Please enable javascript.‘ಕುಡಿವ ನೀರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ’ - ‘ಕುಡಿವ ನೀರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ’ - Vijay Karnataka

‘ಕುಡಿವ ನೀರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ’

Vijaya Karnataka Web 7 Jul 2014, 5:03 pm
Subscribe

‘‘ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಗ್ರಾಮೀಣ ಹಾಗೂ ನಗರದ ಜನರಿಗೆ ಮಾನವೀಯತೆ ಆಧಾರದ ಮೇಲೆ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು’’ಎಂದು ಶಾಸಕ ಗೋವಿಂದ ಕಾರಜೋಳ ಅಧಿಕಾರಿಗಳಿಗೆಸೂಚಿಸಿದರು.

‘ಕುಡಿವ ನೀರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ’
ಮುಧೋಳ: ‘‘ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಗ್ರಾಮೀಣ ಹಾಗೂ ನಗರದ ಜನರಿಗೆ ಮಾನವೀಯತೆ ಆಧಾರದ ಮೇಲೆ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು’’ಎಂದು ಶಾಸಕ ಗೋವಿಂದ ಕಾರಜೋಳ ಅಧಿಕಾರಿಗಳಿಗೆ
ಸೂಚಿಸಿದರು.

ಶನಿವಾರ ಸಂಜೆ ತಾಪಂ ಸಭಾ ಭವನದಲ್ಲಿ ಕರೆದಿದ್ದ ಅಧಿಕಾರಿಗಳ ತುರ್ತು ಕುಡಿವ ನೀರಿನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘‘ಪ್ರತಿಯೊಂದು ಪ್ರದೇಶದಲ್ಲಿ ನೀರಿನ ಸಮಸ್ಯೆಯಿದ್ದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಖಾಸಗಿ ವ್ಯಕ್ತಿಗಳಿಂದ ನೀರು ಪಡೆದು ಹೆಸ್ಕಾಂ ಬಿಲ್ ಪಾವತಿಸಬೇಕು. ಮಾನವೀಯತೆ ಆಧಾರದ ಮೇಲೆ ಅಧಿಕಾರಿಗಳು ಕೆಲಸ ಮಾಡಿದರೆ ಪುಣ್ಯಬರುತ್ತದೆ’’ಎಂದು
ಶಾಸಕರು ತಿಳಿಸಿದರು.

‘‘ಹಲಗಲಿ, ಮೆಳ್ಳಿಗೇರಿ, ಮಂಟೂರ ಹಾಗೂ ಮರಕಟ್ಟಿಯಲ್ಲಿ ವಿದ್ಯುತ್ ಪೂರೈಕೆಗೆ ಮೂರು ದಿನಗಳ ಗಡುವು ನೀಡಬೇಕು. ಶಾಲೆ, ಹಾಸ್ಟೇಲ್, ಅಂಗನವಾಡಿ ಕೇಂದ್ರಗಳಲ್ಲಿ ಕುಡಿವ ನೀರು ಪೂರೈಕೆ ಸರಿಯಾಗಿ ಆಗಬೇಕು. ಜಾನುವಾರುಗಳಿಗೆ ತೊಂದರೆಯಾಗದಂತೆ
ಮೇವಿನ ಬ್ಯಾಂಕ್ ಮಾಡಬೇಕು. ಗೋಶಾಲೆ ತೆರೆಯಲು ಸರಕಾರಕ್ಕೆ ತಹಸೀಲ್ದಾರ್ ಮೂಲಕ ಪ್ರಸ್ತಾವನೆ ಕಳುಹಿಸಬೇಕು’’ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘‘10 ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಸೂಚಿಸಲಾಗಿದೆ. ಮುಧೋಳದ ಆನಂದನಗರ, ಬೆಳಗಲಿ ಹಾಗೂ ಮುಗಳಖೋಡ ಗ್ರಾಮಗಳಿಗೆ ಕುಡಿವ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು’’ಎಂದರು.

ತಹಸೀಲ್ದಾರ್ ಬಾಬಾಗೌಡ ಪಾಟೀಲ, ತಾಪಂ ಇಒ ಸಿ.ಎಸ್.ಚೌಕಿಮಠ, ಬಿಇಒ ಜಿ.ಎನ್.ಮಠಪತಿ, ಅಶೋಕ ಪಾಟೀಲ ಇದ್ದರು.

ಮಳೆ ಬಂದರೆ ಯಾವುದೇ ತೊಂದರೆಯಿಲ್ಲ. ಮಳೆ ಅಭಾವ ಆಗುವ ಮುನ್ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಗತವಾಗಬೇಕು. ಜಿಪಂ, ಹೆಸ್ಕಾಂ, ಪಂಚಾಯತ್ ಇಲಾಖೆ ಸಹಯೋಗದಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು. ಮಳೆ ಚೆನ್ನಾಗಿ ಆಗುವವರೆಗೂ ಕುಡಿವ ನೀರಿನ ವಿಷಯದಲ್ಲಿ ಎಚ್ಚರವಹಿಸಬೇಕು.
- ಗೋವಿಂದ ಕಾರಜೋಳ, ಶಾಸಕರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ