Please enable javascript.ನಗರಸಭೆ ಉಳಿತಾಯ ಬಜೆಟ್ - ನಗರಸಭೆ ಉಳಿತಾಯ ಬಜೆಟ್ - Vijay Karnataka

ನಗರಸಭೆ ಉಳಿತಾಯ ಬಜೆಟ್

Vijaya Karnataka Web 25 Mar 2015, 8:02 pm
Subscribe

ಪ್ರಸಕ್ತ ಸಾಲಿನಲ್ಲಿ 44 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ ಎಂದು ಪ್ರಭಾರಿ ಪೌರಾಯುಕ್ತ ಸಂಗಮೇಶ ಬ್ಯಾಳಿ ತಿಳಿಸಿದ್ದಾರೆ.

ನಗರಸಭೆ ಉಳಿತಾಯ ಬಜೆಟ್
ಮುಧೋಳ : ಪ್ರಸಕ್ತ ಸಾಲಿನಲ್ಲಿ 44 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ ಎಂದು ಪ್ರಭಾರಿ ಪೌರಾಯುಕ್ತ ಸಂಗಮೇಶ ಬ್ಯಾಳಿ ತಿಳಿಸಿದ್ದಾರೆ.

ನಗರಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ. ಆಸ್ತಿ ತೆರಿಗೆಯಿಂದ 1.25 ಕೋಟಿ ರೂ., ಅಂಗಡಿ ಬಾಡಿಗೆ-46 ಲಕ್ಷ ರೂ. ಕಟ್ಟಡ ಪರವಾನಗಿ 27 ಲಕ್ಷ ರೂ., ನಿವೇಶನ ಅಭಿವೃದ್ಧಿ ಶುಲ್ಕ 45 ಲಕ್ಷ ರೂ., ಸಂಗ್ರಹಣಾ ಮೇಲ್ವಿಚಾರಣೆ ಶುಲ್ಕ 65 ಲಕ್ಷ ರೂ., ಎಲ್ಲ ಮೂಲಗಳಿಂದ 2.4 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.

ಸಾಮೂಹಿಕ ಶೌಚಾಲಯ ನಿರ್ಮಾಣ-25 ಲಕ್ಷ ರೂ., ಬಸ್ ಸೆಲ್ಟರ್ ನಿರ್ಮಾಣ 35 ಲಕ್ಷ ರೂ., ರಸ್ತೆ ಚರಂಡಿ ನಿರ್ವಹಣೆ-55 ಲಕ್ಷ ರೂ., ಸಾರ್ವಜನಿಕ ಉದ್ಯಾನವನ ನಿರ್ವಹಣೆ-14 ಲಕ್ಷ ರೂ., ಕೊಳವೆಬಾವಿ, ಹೊಸ ಪೈಪ್‌ಲೈನ್ ಕಿರು ನೀರು ಸರಬರಾಜು ವ್ಯವಸ್ಥೆ 1.10 ಕೋಟಿ ರೂ. ಬಂಡವಾಳ ಖಾತೆಯಲ್ಲಿ 9.20 ಕೋಟಿ ರೂ. ಇದೆ ಎಂದು ವಿವರಿಸಿದರು.

ಕುಡಿವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಇಲ್ಲವಾಗಿದೆ. ಯಾವುದೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ನೀಲವ್ವಾ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಬೇರ ಲಮಾಣಿ, ಸೈಯದ್ ಮುಲ್ಲಾ, ಭಾರತಿ ಜೋಶಿ, ವಿನಾಯಕ ಕುಲಕರ್ಣಿ, ಲೆಕ್ಕಾಧಿಕಾರಿ ಎಂ.ಆರ್.ನದಾಫ್ ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ