ವಿವರಣೆ:- ಮೊದಲು ಎರಡು ಮೀಟರ್ ಉದ್ದದ ಎರಡು ಹಗ್ಗಗಳನ್ನು ಕಿಟಿಕಿಯ ಅಡ್ಡ ಸರಳಿಗೆ ಹಾಕಬೇಕು, ಹಗ್ಗಗಳ ಗಂಟು ಕೆಳಗೆ ಇರಲಿ. ನಂತರ ಗೋಡೆಯ ಕಡೆಗೆ ಬೆನ್ನು ಮಾಡಿ ಮಂಡಿಯೂರಿ ಕೆಳಗೆ ಕುಳಿತುಕೊಂಡು, ಎರಡೂ ಕೈಗಳಿಂದ ಹಿಂದಿನಿಂದ ಹಗ್ಗದ ಗಂಟುಗಳನ್ನು ಹಿಡಿಯಿರಿ. ಈಗ ನಿಧಾನವಾಗಿ ಸೊಂಟವನ್ನು ಮುಂದೆ ತಳುತ್ತಾ ಬನ್ನಿ. ಕಾಲುಗಳು ನೇರವಾಗಿರಲಿ. ಪಾದಗಳು ಹಿಂದೆ ಗೋಡೆಯನ್ನು ಒತ್ತಿರಲಿ. ಎರಡೂ ಕೈಗಳು ಹಿಂದೆ ನೇರವಾಗಿರಲಿ. ನಾಭಿಯನ್ನು ಒಳಗೆಳೆದು ಎದೆಯನ್ನು ಮೇಲಕ್ಕೆತ್ತಿ. ದೃಷ್ಟಿ ಮೇಲೆ ಇರಲಿ. ಸ್ಥಿತಿಯಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ.
ಉಪಯೋಗ:- ಭುಜಗಳಲ್ಲಿನ ಬಿಗಿತ, ನೋವು ದೂರವಾಗುವುದು. ಕುತ್ತಿಗೆ ನೋವಿಗೆ ಉತ್ತಮ ಭಂಗಿ. ಸೊಂಟದ ನೋವು ದೂರವಾಗುವುದು. ತೊಡೆ, ಪೃಷ್ಠಗಳಲ್ಲಿನ ಕೊಬ್ಬಿನಂಶ ಕರಗುವುದು. ಬೆನ್ನು ಮೂಳೆ ಸದೃಢವಾಗುವುದು. ಅಸ್ತಮಾಕ್ಕೆ ಉತ್ತಮ ಭಂಗಿ.