ಆ್ಯಪ್ನಗರ

ಡೈಲಿ ಯೋಗ: ಬೆಲ್ಟಿನ ಸಹಾಯದಿಂದ ಹಲಾಸನ

- ಜಮಖಾನವನ್ನು ನೆಲದ ಮೇಲೆ ಹಾಸಬೇಕು ಒಂದು ಬೆಲ್ಟನ್ನು ತೆಗೆದುಕೊಂಡು ಆ ಬೆಲ್ಟಿನ ಒಂದು ತುದಿಯನ್ನು ಮತ್ತೊಂದು ತುದಿಯಲ್ಲಿರುವ ಕೊಂಡಿಯಲ್ಲಿ ಸೇರಿಸಿ...

Vijaya Karnataka 14 Jun 2018, 5:00 am
ವಿವರಣೆ :- ಜಮಖಾನವನ್ನು ನೆಲದ ಮೇಲೆ ಹಾಸಬೇಕು. ಒಂದು ಬೆಲ್ಟನ್ನು ತೆಗೆದುಕೊಂಡು ಆ ಬೆಲ್ಟಿನ ಒಂದು ತುದಿಯನ್ನು ಮತ್ತೊಂದು ತುದಿಯಲ್ಲಿರುವ ಕೊಂಡಿಯಲ್ಲಿ ಸೇರಿಸಿ. ನಂತರ ಬೆಲ್ಟಿನ ಒಂದು ತುದಿಯನ್ನು ಹಿಡಿದು ಎಳೆದು ಕೈಗಳನ್ನು ಅದರ ಒಳಗೆ ಸೇರಿಸಿ ಬೆಲ್ಟನ್ನು ಮೊಣಕೈಗಳವರೆಗೆ ತೆಗೆದುಕೊಳ್ಳಿ. ಮೊಣಕೈಗಳು ಭುಜದ ನೇರಕ್ಕೆ ಇರಲಿ. ಈಗ ಹಾಸಿರುವ ಜಮಖಾನದ ಮೇಲೆ ಬೆನ್ನನ್ನು ಕೆಳಮುಖಮಾಡಿ ಮಲಗಿ. ನಂತರ ನಿಧಾನವಾಗಿ ಕಾಲುಗಳನ್ನು ಮೇಲೆ ಎತ್ತುತ್ತಾ ಕೈಗಳನ್ನು ಸೊಂಟದ ಕೆಳಗೆ ತೆಗೆದುಕೊಂಡು ಸೊಂಟವನ್ನು ಸಂಪೂರ್ಣ ಮೇಲೆ ಎತ್ತಿ ಪಾದಗಳನ್ನು ತಲೆಯ ಹಿಂಭಾಗದಲ್ಲಿ ನೆಲಕ್ಕೆ ತಾಗಿಸಿ. ಕಾಲುಗಳು ನೇರವಾಗಿರಲಿ. ಗದ್ದವನ್ನು ಎದೆಯ ಕಡೆಗೆ ತಳ್ಳುತ್ತಿರಬೇಕು. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ನಂತರ ಸೊಂಟವನ್ನು ಕೆಳಗೆ ಇಳಿಸುತ್ತ ಹಾಗೆಯೇ ವಾಪಸ್‌ ಬರಬೇಕು.
Vijaya Karnataka Web 8


ಉಪಯೋಗ:- ಹಲಾಸನ ಮಾಡುವಾಗ ಮೊಣಕೈಗಳು ಹೊರಗೆ ಹೋಗುವುದು ಸಾಮಾನ್ಯವಾಗಿರುತ್ತದೆ. ಹೀಗೆ ಮೊಣಕೈಗಳು ಹೊರಗೆ ಹೋದಲ್ಲಿ ಪಕ್ಕೆಲುಬು ಮತ್ತು ಸೊಂಟದ ಭಾಗವು ಕುಸಿಯಲ್ಪಡುತ್ತದೆ. ಆಗ ಆಸನದಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗುವುದಿಲ್ಲ . ಜತಗೆ ಸ್ಥಿತಿಯಲ್ಲಿ ಉಸಿರಾಟ ಕೂಡ ಕಷ್ಟವಾಗುವುದು. ಆದರೆ ಈ ರೀತಿ ಬೆಲ್ಟನ್ನು ಉಪಯೋಗಿಸಿ ಆಸನ ಮಾಡಿದಾಗ ಆಸನ ಉತ್ತಮವಾಗಿ ಬರುವುದು. ಗ್ಯಾಸ್ಟ್ರಿಕ್‌, ಅಜೀರ್ಣದಂತಹ ಸಮಸ್ಯೆ ದೂರವಾಗುವುದು. ಬೆನ್ನಿನ ಭಾಗದ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಬಲಿಷ್ಠತೆ ಬರುವುದು. ಉಸಿರಾಟ ಕ್ರಿಯೆ ಸರಾಗವಾಗಿ ಆಗುವುದು. ಥೈರಾಯಿಡ್‌, ಟಾನ್ಸಿಲ್ಸ್‌, ಗೊರಕೆ ಸಮಸ್ಯೆ ನಿವಾರಣೆಗೆ ಉತ್ತಮ ಆಸನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ