ಆ್ಯಪ್ನಗರ

ಉಚಿತ ಕರೆ, ಹುಳ್ಳಿ ಸಂಗಟಿ

ಶ್ರೀಶೈಲ ಪಾದಯಾತ್ರಿಗಳಿಗೆ ಇಲ್ಲಿನ ಸಿದ್ದೇಶ್ವರ, ಸಿದ್ದಲಿಂಗೇಶ್ವರ ಸೇವಾ ಸಮಿತಿಯವರು ನಾನಾ ಸೇವೆಗಳನ್ನು ಕೈಗೊಂಡು ಮಲ್ಲಯ್ಯನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ.

ವಿಕ ಸುದ್ದಿಲೋಕ 25 Mar 2016, 8:22 pm
ಶಿರೂರ: ಶ್ರೀಶೈಲ ಪಾದಯಾತ್ರಿಗಳಿಗೆ ಇಲ್ಲಿನ ಸಿದ್ದೇಶ್ವರ, ಸಿದ್ದಲಿಂಗೇಶ್ವರ ಸೇವಾ ಸಮಿತಿಯವರು ನಾನಾ ಸೇವೆಗಳನ್ನು ಕೈಗೊಂಡು ಮಲ್ಲಯ್ಯನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ.
Vijaya Karnataka Web
ಉಚಿತ ಕರೆ, ಹುಳ್ಳಿ ಸಂಗಟಿ


ಜಮಖಂಡಿ, ಬೆಳಗಾವಿ, ಚಿಕ್ಕೋಡಿ, ರಾಯಭಾಗ, ಅಥಣಿ, ಮೂಧೋಳ, ತೇರದಾಳ, ಮಹಾಲಿಂಗಪುರ, ಬಾಗಲಕೋಟ, ಸೆರಿದಂತೆ ಸುಮಾರು 10.000 ಸಾವಿರಕ್ಕೂ ಹೆಚ್ಚು ಪದಯಾತ್ರೆಗಳು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಕಳೆದ ಮೂರು ದಿನಗಳಿಂದ ಯಾತ್ರಿಗಳ ಊಟಕ್ಕೆ ಹುಳ್ಳಿ (ಹುರುಳಿ) ಸಂಗಟಿಯ ಜತೆಗೆ ಖಡಕ್ ರೊಟ್ಟಿ, ಹಾಲುಗ್ಗಿ ಮತ್ತು ಬದನೆಕಾಯಿ ಪಲ್ಲೆ ಊಟದ ವ್ಯೆವಸ್ಥೆ ಮಾಡಲಾಗಿತ್ತು. ಜತೆಗೆ ಗ್ರಾಮದ ಮಹಿಳೆಯರು ತಮ್ಮ ಮನೆಯಿಂದ ರೊಟ್ಟಿ ನೀಡಿದ್ದು, ರೊಟ್ಟಿ ಸಂಖ್ಯೆ 20, 000ಕ್ಕೂ ಹೆಚ್ಚಿದೆ. ನಡೆದುಕೊಂಡು ಬರುವ ಯಾತ್ರಿಗಳು ಬಿಸಿಲಿನ ತಾಪದಿಂದ ಬಸವಳಿದದ್ದರೆ ಅವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಗ್ರಾಮದ ಉತ್ಸಾಹಿ ಯುವಕರು ಯಾತ್ರಿಕರಿಗೆ ಮಸಾಜ್ ಮಾಡುತ್ತಿದ್ದಾರೆ.

ಮೊಬೈಲ್ ಸೇವೆ: ದೂರದ ಊರುಗಳಿಂದ ಹೊರಟಿರುವ ಪಾದಯಾತ್ರಿಗಳಿಗೆ ತಮ್ಮ ಕುಟುಂದವರ ಜತೆ ಮಾತನಾಡಲು ಸಮಿತಿಯವರು ಉಚಿತ ಮೊಬೈಲ್ ಕರೆ ಸೇವೆ ಒದಗಿಸಿದ್ದಾರೆ. 11 ವರ್ಷಗಳಿಂದ ಶಿರೂರು ಗ್ರಾಮಸ್ಥರು ಪಾದಯಾತ್ರಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಸ್ಥಳೀಯ ಗ್ರಾಪಂದಿಂದ ಉಚಿತವಾಗಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ