Please enable javascript.ಗ್ರಾಮದೇವತೆ ಜಾತ್ರೆ - ಗ್ರಾಮದೇವತೆ ಜಾತ್ರೆ - Vijay Karnataka

ಗ್ರಾಮದೇವತೆ ಜಾತ್ರೆ

ವಿಕ ಸುದ್ದಿಲೋಕ 22 Apr 2012, 1:15 am
Subscribe

ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮದ ಅಮೀನಗಡ ಗ್ರಾಮದೇವತೆ ಜಾತ್ರೆ ಏ.24ರಿಂದ 28ರವರೆಗೆ ಜರುಗಲಿದೆ. ಏ.24ರಂದು ಬೆಳಗ್ಗೆ 5ಕ್ಕೆ ದೇವಿಗೆ ಅಭಿಷೇಕ, 8.30ಕ್ಕೆ ಮೆರವಣಿಗೆ ಜರುಗಲಿದೆ.

ಗ್ರಾಮದೇವತೆ ಜಾತ್ರೆ

ಅಮೀನಗಡ : ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮದ ಗ್ರಾಮದೇವತೆ ಜಾತ್ರೆ ಏ.24ರಿಂದ 28ರವರೆಗೆ ಜರುಗಲಿದೆ. ಏ.24ರಂದು ಬೆಳಗ್ಗೆ 5ಕ್ಕೆ ದೇವಿಗೆ ಅಭಿಷೇಕ, 8.30ಕ್ಕೆ ಮೆರವಣಿಗೆ ಜರುಗಲಿದೆ.

ಮಧ್ಯಾಹ್ನ 12.30ಕ್ಕೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 1ಕ್ಕೆ ಇಸ್ಲಾಂ ಕಮೀಟಿಯವರಿಂದ ಅನ್ನಸಂತರ್ಪಣೆ ನಡೆಯಲಿದೆ. ನಂತರ 5ಕ್ಕೆ ಪಾದಗಟ್ಟೆಯ ಮೇಲೆ ದೇವಿಯ ಮೂರ್ತಿ ಪ್ರತಿಷ್ಠಾಪಣೆಗೊಳ್ಳಲಿದೆ. ಸಂಜೆ 6ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದಿ.25 ರಂದು ಬೆಳಿಗ್ಗೆ 9ಕ್ಕೆ ಸೈಕಲ್ ರೇಸ್, 9.30ಕ್ಕೆ ಕ್ರಿಕೆಟ್ ಟೂರ್ನಾಮೆಂಟ್, 3ಕ್ಕೆ ಟಗರಿನ ಕಾಳಗ ಹಾಗೂ ರಾತ್ರಿ 10ಕ್ಕೆ ನಾಟಕ ನಡೆಯಲಿದೆ.

ದಿ.26 ರಂದು ಬೆಳಿಗ್ಗೆ 9ಕ್ಕೆ ಸಂಗ್ರಾಣಿ ಕಲ್ಲು ಹಾಗೂ ಜೋಳದ ಚೀಲ ಎತ್ತುವ ಸ್ಪರ್ಧೆ, 3ಕ್ಕೆ ಕೇರಂ ಹಾಗೂ ಚೆಸ್ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಸಂಗೀತ ಸಂಜೆ, ದಿ.27ರಂದು ಮಧ್ಯಾಹ್ನ 1ಕ್ಕೆ ಪುಟ್ಟಿ ಬಂಡಿ ರೇಸ್, ರಾಜು ಬದಾಮಿ ಅವರಿಂದ ನಗೆ ಸಂಜೆ ಕಾರ್ಯಕ್ರಮ ನಡೆಲಿಯಲಿದೆ.

ದಿ.28 ಬೆಳಗ್ಗೆ 9ಕ್ಕೆ ದೇವಿ ಮೆರವಣಿಗೆ, ಹೋಮ ಹವನ ಯಜ್ಞದ ನಂತರ 12.30ಕ್ಕೆ ಗರ್ಭಗುಡಿ ಪ್ರವೇಶ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ನಾಟಕ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮಗಳ್ಲಲಿ ಪಾಲ್ಗೊಳ್ಳಬೇಕೆಂದು ಜಾತ್ರೆಸಮಿತಿ ಮನವಿ ಮಾಡಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ