ಆ್ಯಪ್ನಗರ

ಕುರ್ಚಿ ಸಹಾಯದಿಂದ ಮಕರಾಸನ - 2

3) ಕುರ್ಚಿ ಸಹಾಯದಿಂದ ಮಕರಾಸನ - 2 ವಿವರಣೆ:- ಮಕರಾಸನವನ್ನು ಎರಡು ಕುರ್ಚಿಗಳ ಸಹಾಯದಿಂದಲೂ ಮಾಡಬಹುದಾಗಿದ್ದು ಮೊದಲು ಎರಡೂ ಕುರ್ಚಿಗಳನ್ನು ಅಭಿಮುಖವಾಗಿ ಇಡಬೇಕು...

ವಿಕ ಸುದ್ದಿಲೋಕ 24 Jul 2017, 12:14 pm

3) ಕುರ್ಚಿ ಸಹಾಯದಿಂದ ಮಕರಾಸನ - 2

ವಿವರಣೆ:- ಮಕರಾಸನವನ್ನು ಎರಡು ಕುರ್ಚಿಗಳ ಸಹಾಯದಿಂದಲೂ ಮಾಡಬಹುದಾಗಿದ್ದು ಮೊದಲು ಎರಡೂ ಕುರ್ಚಿಗಳನ್ನು ಅಭಿಮುಖವಾಗಿ ಇಡಬೇಕು. ಎರಡೂ ಕುರ್ಚಿಗಳ ಅಂತರ ಸರಿಸುಮಾರು ನಾಲ್ಕು ಅಡಿಗಳಷ್ಟಿರಲಿ.

Vijaya Karnataka Web yoga makarasana 2
ಕುರ್ಚಿ ಸಹಾಯದಿಂದ ಮಕರಾಸನ - 2


ಈಗ ಮೊದಲು ಹಿಂದೆ ಇರುವ ಕುರ್ಚಿಯ ಮುಂಭಾಗದ ಅಂಚಿನ ಮೇಲೆ ಎರಡೂ ಪಾದಗಳನ್ನು ಊರಿ ಹಾಗೆಯೇ ಮುಂದೆ ಇರುವ ಕುರ್ಚಿಯ ಮುಂಭಾಗದ ಅಂಚಿಗೆ ರಟ್ಟೆಗಳನ್ನು ತಾಗಿಸಿ ಎರಡೂ ಹಸ್ತಗಳಿಂದ ಕುರ್ಚಿಯ ಮೇಲೆ ಇರುವ ಉದ್ದ ಸರಳುಗಳನ್ನು ಹಿಡಿಯಬೇಕು. ಕೈಗಳು ನೇರವಾಗಿರಲಿ.

ಎದೆಯನ್ನು ಮೇಲಕ್ಕೆ ಎತ್ತಿರಬೇಕು, ನಾಭಿಯ ಭಾಗ ಮತ್ತು ತೊಡೆಯ ಅರ್ಧ ಭಾಗ (ಮೇಲ್ಭಾಗ) ನೆಲಕ್ಕೆ ತಾಗಿರಲಿ . ಉಳಿದಂತೆ ಕಾಲುಗಳು ನೆಲದಿಂದ ಮೇಲೆ ನೇರವಾಗಿರಲಿ. ದೃಷ್ಟಿ ಮುಂದೆ ಇರಲಿ. ಉಸಿರಾಟ ಕ್ರಿಯೆ ಸಹಜವಾಗಿರಲಿ.

ಉಪಯೋಗ:- ಬೆನ್ನು ನೋವು, ಗೂನು ಬೆನ್ನು ನಿವಾರಣೆಗೆ ಉತ್ತಮ ಭಂಗಿ, ನೆನಪಿನ ಶಕ್ತಿ ವೃದ್ಧಿಯಾಗಲು ಶರೀರದಲ್ಲಿ ಲವಲವಿಕೆ ಹೆಚ್ಚಾಗಲು ಉತ್ತಮ ಆಸನ, ಹೊಟ್ಟೆ, ತೊಡೆ, ಪೃಷ್ಠಗಳಲ್ಲಿನ ಕೊಬ್ಬಿನಂಶ ಕರಗಿ ಶರೀರ ನೀಳಕಾಯವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ