ಆ್ಯಪ್ನಗರ

ಋತುಚಕ್ರದ ಸೆಳೆತ ನಿವಾರಣೆಗೆ ಕೆಲವು ಯೋಗಾಸನಗಳು

ಋತುಚಕ್ರದಲ್ಲಿ ಸೆಳೆತವು ಅತಿಯಾಗಿ ನೋವಿದ್ದರೆ, ಆಗ ಕಲವೊಂದು ಯೋಗಾಸನಗಳು ಹಾಗೂ ನಿಯಮಿತವಾದ ವ್ಯಾಯಾಮವು ಸಹಕಾರಿ.

Vijaya Karnataka Web 20 Jul 2021, 1:39 pm
ಮಹಿಳೆಯರಲ್ಲಿ ಋತುಚಕ್ರದ ಸಂದರ್ಭದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಕೆಲವರಿಗೆ ಹೊಟ್ಟೆ ನೋವು, ಸೊಂಟ ನೋವು, ತಲೆನೋವು, ಬೆನ್ನು ನೋವು ಇತ್ಯಾದಿಗಳು ಋತುಚಕ್ರಕ್ಕೆ ಮೊದಲು, ಆ ವೇಳೆ ಮತ್ತು ಅದರ ಬಳಿಕ ಕಂಡುಬರುವುದು.
Vijaya Karnataka Web menstrual cramps try these yoga exercises for dysmenorrhea
ಋತುಚಕ್ರದ ಸೆಳೆತ ನಿವಾರಣೆಗೆ ಕೆಲವು ಯೋಗಾಸನಗಳು


ಹೆಚ್ಚಿನ ಮಹಿಳೆಯರಲ್ಲಿ ಮನಸ್ಥಿತಿ ಬದಲಾವಣೆ ಸಮಸ್ಯೆಯು ಇರುವುದು ಹಾಗೂ ಸೆಳೆತ ಕೂಡ ಕಂಡುಬರುವುದು. ಇಂತಹ ಸಮಸ್ಯೆಗಳು ಇದ್ದರೆ ಆಗ ಋತುಚಕ್ರದ ಸಂದರ್ಭದಲ್ಲಿ ಕೆಲವೊಂದು ದೈಹಿಕ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಲು ಆಗದು. ಋತುಚಕ್ರದ ಸಂದರ್ಭದಲ್ಲಿನ ನೋವು ಅಥವಾ ಸೆಳೆತವನ್ನು ಡಿಸ್ಮೆನೋರಿಯಾ ಎಂದು ಕರೆಯಲಾಗುತ್ತದೆ.

​ಡಿಸ್ಮೆನೊರಿಯಾ ಎಂದರೇನು?

  • ಡಿಸ್ಮೆನೊರಿಯಾ ಎಂದರೆ ಅದು ಋತುಚಕ್ರದ ಸಂದರ್ಭದಲ್ಲಿ ಕಂಡುಬರುವ ಸೆಳೆತ. ಋತುಚಕ್ರಕ್ಕೆ ಮೊದಲು ಅಥವಾ ಆ ವೇಳೆ ಹೊಟ್ಟೆಯ ಕೆಳಭಾಗದಲ್ಲಿ ಈ ನೋವು ಕಂಡುಬರುವುದು. ಅತಿಯಾದ ನೋವಿದ್ದರೆ, ಆಗ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ನಡೆಸಲು ಆಗದು.
  • ಎರಡು ರೀತಿಯ ಡಿಸ್ಮೆನೊರಿಯಾವಿದ್ದು, ಒಒಂದು ಋತುಚಕ್ರದ ಮೊದಲ ದಿನದಿಂದ ಆರಂಭವಾಗುವುದು. ಇದನ್ನು ಸ್ಪಾಸ್ಮೊಡಿಕ್ ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ.
  • ಇದು ಒಂದೆರಡು ದಿನ ಕಂಡುಬರಬಹುದು ಅಥವಾ ಋತುಚಕ್ರವು ಅಂತ್ಯವಾಗುವ ತನಕ ಇರಬಹುದು. ಎರಡನೇಯದ್ದು ಕಂಜೆಸ್ಟಿವ್ ಡಿಸ್ಮೆನೊರಿಯಾ, ಇದು ಋತುಚಕ್ರಕ್ಕೆ ಕೆಲವು ದಿನಗಳ ಮೊದಲು ಆರಂಭವಾಗುವುದು ಮತ್ತು ಋತುಚಕ್ರವು ಶುರುವಾದ ಕೂಡಲೇ ಮಾಯವಾಗುವುದು.
  • ಡಿಸ್ಮೆನೊರಿಯಾದ ಕೆಲವು ಲಕ್ಷಣಗಳೆಂದರೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ನಿಶ್ಯಕ್ತಿ, ನೋವು, ಬೆನ್ನು ನೋವು ಮತ್ತು ತಲೆನೋವು.
  • ಆಹಾರದಲ್ಲಿ ಬದಲಾವಣೆ, ಔಷಧಿ ಸೇವನೆ, ವಿಟಮಿನ್ ಸಪ್ಲಿಮೆಂಟ್, ವ್ಯಾಯಾಮ, ಬಿಸಿ ಶಾಖ ಅಥವಾ ಬಿಸಿ ನೀರಿನ ಸ್ನಾನ ಇತ್ಯಾದಿಗಳು ಡಿಸ್ಮೆನೊರಿಯಾಗೆ ಚಿಕಿತ್ಸೆಗಳು.

ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವಿಗೆ ನೈಸರ್ಗಿಕ ಮನೆಮದ್ದುಗಳು

​ವ್ಯಾಯಾಮವು ಡಿಸ್ಮೆನೊರಿಯಾವನ್ನು ಹೇಗೆ ನಿವಾರಿಸುವುದು?

  • ವ್ಯಾಯಾಮದಿಂದ ನೈಸರ್ಗಿಕವಾಗಿ ಋತುಚಕ್ರದ ಸಂದರ್ಭದಲ್ಲಿ ಸೆಳೆತ ಕಡಿಮೆ ಮಾಡಬಹುದು. ವ್ಯಾಯಾಮವು ಎಂಡ್ರೊಪಿನ್ ಎನ್ನುವ ಸಂತಸ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು ಮತ್ತು ಇದು ಮೆದುಳಿನಲ್ಲಿ ನೋವಿನ ಸಂಕೇತವನ್ನು ತಡೆಯುವುದು. ಇದರಿಂದ ನೋವು ಕಡಿಮೆ ಆಗುವುದು.
  • ಗರ್ಭಕೋಶವು ಸಂಕುಚಿತವಾಗುತ್ತಿರುವಂತೆ ಸೆಳೆತವು ಕಂಡುಬರುವುದು ಮತ್ತು ಅಲ್ಲಿ ರಕ್ತ ಸಂಚಾರವು ಕಡಿಮೆ ಆಗುವುದು. ವ್ಯಾಯಾಮ ಮಾಡಿದರೆ, ಆಗ ದೇಹದ ಎಲ್ಲಾ ಭಾಗಗಳಿಗೆ ಸರಿಯಾದ ರೀತಿ ರಕ್ತ ಸಂಚಾರವು ಆಗಿ ಸೆಳೆತ ಕಡಿಮೆ ಆಗುವುದು.
  • ಸಂತೋಷದ ಹಾರ್ಮೋನ್ ಗಳಾಗಿರುವ ಎಂಡ್ರೋಪಿನ್ ಮತ್ತು ಸೆರೊಟೊನಿನ್ ಮನಸ್ಥಿತಿ ಸುಧಾರಣೆ ಮಾಡುವುದು. ಇದು ಒತ್ತಡ, ಆತಂಕ ಕಡಿಮೆ ಮಾಡಿ ಮನಸ್ಸಿನಲ್ಲಿ ಸಂತಸವನ್ನು ಉಂಟು ಮಾಡುವುದು.
  • ಓಡುವುದನ್ನು ಈ ವೇಳೆ ಮಾಡಬಾರದು. ಆದರೆ ಯೋಗ ಮತ್ತು ಕೆಲವೊಂದು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಬಹುದು. ಇದು ಒತ್ತಡ ಕಡಿಮೆ ಮಾಡುವುದು, ಸ್ಥಿತಿಸ್ಥಾಪಕತ್ವ ಹೆಚ್ಚಿಸಿ, ಶಕ್ತಿ ನೀಡುವುದು. ಕೆಲವೊಂದು ಆಸನಗಳನ್ನು ನೀವು ಋತುಚಕ್ರದ ಸಂದರ್ಭ ಮಾಡಬಹುದು.

​ಗೋ/ಮಾರ್ಜಾಲ ಆಸನ

  • ಇದು ಶ್ರೋಣಿಯ ಭಾಗದಲ್ಲಿ ಒತ್ತಡ ಕಡಿಮೆ ಮಾಡಿ, ರಕ್ತ ಸಂಚಾರವನ್ನು ಸರಿಯಾಗಿಸುವುದು.
  • ಮೊಣಕಾಲು ಮತ್ತು ಅಂಗೈಯನ್ನು ಊರಿಕೊಂಡು ನೆಲದ ಮೇಲೆ ನಿಲ್ಲಬೇಕು. ಇದರ ಬಳಿಕ ತಲೆಯನ್ನು ಹಾಗೆ ಕೆಳಗೆ ತಂದು ಹೊಟ್ಟೆಯ ಭಾಗವನ್ನು ನೋಡಬೇಕು. ಉಸಿರನ್ನು ಹಾಗೆ ದೀರ್ಘವಾಗಿ ಎಳೆದುಕೊಳ್ಳಿ. ಈ ವೇಳೆ ಹೊಟ್ಟೆಯನ್ನು ಹಿಂದೆ ಎಳೆಯಿರಿ. ಇದನ್ನು ಗೋ ಆಸನ ಎಂದು ಹೇಳುವರು.
  • ಉಸಿರನ್ನು ಸರಿಯಾಗಿ ಎಳೆದುಕೊಂಡ ಬಳಿಕ ತಲೆಯನ್ನು ಒಳಗೆ ಎಳೆದುಕೊಳ್ಳಿ. ಹೊಟ್ಟೆ ಮತ್ತು ತಳೆಯು ಸರಿಯಾದ ರೀತಿಯಲ್ಲಿ ಎಳೆಯಲ್ಪಡಲಿ. ಇದರಿಂದ ಋತುಚಕ್ರದ ಸಂದರ್ಭದ ನೋವು ಕಡಿಮೆ ಆಗುವುದು.

​ಭುಜಂಗಾಸನ

  • ಋತುಚಕ್ರದ ಸೆಳೆತ ಮತ್ತು ಅದಕ್ಕೆ ಸಂಬಂಧಿಸಿದ ಬೆನ್ನು ನೋವಿಗೆ ಇದು ಒಳ್ಳೆಯ ಆಸನ.
  • ಮೊಣಕೈಯೂರಿ ಮತ್ತು ಕಾಲುಗಳನ್ನು ನೇರವಾಗಿಸಿಕೊಂಡು ನೆಲದ ಮೇಲೆ ಮಲಗಿ. ಇದರ ಬಳಿಕ ಎದೆಯನ್ನು ಮೇಲಕ್ಕೆ ಎತ್ತುತ್ತಾ, ಕೈಗಳನ್ನು ನೇರವಾಗಿಸಿ.
  • ಹೊಟ್ಟೆ, ಬೆನ್ನಿನ ಸ್ನಾಯುಗಳು ಇದರಲ್ಲಿ ಭಾಗಿಯಾಗುವಂತೆ ಮಾಡಿ. ನಿಮ್ಮ ದೃಷ್ಟಿಯು ಮುಂದೆ ಇರಲಿ.
  • ತಲೆಯಿಂದ ಮೊಣಕಾಲಿನ ಭಂಗಿ
  • ಇದು ಜೀರ್ಣಕ್ರಿಯೆ, ಸಂತಾನೋತ್ಪತ್ತಿ ವ್ಯವಸ್ಥೆಗೆ ನೆರವಾಗುವುದು. ಅದೇ ರೀತಿಯಲ್ಲಿ ಋತುಚಕ್ರದ ಸಂದರ್ಭದಲ್ಲಿನ ಸೆಳೆತ, ವಾಕರಿಕೆ, ತಲೆನೋವು, ವಾಂತಿ ಮತ್ತು ನಿಶ್ಯಕ್ತಿ ಕಡಿಮೆ ಮಾಡುವುದು.
  • ಬಲದ ಕಾಲನ್ನು ಹಾಗೆ ವಿಸ್ತರಿಸಿ, ಎಡದ ಹಿಂಗಾಲು ಹಾಗೆ ಬಲದ ತೊಡೆಯ ಮೇಲೆ ಇರಬೇಕು.
  • ದೇಹವನ್ನು ಬಲದ ಕಾಲಿನ ಕೇಂದ್ರ ಭಾಗಕ್ಕೆ ತನ್ನಿ ಮತ್ತು ಇದನ್ನು ಮುಂದೆ ತಂದು ಮಡಚಿ.
  • ಏರೋಬಿಕ್ಸ್, ನಡೆಯುವುದು, ಸೈಕ್ಲಿಂಗ್ ಮತ್ತು ಸ್ವಲ್ಪ ಲಘು ವ್ಯಾಯಾಮಗಳು ಕೂಡ ಋತುಚಕ್ರದ ಸಂದರ್ಭದಲ್ಲಿನ ಸೆಳೆತವನ್ನು ಕಡಿಮೆ ಮಾಡಲು ಸಹಕಾರಿ.

ಭುಜಂಗಾಸನದ ಮಾಡಿದರೆ ದೊರೆಯುವ ಪ್ರಯೋಜನಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ