Please enable javascript.ಅಕ್ಷರ ದಾಸೋಹ ಲೋಪವಾಗದಂತೆ ಎಚ್ಚರ - ಅಕ್ಷರ ದಾಸೋಹ ಲೋಪವಾಗದಂತೆ ಎಚ್ಚರ - Vijay Karnataka

ಅಕ್ಷರ ದಾಸೋಹ ಲೋಪವಾಗದಂತೆ ಎಚ್ಚರ

Vijaya Karnataka Web 21 Jan 2016, 6:49 pm
Subscribe

ಸರಕಾರದ ಮಹತ್ವಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಅಕ್ಷರ ದಾಸೋಹದಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಸಹಾಯಕ ನಿರ್ದೇಶಕ ಭೀಮಪ್ಪ ತಳವಾರ ತಿಳಿಸಿದ್ದಾರೆ.

ಅಕ್ಷರ ದಾಸೋಹ ಲೋಪವಾಗದಂತೆ ಎಚ್ಚರ
ಮುಧೋಳ : ಸರಕಾರದ ಮಹತ್ವಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಅಕ್ಷರ ದಾಸೋಹದಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಸಹಾಯಕ ನಿರ್ದೇಶಕ ಭೀಮಪ್ಪ ತಳವಾರ ತಿಳಿಸಿದ್ದಾರೆ.

ತಾಲೂಕಿನ ಕೆಸರಗೊಪ್ಪ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಬಳಿಕ ವಿಜಯ ಕರ್ನಾಟಕ ಜತೆ ಅವರು ಮಾತನಾಡಿದರು. ಈ ಶಾಲೆಯಲ್ಲಿ ಸ್ವಚ್ಛತೆ, ರುಚಿ ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನ ನಾನಾ ಶಾಲೆಗಳಲ್ಲಿ ಬಿಸಿಊಟ ಆರಂಭದ ಮುಂಚೆ ಇಬ್ಬರೂ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಮಕ್ಕಳನ್ನು ಶಿಸ್ತು ಬದ್ಧವಾಗಿ ಸರದಿ ಮೇಲೆ ನಿಯಂತ್ರಣ ಮಾಡಿ ಊಟ ಮಾಡುವಂತೆ ಪ್ರೋತ್ಸಾಹ ನೀಡಬೇಕು. ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಕೆಲ ಶಾಲೆಗಳಲ್ಲಿ ಪಾಲನೆಯಾಗದೇ ಇರುವುದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಶುಚಿ ರುಚಿಯನ್ನು ಕಡ್ಡಾಯವಾಗಿ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉಣಬಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕೆ ಬಿಸಿಊಟ ವ್ಯವಸ್ಥೆ ಕುರಿತು ಅಧಿಕಾರಿಗಳು ಹಾಗೂ ಶಿಕ್ಷಕರ ಸಮುದಾಯವನ್ನು ಎಚ್ಚರಗೊಳಿಸುವಕೆಲಸ ಮಾಡಿರುವುದು ಅಭಿನಂದನರ್ಹಾ. ಲೋಪವಾದರೆ ಮೇಲಧಿಕಾರಿಗಳ ಮೂಲಕ ಜಿಪಂ ಸಿಇಒ ಅವರಿಗೆ ವರದಿ ನೀಡಲಾಗುವುದು ಎಂದು ತಳವಾರ ತಿಳಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಆನಂದ ಢವಳೇಶ್ವರ, ಮುಖ್ಯಗುರು ಸಿ.ವ್ಹಿ.ಚೌಧರಿ, ಶಿಕ್ಷಕರು ಹಾಗೂ ಮುಖ್ಯ ಅಡುಗೆದಾರ ಸರಿತಾ ಬ್ಯಾಕೂಡ ಇತರರು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ