Please enable javascript.ತೊದಲಬಾಗಿ: ಸ್ವಚ್ಛತೆ ಕೈಗೊಳ್ಳಲು ಆಗ್ರಹ - ತೊದಲಬಾಗಿ: ಸ್ವಚ್ಛತೆ ಕೈಗೊಳ್ಳಲು ಆಗ್ರಹ - Vijay Karnataka

ತೊದಲಬಾಗಿ: ಸ್ವಚ್ಛತೆ ಕೈಗೊಳ್ಳಲು ಆಗ್ರಹ

Vijaya Karnataka Web 28 Sep 2014, 4:13 pm
Subscribe

ತಾಲೂಕಿನ ತೊದಲಬಾಗಿ ಗ್ರಾಮದ ಭಜಂತ್ರಿ ಕಾಲೊನಿಯಲ್ಲಿ ಚರಂಡಿ ಶುಚಿಗೊಳಿಸದ ಪರಿಣಾಮ ತಗ್ಗು ಪ್ರದೇಶದಲ್ಲಿ ಮಲಿನ ನೀರು ನಿಂತು ರೋಗ ಹರಡುತ್ತಿದ್ದು, ಕೂಡಲೇ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕಾಲೊನಿ ನಿವಾಸಿಗಳು ಆಗ್ರಹಿಸಿದ್ದಾರೆ.

ತೊದಲಬಾಗಿ: ಸ್ವಚ್ಛತೆ ಕೈಗೊಳ್ಳಲು ಆಗ್ರಹ
ಜಮಖಂಡಿ: ತಾಲೂಕಿನ ತೊದಲಬಾಗಿ ಗ್ರಾಮದ ಭಜಂತ್ರಿ ಕಾಲೊನಿಯಲ್ಲಿ ಚರಂಡಿ ಶುಚಿಗೊಳಿಸದ ಪರಿಣಾಮ ತಗ್ಗು ಪ್ರದೇಶದಲ್ಲಿ ಮಲಿನ ನೀರು ನಿಂತು ರೋಗ ಹರಡುತ್ತಿದ್ದು, ಕೂಡಲೇ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕಾಲೊನಿ ನಿವಾಸಿಗಳು ಆಗ್ರಹಿಸಿದ್ದಾರೆ.

ಚರಂಡಿಯಲ್ಲಿ ಕಸ ಕಡ್ಡಿ ಬಿದ್ದು ಸಂಪೂರ್ಣ ಮುಚ್ಚಿ ಹೋಗಿದೆ. ಹೀಗಾಗಿ ಚರಂಡಿ ನೀರು ಸಮರ್ಪಕವಾಗಿ ಹರಿಯದೆ ರಸ್ತೆ ತಗ್ಗು ಪ್ರದೇಶದಲ್ಲಿ ಮಲಿನ ನೀರು ನಿಲ್ಲುವುದು ಸಾಮಾನ್ಯವಾಗಿದೆ ಎಂದು ದೂರಿದ್ದಾರೆ.

ಈಗಾಗಲೇ ಹಲವು ಬಾರಿ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಗಮನ ಸೆಳೆಯಲಾಗಿದೆ. ಅದೇ ರೀತಿ ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಮಲಿನ ನೀರಿನಿಂದ ದುರ್ವಾಸನೆ ಮತ್ತು ರೋಗಗಳು ಹರಡುವ ಸಾಧ್ಯತೆಯಿದ್ದು, ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟ ಜಿಲ್ಲಾ ಕೊರವ ಸಮಾಜದ ನಿರ್ದೇಶಕ ರಮೇಶ ಭಜಂತ್ರಿ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ