ಆ್ಯಪ್ನಗರ

ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿದರೆ ಸಿಗುವುದು ಉತ್ತಮ ಸೆಕ್ಸ್‌ಲೈಫ್‌

ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಮಾತ್ರವಲ್ಲ ಉತ್ತಮ ಸೆಕ್ಸ್‌ಲೈಫ್‌ ಕೂಡ ಪಡೆಯಬಹುದು. ಗಂಡ-ಹೆಂಡತಿ ಇಬ್ಬರು ಜತೆಯಾಗಿ ಯೋಗ ಮಾಡುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು, ಅಲ್ಲದೆ ದೇಹ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

TIMESOFINDIA.COM 28 Jun 2019, 4:34 pm
ಯೋಗ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತೆ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು, ಏಕಾಗ್ರತೆ ಹೆಚ್ಚುವುದು, ಮಾನಸಿಕ ಒತ್ತಡ ದೂರವಾಗುವುದು ಹೀಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತೆ ಎನ್ನುವುದು ಎಲ್ಲರಿಗೆ ಗೊತ್ತು.
Vijaya Karnataka Web couple yoga


ಯೋಗ ಮಾಡುವುದರಿಂದ ಸಂಬಂಧವೃದ್ಧಿಗೆ ಅನುಕೂಲವಾಗುವುದು ಎಂಬುವುದು ಗೊತ್ತೇ? ಸಂಗಾತಿ ಜತೆ ಯೋಗ ಮಾಡುವುದರಿಂದ ಇಬ್ಬರ ಸಂಬಂಧ ಗಟ್ಟಿಯಾಗುವುದು ಹಾಗೂ ಸೆಕ್ಸ್ ಲೈಫ್‌ ಉತ್ತಮವಾಗಿರುವುದು.

ಮಾನಸಿಕ ಒತ್ತಡ ಮತ್ತು ಸಂಬಂಧ
ಮಾನಸಿಕ ಒತ್ತಡ ಅಧಿಕವಾದಾಗ ಅದರ ನೇರ ಪರಿಣಾಮ ಸಂಬಂಧದ ಮೇಲೆ ಬೀಳುತ್ತದೆ. ಕೋಪಗೊಳ್ಳುವುದು, ಖಿನ್ನತೆ ಇವೆಲ್ಲಾ ಸಂಗಾತಿಗೆ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಮಾಡುವುದು. ಯೋಗ ಮಾನಸಿಕ ಒತ್ತಡವನ್ನು ಹೊರಹಾಕಲು ಸಹಾಯ ಮಾಡುತ್ತೆ.

IANS ಲೈಂಗಿಕ ತಜ್ಞೆ ಪ್ರಕಾಶ್‌ ಕೊಠಾರಿ ಹೇಳುವ ಪ್ರಕಾರ ಯೋಗ ಮಾಡುವುದರಿಂದ ಖಾಸಗಿ ಜಾಗದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದು. ಭುಜಾಂಗಾಸನ, ವಜ್ರಾಸನ, ಸೇತು ಬಂಧಾಸನ, ಬಟರ್‌ ಫ್ಲೈ ಇವೆಲ್ಲಾ ಸೆಕ್ಸ್‌ ಲೈಫ್‌ ಉತ್ತಮವಾಗಿರಲು ಸಹಾಯ ಮಾಡುತ್ತೆ ಎಂದಿದ್ದಾರೆ.

ಏಕಾಗ್ರತೆ ಹೆಚ್ಚಿಸುತ್ತದೆ
ನಟರಾಜಾಸನ, ವೃಕ್ಷಾಸನ, ತಾಡಾಸನ, ಗರುಡಾಸನ, ಉಷ್ಟ್ರಾಸನ ಇವೆಲ್ಲಾ ಏಕಾಗ್ರತೆಯನ್ನು ಹೆಚ್ಚಿಸುವುದು. ಏಕಾಗ್ರತೆ ಹೆಚ್ಚುವುದರಿಂದ ಏನೇ ಕೆಲಸವಾಗಲಿ ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಸಹಾಯವಾಗುತ್ತೆ.

ಫ್ಲೆಕ್ಸಿಬಿಲಿಟಿ ಹೆಚ್ಚುವುದು
ದಯೋಗ ಮಾಡುವುದರಿಂದ ದೇಹ ಫ್ಲೆಕ್ಸಿಬಲ್‌ ಆಗಿರುತ್ತೆ, ಇದರಿಂದ ಬೆಡ್‌ರೂಂನಲ್ಲಿ ಮತ್ತಷ್ಟು ಕ್ರಿಯಾಶೀಲರಾಗಿರಬಹುದು.

ಜತೆಯಾಗಿ ಮಾಡಿ
ಒಂದು ಸಮಯ ನಿಗದಿ ಮಾಡಿ ಯೋಗವನ್ನು ಜತೆಯಾಗಿ ಮಾಡುವುದರಿಂದ ಇಬ್ಬರ ಆರೋಗ್ಯ ಹಾಗೂ ಸಂಬಂಧ ವೃದ್ಧಿಯಾಗುವುದು.

ಇದು ಗಮನದಲ್ಲಿರಲಿ
ನೀವು ಯೋಗ ಮಾಡುವಾಗ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟು, ನಿಮಗೆ ಸೂಕ್ತವಾದ ಯೋಗ ಭಂಗಿ ಅಭ್ಯಾಸ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ