ಆ್ಯಪ್ನಗರ

20 ಸೆ. ವಕ್ರಾಸನಕ್ಕೆ ಮೀಸಲಿಟ್ಟರೆ ಮಧುಮೇಹ ತಡೆಗಟ್ಟಬಹುದು

ಈಗ ಮಧುಮೇಹ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆಘಾತಕಾರಿಯಾದ ವಿಷಯ. ಮಧುಮೇಹ ಹೆಚ್ಚಲು ಪ್ರಮುಖ ಕಾರಣ ಜೀವನ ಶೈಲಿ. ಇಲ್ಲಿ ನೀಡಿರುವ ಆಸನ ಮಾಡಿದರೆ ಮಧುಮೇಹ ಕಾಯಿಲೆ ಬರದಂತೆ ತಡೆಯಬಹುದು.

Vijaya Karnataka Web 20 Jun 2019, 10:03 am
ಪ್ರಧಾನಿ ಮೋದಿಯವರು ಈ ವೀಡಿಯೋದ ಮೂಲಕ ವಕ್ರಾಸನ ಹಾಗೂ ಅದರ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ಈ ಆಸನ ಕೂಡ ಮಾಡಲು ಸರಳವಾಗಿದ್ದು ದಿನದಲ್ಲಿ 20 ಸೆಕೆಂಡ್‌ ಈ ಆಸನಕ್ಕಾಗಿ ಮೀಸಲಿಟ್ಟರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.
Vijaya Karnataka Web vakrasana


ವಕ್ರಾಸನ ಮಾಡುವ ವಿಧಾನ:
ಕುಳಿತುಕೊಂಡ ಭಂಗಿಯಲ್ಲಿಯೇ ಈ ಆಸನ ಮಾಡಬಹುದು. ಈ ಆಸನ ಮಾಡಲು ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಿ, ನಂತರ ಬಲ ಕಾಲಿನ ಮಂಡಿ ಮಡಚಿ. ಈಗ ಎಡಗೈಯಿಂದ ಬಲಗಾಲಿನ ಹೆಬ್ಬರಳು ಹಿಡಿಯಿರಿ, ಬಲಗೈಯನ್ನು ಬೆನ್ನ ಹಿಂದಕ್ಕೆ ಹಿಡಿಯಿರಿ, ಕುತ್ತಿಗೆಯನ್ನು ಎಡಭಾಗಕ್ಕೆ ತಿರುಗಿಸಿ. ಈ ಭಂಗಿಯಲ್ಲಿ 10 ಸೆಕೆಂಡ್‌ ಇದ್ದು ನಂತರ ದಂಡಾಸನಕ್ಕೆ ಬನ್ನಿ. ಈಗ ಎಡಗಾಲನ್ನು ಮಡಚಿ ಬಲಗೈಯಿಂದ ಕಾಲಿನ ಹೆಬ್ಬರಳನ್ನು ಹಿಡಿಯಿರಿ, ಎಡಗೈ ಬೆನ್ನ ಹಿಂದೆ ಇರಲಿ, ಕುತ್ತಿಗೆ ಬಲಭಾಗದಲ್ಲಿ ಇರಲಿ. ಈ ಭಂಗಿಯಲ್ಲಿ 10 ಸೆಕೆಂಡ್‌ ಇರಿ. ಈ ಭಂಗಿಯಲ್ಲಿ ಉಸಿರಾಟ ಸಹಜವಾಗಿರಲಿ.

ವಕ್ರಾಸನದ ಪ್ರಯೋಜನಗಳು
* ಬೆನ್ನು ಮೂಳೆಯ ಆರೋಗ್ಯ ಹೆಚ್ಚುವುದು
* ಬೆನ್ನು ನೋವು ಇದ್ದರೆ ಕಡಿಮೆಯಾಗುವುದು.
* ಪ್ಯಾಂಕ್ರಿಯಾಸ್‌ಗೆ ಒಳ್ಳೆಯದು.
*ಡಯಾಬಿಟಿಸ್‌ ನಿಯಂತ್ರಣದಲ್ಲಿಡುವುದು
* ಭುಜಗಳು ಶಕ್ತಿಶಾಲಿಯಾಗುವುದು
* ಕತ್ತಿನ ಮಾಂಸಖಂಡಗಳಿಗೆ ಉತ್ತಮ ವ್ಯಾಯಾಮ
ಸೂಚನೆ
ಕತ್ತು ಅಥವಾ ಬೆನ್ನು ನೋವು ಇದ್ದಾಗ ಈ ವ್ಯಾಯಾಮ ಮಾಡಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ