ಆ್ಯಪ್ನಗರ

ಡೈಲಿ ಯೋಗ: ಬೆಲ್ಟಿನ ಸಹಾಯದಿಂದ ವೀರಭದ್ರಾಸನ- 3

- ಜಮಖಾನವನ್ನು ನೆಲದ ಮೇಲೆ ಹಾಸಬೇಕು...

Vijaya Karnataka 31 May 2018, 5:05 pm
ವಿವರಣೆ :- ಜಮಖಾನವನ್ನು ನೆಲದ ಮೇಲೆ ಹಾಸಬೇಕು. ನಂತರ ಒಂದು ಬೆಲ್ಟನ್ನು ತೆಗೆದುಕೊಂಡು ಅದನ್ನು ಕೊಂಡಿಯಲ್ಲಿ ಸೇರಿಸಿ ಎಡಗಾಲನ್ನು ಬೆಲ್ಟಿನ ಒಳಗೆ ತೆಗೆದುಕೊಂಡು ಬೆಲ್ಟಿನ ಮತ್ತೊಂದು ಭಾಗವನ್ನು ಬಲ ಪಾದಕ್ಕೆ ಹಾಕಿ. ಈಗ ಎರಡೂ ಕಾಲುಗಳನ್ನು ನಾಲ್ಕು ಅಡಿಯಷ್ಟು ವಿಸ್ತರಿಸಿ. ಎಡ ತೊಡೆಯ ಮೂಲದಲ್ಲಿ ಬೆಲ್ಟಿನ ಭಾಗವಿರಲಿ. ನಂತರ ಎಡ ದಿಕ್ಕಿಗೆ ಸಂಪೂರ್ಣವಾಗಿ ತಿರುಗಿ. ಎರಡೂ ಕೈಗಳನ್ನು ಮೇಲೆ ತೆಗೆದುಕೊಂಡು ವೀರಭದ್ರಾಸನ 1ರ ಸ್ಥಿತಿಗೆ ಬನ್ನಿ. ಈಗ ಎಡಗಾಲನ್ನು ಮಡಚಿ ಮುಂದೆ ಬಾಗಿ ಕೈಗಳನ್ನು ಭುಜದ ನೇರದಲ್ಲಿ ಎಳೆಯುತ್ತಾ ಹಿಂದೆ ಇರುವಂಥ ಕಾಲನ್ನು ಮೇಲಕ್ಕೆ ಎತ್ತಿ ಹಾಗೂ ಕೆಳಗಿರುವ ಕಾಲನ್ನು ನೇರಮಾಡಿ. ಹಿಂದೆ ಇರುವಂಥ ಪಾದ ಸೊಂಟದ ಮೇಲಿರಲಿ. ಭುಜಗಳೂ ಸೊಂಟದ ನೇರದಲ್ಲಿರಲಿ. ಎರಡೂ ಪೃಷ್ಠಗಳು ಮತ್ತು ಪಕ್ಕೆಲುಬುಗಳು ಒಂದೇ ನೇರದಲ್ಲಿರಲಿ. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ನಂತರ ವಾಪಸ್ಸು ಬರಬೇಕು. ನಂತರ ಇದೇ ರೀತಿ ಮತ್ತೊಂದು ಕಡೆ ಆಸನ ಮಾಡಬೇಕು.
Vijaya Karnataka Web 8


ಉಪಯೋಗ:- ವೀರ ಭದ್ರಾಸನ ಮೂರನ್ನು ಮಾಡುವಾಗ ಹಿಂದೆ ಇರುವಂಥ ಕಾಲನ್ನು ಸೊಂಟದ ನೇರದಲ್ಲಿ ತೆಗೆದುಕೊಳ್ಳಲು ಅನೇಕರಿಗೆ ಸಾಧ್ಯವಾಗುವುದಿಲ್ಲ ಮತ್ತು ಈ ಸ್ಥಿತಿಯಲ್ಲಿ ಶರೀರದ ನಿಯಂತ್ರಣ ತಪ್ಪುವುದು ಸಾಮಾನ್ಯ, ಆದರೆ ಆಸನವನ್ನು ಈ ರೀತಿ ಬೆಲ್ಟಿನ ಸಹಾಯದಿಂದ ಮಾಡಿದಾಗ ಈ ಮೇಲಿನ ಯಾವ ಸಮಸ್ಯೆಗಳೂ ಬರುವುದಿಲ್ಲ ಹಾಗೂ ಆಸನದ ಸ್ಥಿರತೆ ಹೆಚ್ಚುತ್ತದೆ, ಕಾಲುಗಳು ಬಲಿಷ್ಠವಾಗುವವು, ಬೆನ್ನಿನ ಭಾಗ ಹಿಗ್ಗಲ್ಪಡುವುದು, ನೆನಪಿನ ಶಕ್ತಿ ಉತ್ತಮಗೊಳ್ಳುವುದು. ಮೂರ್ಚೆ ರೋಗದಂತಹ ಸಮಸ್ಯೆ ದೂರವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ