Please enable javascript.ಪುನರ್ವಸತಿ ಕೇಂದ್ರಕ್ಕಾಗಿ ಭೂ ಸ್ವಾಧೀನ - ಪುನರ್ವಸತಿ ಕೇಂದ್ರಕ್ಕಾಗಿ ಭೂ ಸ್ವಾಧೀನ - Vijay Karnataka

ಪುನರ್ವಸತಿ ಕೇಂದ್ರಕ್ಕಾಗಿ ಭೂ ಸ್ವಾಧೀನ

Vijaya Karnataka Web 23 Sep 2015, 7:19 pm
Subscribe

ಜಮಖಂಡಿ ತಾಲೂಕಿನ ಅಸ್ಕಿ ಪುನರ್ವಸತಿ ಕೇಂದ್ರಕ್ಕಾಗಿ ಸ್ಥಾಪಿಸಿರುವ ಮದನಮಟ್ಟಿ ಗ್ರಾಮದ ರಿಸಂ.ನಂ.27/2 ರಲ್ಲಿ 49-02 ಎ/ಗುಂ ಜಮೀನು ‘ಬ’ ಖರಾಬ ಜಮೀನಾಗಿರುವುದರಿಂದ ‘ಬ’ಖರಾಬ ಶೀರ್ಷಿಕೆಯಿಂದ ವಿಹಿತಗೊಳಿಸಲು ಸರಕಾರದಿಂದ ಪೂರ್ವಾನುಮೋದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದ್ದಾರೆ.

ಪುನರ್ವಸತಿ ಕೇಂದ್ರಕ್ಕಾಗಿ ಭೂ ಸ್ವಾಧೀನ
ಬಾಗಲಕೋಟ: ಜಮಖಂಡಿ ತಾಲೂಕಿನ ಅಸ್ಕಿ ಪುನರ್ವಸತಿ ಕೇಂದ್ರಕ್ಕಾಗಿ ಸ್ಥಾಪಿಸಿರುವ ಮದನಮಟ್ಟಿ ಗ್ರಾಮದ ರಿಸಂ.ನಂ.27/2 ರಲ್ಲಿ 49-02 ಎ/ಗುಂ ಜಮೀನು ‘ಬ’ ಖರಾಬ ಜಮೀನಾಗಿರುವುದರಿಂದ ‘ಬ’ಖರಾಬ ಶೀರ್ಷಿಕೆಯಿಂದ ವಿಹಿತಗೊಳಿಸಲು ಸರಕಾರದಿಂದ ಪೂರ್ವಾನುಮೋದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದ್ದಾರೆ.

ಅಸ್ಕಿ ಗ್ರಾಮದ ಪುನರ್ವಸತಿ ಕೇಂದ್ರದ ಸಲುವಾಗಿ ಮದನಮಟ್ಟಿ ಗ್ರಾಮದ ರಿ.ಸಂ.ನಂ.27/2ರ ಕ್ಷೇತ್ರ 204-26 ಎ/ಗುಂ ಬಿನ್ ಆಕಾರ ‘ಬ’ ಖರಾಬ ಜಮೀನಿನ ಪೈಕಿ ಉತ್ತರ ಭಾಗದ 49-02 ಎ/ಗುಂ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68(2)ರಲ್ಲಿ ಚರ್ಚಿಸಿದಂತೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಆ ಆಸ್ತಿಯ ಮೇಲೆ ಇರುವ ಸಾರ್ವಜನಿಕ ಹಾಗೂ ಎಲ್ಲ ವ್ಯಕ್ತಿಗಳ ಹಕ್ಕುಗಳು ಅಳಿದು ಹೋಗುತ್ತವೆ.

ಯಾವುದೇ ತರಹದ ಆಕ್ಷೇಪಣೆ ಇದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 90 ದಿನಗಳೊಳಗಾಗಿ ಖುದ್ದಾಗಿ ಇಲ್ಲವೆ ವಕೀಲರ ಮುಖಾಂತರವಾಗಲಿ, ಲಿಖಿತವಾಗಿ ಆಗಲಿ ಜಿಲ್ಲಾಧಿಕಾರಿ ಕಚೇರಿ, ಬಾಗಲಕೋಟ ಅವರಿಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ