Please enable javascript.ಬಾಲಕಿಯರ ದಿಢೀರ್ ಪ್ರತಿಭಟನೆ - ಬಾಲಕಿಯರ ದಿಢೀರ್ ಪ್ರತಿಭಟನೆ - Vijay Karnataka

ಬಾಲಕಿಯರ ದಿಢೀರ್ ಪ್ರತಿಭಟನೆ

Vijaya Karnataka Web 6 Dec 2014, 7:24 pm
Subscribe

ಇಲ್ಲಿನ ಸರಕಾರಿ ಹೈಸ್ಕೂಲ್‌ನಲ್ಲಿ ಸಮರ್ಪಕ ಕುಡಿವ ನೀರು, ಶೌಚಾಲಯ ಸೇರಿ ಮೂಲ ಸೌಕರ‌್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಿಢೀರ್ ವರ್ಗ ಬಹಿಷ್ಕರಿಸಿ ಬಾಲಕಿಯರು ಪ್ರತಿಭಟನೆ ನಡೆಸಿದರು.

ಬಾಲಕಿಯರ ದಿಢೀರ್ ಪ್ರತಿಭಟನೆ
ಜಮಖಂಡಿ: ಇಲ್ಲಿನ ಸರಕಾರಿ ಹೈಸ್ಕೂಲ್‌ನಲ್ಲಿ ಸಮರ್ಪಕ ಕುಡಿವ ನೀರು, ಶೌಚಾಲಯ ಸೇರಿ ಮೂಲ ಸೌಕರ‌್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಿಢೀರ್ ವರ್ಗ ಬಹಿಷ್ಕರಿಸಿ ಬಾಲಕಿಯರು ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ ಕುಡಿವ ನೀರಿನ ಟ್ಯಾಂಕ್ ತೊಳೆದು ಅದೆಷ್ಟೋ ದಿನ ಕಳೆದಿದ್ದು, ಅದರಲ್ಲಿ ಪಾಚಿ ಬೆಳೆದು ನೀರು ಮಲಿನಗೊಂಡು ದುರ್ವಾಸನೆ ಬರುತ್ತಿದೆ. ಅಂಥ ನೀರು ಕುಡಿದು ಅನಾರೋಗ್ಯ ಎದುರಿಸುವಂತಾಗಿದೆ ಎಂದು ಬಾಲಕಿಯರು ದೂರಿದರು. ಶೌಚಾಲಯ, ಮೂತ್ರಾಲಯಗಳಿಗೆ ನೀರಿನ ವ್ಯವಸ್ಥೆಯಿಲ್ಲದೇ ಗಬ್ಬೆದ್ದು ನಾರುತ್ತಿದೆ. ಮಕ್ಕಳು ಅದರೊಳಗೆ ಕಾಲಿಡಲು ಆಗದ ಸ್ಥಿತಿಯಿದೆ. ಇನ್ನು ಶಾಲೆಯಲ್ಲಿ ಕಸಗೂಡಿಸಲು ಕೇವಲ ಒಬ್ಬ ಮಹಿಳೆ ಮಾತ್ರ ಇರುವ ನೆಪವೊಡ್ಡಿ ಕೋಣೆಯಲ್ಲಿ ಕಸದ ರಾಶಿ ಹರಡಿರುತ್ತದೆ. ಶಾಲಾ ಮಕ್ಕಳೇ ಕಸಗೂಡಿಸಿಕೊಳ್ಳುವುದು ಅನಿವಾರ‌್ಯವಾಗಿದೆ ಎಂದು ದೂರಿದರು. ಪೋಕರಿಗಳ ಕಾಟ: ಬಾಲಕಿಯರು ಶೌಚಾಲಯ, ಮೂತ್ರಾಲಯಕ್ಕೆಂದು ಹೋದ ಗಳಿಗೆಯಲ್ಲಿ ಕಾಂಪೌಂಡ್ ಮೇಲೆ ಪೋಕರಿಗಳು ಕುಳಿತು ಕೀಟಲೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಕಚೇರಿ ಬಿದ್ದಿರುವ ಕಟ್ಟಡದಿಂದ ಪುಂಡಪೋಕರಿಗಳು ಒಳಗೆ ನುಗ್ಗಿ ಕಿರಿಕಿರಿ ನೀಡುತ್ತಿದ್ದಾರೆಂದು ಬಾಲಕಿಯರು ಗಂಭೀರವಾಗಿ ದೂರಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದರೂ ಇದುವರೆಗೆ ಕನ್ನಡ ಶಿಕ್ಷಕರು ಬಂದಿಲ್ಲ. ಪಾಠ ಮಾಡಿಲ್ಲ. ಕೆಲವು ಪುಸ್ತಕಗಳನ್ನು ಕೂಡ ನೀಡಿಲ್ಲವೆಂದು ದೂರಿದರು. ಒಂದೆರಡು ದಿನಗಳಲ್ಲಿ ಮೂಲ ಸೌಕರ‌್ಯ ವ್ಯವಸ್ಥೆಗೊಳಿಸಬೇಕು. ಇಲ್ಲದೇ ಹೋದಲ್ಲಿ ವರ್ಗ ಬಹಿಷ್ಕರಿಸಿ ಮತ್ತೆ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಬಾಲಕಿಯರು ಗಡುವು ನೀಡಿದರು.

ಪತ್ರಕರ್ತರಿಗೆ ದರ್ಶನ: ತಮ್ಮ ಶಾಲೆಯಲ್ಲಿರುವ ಶೌಚಾಲಯ, ಮೂತ್ರಾಲಯ ಅವ್ಯವಸ್ಥೆ ಬಗ್ಗೆ ಸ್ವತಃ ಬಾಲಕಿಯರು ಪತ್ರಕರ್ತರಿಗೆ ದರ್ಶನ ಮಾಡಿಸಿದರು. ಶೌಚಾಲಯ, ಮೂತ್ರಾಲಯಗಳಿಗೆ ಹನಿ ನೀರಿಲ್ಲದೇ ದುರ್ವಾಸನೆ ಗಬ್ಬೆದ್ದು ನಾರುತ್ತಿರುವುದು ಕಂಡು ಬಂತು. ‘‘ಇಂಥದರಲ್ಲಿ ನಾವು ಹೇಗೆ ಇದನ್ನು ಉಪಯೋಗಿಸಬೇಕು, ನೀವೇ ಹೇಳ್ರೀ’’ ಎಂದು ಬಾಲಕಿಯರು ಖಡಕ್ಕಾಗಿ ಪತ್ರಕರ್ತರಿಗೆ ಪ್ರಶ್ನಿಸಿದರು.

ಉಪಪ್ರಾಚಾರ್ಯರ ಹೇಳಿಕೆ: ಶಾಲೆಗೆ ಕಸಗೂಡಿಸಲು ಒಬ್ಬ ಮಹಿಳೆ ಮಾತ್ರ ಇದ್ದಾರೆ. ಕುಡಿವ ನೀರಿನ ಟ್ಯಾಂಕ್ ತೊಳೆಯಲು ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಶುಚಿಯಾಗಿಡಲು ತೊಂದರೆಯಾಗಿರುವುದು ನಿಜ. ಪುಂಡಪೋಕರಿಗಳ ನಿಯಂತ್ರಣಕ್ಕೆ ನಗರಸಭೆ ಕಚೇರಿಯ ಬಿದ್ದಿರುವ ಗೋಡೆ ನಿರ್ಮಿಸಲು ಈಗಾಗಲೇ ಸಂಬಂಧಿಸಿದವರಿಗೆ ಕೇಳಿಕೊಳ್ಳಲಾಗಿದೆ. - ಸಿ.ಎಸ್.ಪಾಟೀಲ ಜಿ.ಜಿ.ಹೈಸ್ಕೂಲ್ ಉಪಪ್ರಾಚಾರ್ಯ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ