮೊಣಕಾಲಿಗೂ ತಾಗಿರಲಿ. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ವಾಪಸ್‌ ಬಂದ ನಂತರ ಇದೇ ರೀತಿ ಮತ್ತೊಂದು ಕಡೆ ಆಸನ ಮುಂದುವರಿಸಬೇಕು.
Vijaya Karnataka Web daily yoga
ಡೈಲಿ ಯೋಗ: ಇಟ್ಟಿಗೆ ಸಹಾಯದಿಂದ ಪಾಶ್ವೋರ್‍ತ್ತಾನಾಸನ


ಉಪಯೋಗ:- ಪಾಶ್ವೋರ್‍ತ್ತಾನಾಸನ ಮಾಡುವಾಗ ಸಾಮಾನ್ಯವಾಗಿ ಮುಂದೆ ಇರುವ ಕಾಲಿನ ಮಂಡಿಯ ಭಾಗ ಮಡಿಸಲ್ಪಡುತ್ತದೆ ಆದರೆ ಈ ರೀತಿ ಇಟ್ಟಿಗೆ ಸಹಾಯದಿಂದ ಆಸನ ಮಾಡಿದಾಗ ಕಾಲು ನೇರವಾಗುವುದು. ಸಯಾಟಿಕ, ವೆರಿಕೋಸ್‌ ವೇಯನ್ಸ್‌ ಸಮಸ್ಯೆ ದೂರವಾಗುವವು. ತೊಡೆ ಹಾಗೂ ಪೃಷ್ಠಗಳಲ್ಲಿನ ಕೊಬ್ಬಿನಂಶ ಕರಗುವುದು. ಕಾಲುಗಳಿಗೆ ಶಕ್ತಿ ಬರುವುದು. ಮನಸ್ಸಿಗೆ ಶಾಂತಿ ದೊರೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ