ಆ್ಯಪ್ನಗರ

ದಿನಾ ಒಂದೆರಡು ಗಂಟೆ ಈ ಯೋಗಾಸನಗಳನ್ನು ಮಾಡಿ, ಕೊಬ್ಬು ಕರಗುತ್ತೆ ನೋಡಿ..

ಕೆಲವೊಂದು ಯೋಗಾಸನಗಳನ್ನು ತಿಂಗಳುಗಳ ಕಾಲ, ದಿನಾ ಒಂದೆರಡು ಗಂಟೆ ಮಾಡುತ್ತಾ, ಬಂದರೆ ಪರಿಣಾಮಕಾರಿಯಾಗಿ ಬೊಜ್ಜು ಇಳಿಸಬಹುದು

Vijaya Karnataka Web 26 Nov 2021, 5:49 pm
ಹೊಟ್ಟೆಯಲ್ಲಿ ಬೊಜ್ಜು ಬೆಳೆದು ನಿಮಗೆ ಸರಿಯಾಗಿ ದೈಹಿಕ ಕಾರ್ಯಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲವೆಂದಾದರೆ ಆಗ ನೀವು ಯೋಗಾಸನಗಳನ್ನು ಮಾಡಿ ಬೊಜ್ಜು ಕರಗಿಸಬಹುದು. ಈ ಕೆಲವೊಂದು ಯೋಗಾಸನಗಳು ದೇಹವನ್ನು ಫಿಟ್ ಆಗಿಡಲು ತುಂಬಾ ಸಹಕಾರಿ ಆಗಿರುವುದು.
Vijaya Karnataka Web effective yoga asanas to help you burn your belly fat
ದಿನಾ ಒಂದೆರಡು ಗಂಟೆ ಈ ಯೋಗಾಸನಗಳನ್ನು ಮಾಡಿ, ಕೊಬ್ಬು ಕರಗುತ್ತೆ ನೋಡಿ..


ನಿತ್ಯವೂ ತುಂಬಾ ಬದ್ಧತೆಯಿಂದ ಇದನ್ನು ಮಾಡಿದರೆ ಆಗ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಸ್ವಲ್ಪ ತಾಳ್ಮೆ ವಹಿಸಿಕೊಂಡು ನಿಧಾನವಾಗಿ ಒಂದೊಂದಾಗಿಯೇ ಕೆಲವೊಂದು ಆಸನಗಳನ್ನು ತಿಂಗಳುಗಳ ಕಾಲ ಮಾಡಿದರೆ ಆಗ ಖಂಡಿತವಾಗಿಯೂ ಫಲಿತಾಂಶ ಕಟ್ಟಿಟ್ಟ ಬುತ್ತಿ.

ಯೋಗಾಸನದ ಜತೆಗೆ ಕೆಲವೊಂದು ಆಹಾರ ಕ್ರಮದಲ್ಲಿ ಬದಲಾವಣೆ, ಜೀವನಶೈಲಿ ಬದಲಾವಣೆ ಮಾಡಿದರೆ ಆಗ ಫಲಿತಾಂಶವು ಬೇಗ ಸಿಗುವುದು. ಹೊಟ್ಟೆ ಬೊಜ್ಜು ಕರಗಿಸುವ ಕೆಲವು ಯೋಗಾಸನಗಳು ಈ ರೀತಿಯಲ್ಲಿದೆ.

​ಶಲಭಾಸನ

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೆಳೆದಿರುವಂತಹ ಕೊಬ್ಬನ್ನು ಕರಗಿಸಲು ಶಲಭಾಸನವು ತುಂಬಾ ಪರಿಣಾಮಕಾರಿ. ಇದು ಓರೆ ಸ್ನಾಯುಗಳು ಮೇಲೆ ಕೆಲಸ ಮಾಡುವುದು.

​ಅಧೋಮುಖೋ ಶ್ವಾನಾಸನ ಮಾಡುವ ವಿಧಾನ

ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬು ಕರಗಿಸಲು ಅಧೋಮುಖೋ ಶ್ವಾನಾಸನವು ತುಂಬಾ ಪರಿಣಾಮಕಾರಿ. ಇದು ಕೈಗಳು, ಬೆನ್ನು, ಭುಜ, ತೊಡೆ ಮತ್ತು ಹೊಟ್ಟೆಯ ಭಾಗವನ್ನು ಬಲಪಡಿಸುವುದು.

  • ನೆಲದ ಮೇಲೆ ಹಾಗೆ ಮೊಣಕಾಲು ಹಾಗೂ ಅಂಗೈ ಬಲದಿಂದ ನಿಂತುಕೊಳ್ಳಿ.
  • ಬೆರಳುಗಳನ್ನು ಹಾಗೆ ಅಗಲವಾಗಿಸಿ ಮತ್ತು ಇದನ್ನು ಒತ್ತಿ.
  • ಅಂಗೈ ಮತ್ತು ಪಾದಗಳನ್ನು ಹಾಗೆ ನೆಲದ ಮೇಲೆ ನಿಧಾನವಾಗಿ ಒತ್ತಿ. ದೇಹವನ್ನು ಈಗ ಮೇಲ್ಛಾವಣೆಯತ್ತ ಎತ್ತಿ.
  • ಕಣ್ಣುಗಳು ನಾಭಿ ನೋಡುತ್ತಿರಲಿ. ಇದೇ ಭಂಗಿಯಲ್ಲಿ ಕೆಲವು ಸೆಕೆಂಡು ಇರಿ.
  • ನಿಧಾನವಾಗಿ ಉಸಿರನ್ನು ಬಿಡಿ ಮತ್ತು ಈ ಭಂಗಿಯ ಆರಂಭದ ಸ್ಥಾನಕ್ಕೆ ಬನ್ನಿ.

ಇದರ ಲಾಭಗಳು

ಇದು ಸಂಪೂರ್ಣ ದೇಹಕ್ಕೆ ಶಕ್ತಿ ನೀಡಿ, ಪುನಶ್ಚೇತನಗೊಳಿಸುವುದು. ಭುಜಗಳು, ಕೈಗಳನ್ನು ಎಳೆಯುವುದು. ತಲೆನೋವು, ನಿದ್ರಾಹೀನತೆ, ನಿಶ್ಯಕ್ತಿ ಬಗೆಹರಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಮಾಡುವುದು.

​ವೀರಭದ್ರಾಸನ

ವೀರಭದ್ರಾಸನವು ಹೊಟ್ಟೆಯಲ್ಲಿರುವಂತಹ ಕೊಬ್ಬನ್ನು ಕರಗಿಸಲು ಅತ್ಯುತ್ತಮವಾದ ಆಸನವಾಗಿದೆ. ಇದು ಹೊಟ್ಟೆ, ಪೃಷ್ಠ ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದು ಮತ್ತು ಸಮತೋಲನ ಕಾಪಾಡುವುದು.

ವೀರಭದ್ರಾಸನ ಅಭ್ಯಾಸ ಮಾಡುವುದು ಹೇಗೆ ?

  • ಮೊದಲಿಗೆ ನೇರವಾಗಿ ನೆಲದ ಮೇಲೆ ನಿಮ್ಮ ಎರಡು ಕಾಲುಗಳ ಮಧ್ಯೆ ಸ್ವಲ್ಪ ಅಂತರವನ್ನು ಇಟ್ಟು ಎರಡು ಕೈ ಗಳನ್ನು ಅಕ್ಕ ಪಕ್ಕ ಇಟ್ಟುಕೊಂಡು ನಿಂತುಕೊಳ್ಳಬೇಕು.
  • ನಿಮ್ಮ ದೇಹದಿಂದ ಉಸಿರನ್ನು ಹೊರ ಹಾಕಿ ನಿಮ್ಮ ಎಡಗಾಲನ್ನು ಬಲಗಾಲಿನಿಂದ 2 ರಿಂದ 3 ಅಡಿಗಳವರೆಗೆ ಪಕ್ಕಕ್ಕೆ ಎತ್ತಿಡಿ.
  • ನಿಮ್ಮ ಮೇಲ್ಭಾಗದ ದೇಹವನ್ನು ಎಡ ಬದಿಗೆ ತಿರುಗಿಸಿ ನಿಮ್ಮ ಮಂಡಿಯನ್ನು 90 - ಡಿಗ್ರಿ ಕೋನಾಕಾರದಲ್ಲಿ ಬಾಗಿಸಿ.
  • ಈಗ ನಿಮ್ಮ ಬಲಗಾಲನ್ನು ಸುಮಾರು ಹದಿನೈದು ಡಿಗ್ರಿಗಳವರೆಗೆ ನಿಮ್ಮ ಎಡಗಾಲಿನ ಕಡೆಗೆ ತಿರುಗಿಸಿ. ನಿಮ್ಮ ಬಲಗಾಲಿನ ಹಿಮ್ಮಡಿ ಈ ಸಮಯದಲ್ಲಿ ನಿಮ್ಮ ಎಡಗಾಲಿಗೆ ನೇರವಾಗಿ ಇರಬೇಕಾಗುತ್ತದೆ.
  • ಇನ್ನು ನಿಮ್ಮ ಎರಡೂ ಕೈಗಳನ್ನು ನಿಧಾನವಾಗಿ ಮೇಲೆತ್ತಿ. ಈ ಸಮಯದಲ್ಲಿ ನಿಮ್ಮ ಭುಜದ ಭಾಗಕ್ಕೆ ನೇರವಾಗಿ ನಿಮ್ಮ ಎರಡೂ ಕೈಗಳು ಬರಬೇಕು. ನಿಮ್ಮ ಅಂಗೈಗಳು ಮೇಲ್ಮುಖವಾಗಿ ಇರಬೇಕು. ದೀರ್ಘವಾಗಿ ಉಸಿರಾಟ ನಡೆಸಿ ಹೆಚ್ಚು ಉಸಿರನ್ನು ಒಳ ತೆಗೆದುಕೊಳ್ಳಿ.
  • ನಿಧಾನವಾಗಿ ನಿಮ್ಮ ತಲೆಯನ್ನು ಎಡ ಬದಿಗೆ ತಿರುಗಿಸಿ ನಿಮ್ಮ ಸೊಂಟವನ್ನು ಸಾಧ್ಯ ಆದಷ್ಟು ಬಾಗಿಸಿ ಕೆಲವು ಸೆಕೆಂಡುಗಳ ತನಕ ಹೀಗೆ ಇದ್ದು ಮತ್ತೊಮ್ಮೆ ಮೊದಲಿನ ಸ್ಥಿತಿಗೆ ಮರಳಿ ಬನ್ನಿ. ಈಗ ನೀವು ತೆಗೆದುಕೊಂಡು ಉಸಿರನ್ನು ಹೊರ ಬಿಡಿ.
  • ಈ ಮೇಲಿನ ಪ್ರಕ್ರಿಯೆಯನ್ನು ನಿಮ್ಮ ಬಲ ಬದಿಯ ಕಡೆಗೂ ಇದೆ ರೀತಿ ಮಾಡಿ.

​ಕುಂಭಕಾಸನ

  • ಕುಂಭಕಾಸನವು ಪೃಷ್ಠ, ತೊಡೆ, ಬೆನ್ನು, ಕೈಗಳು, ಭುಜದ ಭಾಗವನ್ನು ಬಲಪಡಿಸುವುದು. ಇದು ಸಂಪೂರ್ಣ ದೇಹದ ಮೇಲೆ ಗಮನವಿಡುವುದು ಮತ್ತು ಇದು ದೇಹವನ್ನು ಸದೃಢಗೊಳಿಸುವುದು.
  • ಯೋಗ ಮ್ಯಾಟ್ ತೆಗೆದುಕೊಳ್ಳಿ ಮತ್ತು ಪುಶ್ ಅಪ್ ಭಂಗಿಗೆ ಬನ್ನಿ. ಕೈಗಳನ್ನು ಹಾಗೆ ವಿಸ್ತರಿಸಿ ಮತ್ತು ದೇಹದ ಮುಂಡದ ಭಾರವು ನಿಮ್ಮ ಕೈಗಳ ಮೇಲಿರಲಿ.
  • ದೀರ್ಘವಾಗಿ ಉಸಿರಾಡಿ, ಕತ್ತು ಮತ್ತು ಬೆನ್ನು ನೇರವಾಗಿ ಇರಲಿ. ದೇಹವು ಹಲಗೆಯಂತೆ ನೇರವಾಗಿ ಇರಲಿ.
  • ಈ ಭಂಗಿಯಲ್ಲಿ 15-30 ನಿಮಿಷ ಕಾಲ ಹಾಗೆ ಇರಿ.
  • ಉಸಿರು ಬಿಡಿ ಮತ್ತು ಮೊಣಕಾಲನ್ನು ಬಗ್ಗಿಸಿ ದೇಹದ ಭಾಗವನ್ನು ಅದಕ್ಕೆ ಹಾಕಿ.
  • ಇದನ್ನು ಐದು ಸಲ ನೀವು ಮಾಡಬೇಕು.

​ವಿನ್ಯಾಸ ಹರಿವು ಭಂಗಿ

ಪರ್ವತಾಸನ, ಭುಜಂಗಾಸನ, ಕುಂಭಾಸನದ ಮಿಶ್ರಣವು ಇದಾಗಿದೆ. ಇದು ಹೃದಯದ ಬಡಿತವನ್ನು ಸರಿಯಾಗಿಡುವುದು ಮತ್ತು ಹೊಟ್ಟೆಯನ್ನು ಬಲಪಡಿಸುವುದು. ಉಸಿರಿನ ಮೇಲೆ ಗಮನಹರಿಸಿ ನೀವು ಈ ಆಸನವನ್ನು ಮಾಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ