ಆ್ಯಪ್ನಗರ

ಈ ಡಿಜಿಟಲ್ ಬಿಪಿ ಮೆಷಿನ್ ನಿಮ್ಮ ಹತ್ತಿರವಿದ್ದರೆ, ಮನೆಯಲ್ಲೇ ಬಿಪಿ ಪರೀಕ್ಷೆ ಮಾಡಿಕೊಳ್ಳಬಹುದು

ಸುಲಭವಾಗಿ ರಕ್ತದ ಒತ್ತಡವನ್ನು ಮನೆಯಲ್ಲಿಯೇ ಪರೀಕ್ಷೆ ಮಾಡಿಕೊಳ್ಳಲು ಈ ಬಿಪಿ ಮೆಷಿನ್ ಗಳಿಂದ ಸಾಧ್ಯವಿದೆ..

Vijaya Karnataka Web 21 Oct 2021, 12:47 pm
ರಕ್ತದ ಒತ್ತಡ ಎನ್ನುವುದು ಹೃದಯಕ್ಕೆ ತುಂಬ ಮಾರಕ. ಹೀಗಾಗಿ ಇದರ ನಿಯಂತ್ರಣ ಅಷ್ಟೇ ಅಗತ್ಯ. ಆದರೆ ಎಲ್ಲರಂತೆ ನಾವು ಸಹ ಸಹಜವಾಗಿ ಮನೆಯಲ್ಲಿ ಅಥವಾ ಹೊರಗಡೆ ಓಡಾಡಿಕೊಂಡು ಇರುವುದರಿಂದ ಕಾಯಿಲೆಯ ನಿಜವಾದ ಕರಾಮತ್ತು ತಿಳಿಯುವುದಿಲ್ಲ. ಹೀಗಾಗಿ ನಮಗೆ ಬಿಪಿ ಕಾಯಿಲೆ ಇದ್ದರೂ ಕೂಡ ಕೆಲವು ದಿನಗಳವರೆಗೆ ನಮಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆನಂತರ ನಿಧಾನವಾಗಿ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ. ಆಗಲೂ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಹೃದಯ ಹಿಡಿದು ಆಸ್ಪತ್ರೆ ಸೇರಬೇಕಾಗುತ್ತದೆ. ಆದರೆ ಇಷ್ಟರಮಟ್ಟಿಗೆ ಹೋಗುವುದಕ್ಕೆ ಬಿಡುವ ಬದಲು ಮನೆಯಲ್ಲಿಯೇ ಒಂದು ಬಿಪಿ ಮೆಷಿನ್ ತಂದು ಇಟ್ಟುಕೊಂಡರೆ, ಆಗಾಗ ನಮ್ಮ ರಕ್ತದ ಒತ್ತಡದ ಸ್ಥಿತಿ ಏನೆಂದು ನಮಗೆ ತಿಳಿಯುತ್ತದೆ. ಇದರಿಂದ ನಮ್ಮ ಆರೋಗ್ಯ ರಕ್ಷಣೆಯಾಗುತ್ತದೆ.
Vijaya Karnataka Web ಈ ಡಿಜಿಟಲ್ ಬಿಪಿ ಮೆಷಿನ್ ನಿಮ್ಮ ಹತ್ತಿರವಿದ್ದರೆ, ಮನೆಯಲ್ಲೇ ಬಿಪಿ ಪರೀಕ್ಷೆ ಮಾಡಿಕೊಳ್ಳಬಹುದು


ಮನೆಯಲ್ಲೊಂದು ಡಿಜಿಟಲ್ ಬಿಪಿ ಮಷೀನ್ ಇದ್ದರೆ, ವಯಸ್ಸಾದ ಹಿರಿಯರಿಗೆ ಸಾಕಷ್ಟು ಸಹಾಯವಾಗುತ್ತದೆ. ಬನ್ನಿ ಈ ಲೇಖನದಲ್ಲಿ ಆನ್ಲೈನ್ನಲ್ಲಿ ಸಿಗುವ ವಿವಿಧ ಡಿಜಿಟಲ್ ಬಿಪಿ ಮಷೀನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Dr Trust Smart Blood Pressure Monitor:


ಇದೊಂದು ಕಪ್ಪುಬಣ್ಣದ ಆಟೋಮೆಟಿಕ್ ಡಿಜಿಟಲ್ ಬಿಪಿ ಮಾನಿಟರ್ ಆಗಿದೆ ಮತ್ತು ಇದನ್ನು ಬಳಸಲು ಕೂಡ ತುಂಬಾ ಸುಲಭ ಎಂದು ಹೇಳಬಹುದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಇದು ಹಗುರವಾಗಿರುತ್ತದೆ. ನೀವು ಟ್ರಾವೆಲ್ ಮಾಡುವಾಗ ಇದನ್ನು ನಿಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ನಿಖರವಾದ ಪರೀಕ್ಷೆಯ ಫಲಿತಾಂಶವನ್ನು ಇದು ನೀಡಬಲ್ಲದು. ನಿಮ್ಮ ಹೃದಯದ ಬಡಿತ ಎಷ್ಟಿದೆ ಎಂಬುದನ್ನು ಸಹ ನೀವು ಇದರಿಂದ ತಿಳಿದುಕೊಳ್ಳಬಹುದು. GET THIS


Omron Automatic Digital Blood Pressure Monitor:


ಆನ್ಲೈನಲ್ಲಿ ಈಗಾಗಲೇ ಗ್ರಾಹಕರಿಂದ 4.5 ಸ್ಟಾರ್ ರೇಟಿಂಗ್ ಪಡೆದಿರುವ ಡಿಜಿಟಲ್ ಬಿಪಿ ಮೆಷಿನ್ ಇದಾಗಿದೆ. ಇಂಟಲಿಜೆನ್ಸ್ ತಂತ್ರಜ್ಞಾನದೊಂದಿಗೆ ತಯಾರು ಮಾಡಲಾಗಿರುವ ಈ ಬಿಪಿ ಮಷೀನ್ ಸಂಪೂರ್ಣ ಆಟೋಮ್ಯಾಟಿಕ್ ವಿಧಾನದಲ್ಲಿ ಕೆಲಸ ಮಾಡುತ್ತದೆ. ಸದ್ಯ ನಿಮ್ಮ ರಕ್ತದ ಒತ್ತಡ ಎಷ್ಟಿದೆ ಎಂಬುದನ್ನು ನಿಖರವಾಗಿ ನಿಮಗೆ ತಿಳಿಸಬಲ್ಲ ಮಷೀನ್ ಇದಾಗಿದೆ. ನಿಮ್ಮ ಅನಿಯಮಿತ ಹೃದಯ ಬಡಿತವನ್ನು ಸಹ ಇದರಿಂದ ಪತ್ತೆ ಹಚ್ಚಿಕೊಳ್ಳಬಹುದು. GET THIS


Beurer blood pressure monitor:


ಸ್ವಲ್ಪ ದೊಡ್ಡ ಎಲ್ಸಿಡಿ ಡಿಸ್ಪ್ಲೇ ಒಳಗೊಂಡಿರುವ ಬಿಪಿ ಮೆಷೀನ್ ಇದಾಗಿದೆ. ಇದರಲ್ಲಿ ನಿಮಗೆ ಬಿಪಿ ಮಾಹಿತಿ ಮತ್ತು ಪಲ್ಸ್ ಫಲಿತಾಂಶ ಎರಡು ಕೂಡ ಸಿಗಲಿದೆ. ನಿಮ್ಮ ಅನಿಯಮಿತ ಬಡಿತವನ್ನು ಪತ್ತೆ ಹಚ್ಚಿಕೊಳ್ಳುವ ಜೊತೆಗೆ 22ರಿಂದ 36 ಸೆಂಟಿಮೀಟರ್ ಹ್ಯಾಂಡ್ ಕಫ್ ಕೂಡ ಸಿಗಲಿದೆ. GET THIS


BPL Medical Technologies:


ಇದನ್ನು CE ಪ್ರಮಾಣಿಕೃತ ಡಿಜಿಟಲ್ ಬಿಪಿ ಮೆಷಿನ್ ಎಂದು ಹೇಳಬಹುದು. ನಿಖರವಾಗಿ ನಿಮ್ಮ ಸದ್ಯದ ರಕ್ತದ ಒತ್ತಡವನ್ನು ಇದು ನಿಮಗೆ ತಿಳಿಸಿಕೊಡುತ್ತದೆ. ಯುಎಸ್ಬಿ ಆಪನ್ ಕೂಡ ಇದರಲ್ಲಿ ಇರುವುದರಿಂದ ನಿಮ್ಮ ಬಳಕೆಗೆ ಇದು ಅನುಕೂಲಕರವಾಗಿದೆ. ಎಲ್ಲಿಯಾದರೂ ಹೊರಗಡೆ ಹೋದಂತಹ ಸಂದರ್ಭದಲ್ಲಿ ನೀವು ಇದನ್ನು ಜೊತೆಯಲ್ಲಿ ಕೊಂಡೊಯ್ಯಬಹುದು. GET THIS


Mievida Blood Pressure Monitor:


ಇದೊಂದು ಸ್ಮಾರ್ಟ್ ಮೂರುಬಣ್ಣದ ಡಿಸ್ಪ್ಲೇ ಹೊಂದಿರುವ ಬಿಪಿ ಮೋನಿಟರ್ ಆಗಿದೆ. ಇದರಲ್ಲಿ 4.3 ಇಂಚ್ ಡಿಜಿಟಲ್ ಡಿಸ್ಪ್ಲೇ ಇರಲಿದ್ದು, ಡ್ಯುಯಲ್ ಯೂಸರ್ ಮತ್ತು ವಾಯ್ಸ್ ವೈಶಿಷ್ಟತೆಯನ್ನು ಸಹ ಇದು ಒಳಗೊಂಡಿದೆ. ಇಂಟಲಿಜೆಂಟ್ ಪ್ರೆಶರ್ ತಂತ್ರಜ್ಞಾನದಲ್ಲಿ ಇದು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲಿದೆ ಮತ್ತು ನಿಖರವಾದ ಬಿಪಿ ರೀಡಿಂಗ್ ಕೊಡಲಿದೆ. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ