Please enable javascript.ಕುಡಿವ ನೀರು ಖಾಸಗೀಕರಣಕ್ಕೆ ವಿರೋಧ - ಕುಡಿವ ನೀರು ಖಾಸಗೀಕರಣಕ್ಕೆ ವಿರೋಧ - Vijay Karnataka

ಕುಡಿವ ನೀರು ಖಾಸಗೀಕರಣಕ್ಕೆ ವಿರೋಧ

Vijaya Karnataka Web 20 Jul 2012, 7:39 pm
Subscribe

ಬಾಗಲಕೋಟ: ಕುಡಿವ ನೀರು ಖಾಸಗೀಕರಣ ವಿರೋಧಿಸಿ ನಾನಾ ಮಹಿಳಾ ಸಂಘಟನೆಗಳು ಶುಕ್ರವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದವು.

ಕುಡಿವ ನೀರು ಖಾಸಗೀಕರಣಕ್ಕೆ ವಿರೋಧ
ಬಾಗಲಕೋಟ: ಕುಡಿವ ನೀರು ಖಾಸಗೀಕರಣ ವಿರೋಧಿಸಿ ನಾನಾ ಮಹಿಳಾ ಸಂಘಟನೆಗಳು ಶುಕ್ರವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದವು.

ನಗರದ 200 ಕ್ಕೂ ಅಧಿಕ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಸಮಖ್ಯ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ನೀರಿನ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿರಸಗಿ ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು.

ನೀರು ಪ್ರಾಕೃತಿಕ ಸಂಪನ್ಮೂಲ,ಸರ್ವರಿಗೂ ಸೇರಿದ ನೀರನ್ನು ಮಾರಾಟ ಮಾಡಿ ಬರಿದು ಮಾಡಲು ಹೊರಟ ರಾಷ್ಟ್ರೀಯ ನೀತಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ನೀತಿಯನ್ನು ಕೈಬಿಡಬೇಕು. ಈಗಾಗಲೇ ಕೆರೆ, ನದಿ, ಜಲಾಶಯಗಳ ನಿರ್ವಹಣೆ ಹಾಗೂ ಅದನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ರಾಜ್ಯದ ನೀರಿನ ಮೂಲಗಳನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುತ್ತಿರುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರ ರಾಷ್ಟ್ರೀಯ ನೀರಿನ ನೀತಿ 2012 ನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಮಹಿಳಾ ಸಮಖ್ಯ, ನವಚೇತನ ಮಹಿಳಾ ಒಕ್ಕೂಟ, ಪ್ರಗತಿ ಮಹಿಳಾ ಒಕ್ಕೂಟ, ಸ್ಫೂರ್ತಿ ಮಹಿಳಾ ಒಕ್ಕೂಟ, ಜ್ಞಾನಜ್ಯೋತಿ ಮಹಿಳಾ ಒಕ್ಕೂಟ, ಕಾಮಧೇನು ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಡೆದ ಮೆರವಣಿಗೆಯಲ್ಲಿ ಪಾರ್ವತಿ ಹಿರೇಮಠ, ಇಂದ್ರವ್ವ ಚಲವಾದಿ, ಮೀನಾಕ್ಷಿ ಗೌಡರ, ಉದ್ದವ್ವ ಗೌಡರ, ಪುಷ್ಪಾ ಪಾಟೀಲ ಮತ್ತಿತರರು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ