ಆ್ಯಪ್ನಗರ

ವಚನ ಸಾಹಿತ್ಯ ಸಮ್ಮೇಳನ ಜು. 10,11 ರಂದು

ಜಿಲ್ಲೆಯ ಇಳಕಲ್‌ ತಾಲೂಕಿನ ಅನುಭವ ಮಂಟಪದಲ್ಲಿ ಜುಲೈ 10,11 ರಂದು 3ನೇ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಚನ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಎಂ.ವಿ ತ್ಯಾಗರಾಜ ಹೇಳಿದರು.

ವಿಕ ಸುದ್ದಿಲೋಕ 19 May 2017, 9:00 am

ಬಾಗಲಕೋಟ: ಜಿಲ್ಲೆಯ ಇಳಕಲ್‌ ತಾಲೂಕಿನ ಅನುಭವ ಮಂಟಪದಲ್ಲಿ ಜುಲೈ 10,11 ರಂದು 3ನೇ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಚನ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಎಂ.ವಿ ತ್ಯಾಗರಾಜ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಗೆ 4 ವರ್ಷಗಳಾಗಿದ್ದು, ಶಿವಶರಣರ ಚಿಂತನೆ ಹಾಗೂ ಜಾತ್ಯತೀತವನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಈ ಸಮ್ಮೇಳನದಿಂದ ವಿದ್ಯಾರ್ಥಿ ಸಮೂಹಕ್ಕೆ ಅನುಕೂಲವಾಗಲಿದೆ. ಸಮ್ಮೇಳನದಲ್ಲಿ ಎಲ್ಲ ಧರ್ಮ, ಜಾತಿಯವರು ಪಾಲ್ಗೊಂಡು ಜಾತಿ ನಿರ್ಮೂಲನೆಗೆ ಸಹಕರಿಸುವಂತೆ ಯವಜನತೆಗೆ ತಿಳಿಸಿದರು.

ಡಾ. ಮಹಾಂತ ಸ್ವಾಮಿಗಳು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಪ್ರತಿ ವರ್ಷ ಕೊಡಮಾಡುವ ಕಾಯಕಯೋಗಿ ಪ್ರಶಸ್ತಿಯನ್ನು ಇಬ್ರಾಹೀಂ ಸುತಾರ ಅವರಿಗೆ ಪ್ರದಾನ ಮಾಡಲಾಗುವುದು. ಮಠಾಧೀಶರು, ಸಾಹಿತಿಗಳು, ವಚನಕಾರರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಮಹಾಂತೇಶ ಗಜೇಂದ್ರಗಡÜ, ಎಂ.ಬಿ ಉಗರಗೊಳ, ಕಿರಣ ಬಸವಣಗೌಡ, ಎಸ್‌.ಬಿ.ಕರಬಾಶೆಟ್ಟಿ ಇದ್ದರು.

ಶಿಕ್ಷಕರ ಉದ್ಯೋಗ ಮೇಳ ಮೇ 21 ರಂದು

ಬಾಗಲಕೋಟ: ಶಿಕ್ಷಕರ ರಾಜ್ಯ ಮಟ್ಟದ ಉದ್ಯೋಗ ಮೇಳ ಮೇ 21ರಂದು ಬೆಳಗ್ಗೆ 9 ಗಂಟೆಗೆ ಕಾರವಾರ ಜಿಲ್ಲೆಯ ಬಾಲಮಂದಿರ ಹೈಸ್ಕೂಲ್‌ನಲ್ಲಿ ನಡೆಯಲಿದೆ ಎಂದು ಖಾಸಗಿ ಜಿಲ್ಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೆಡ್ಡಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ನೇಮಕಾತಿ ಒಕ್ಕೂಟದ ವತಿಯಿಂದ ಈ ಮೇಳ ನಡೆಯಲಿದೆ. ಶಿಕ್ಷಕರ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡುವುದು ಈ ಮೇಳದ ಉದ್ದೇಶವಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದ್ದು, ಡಿಎಡ್‌, ಎಂಎ, ಬಿಎಡ್‌, ಎಂಎಸ್ಸಿ ಸೇರಿದಂತೆ ಎಲ್ಲ ಅರ್ಹತೆ ಹೊಂದಿದವರು ಈ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು. ಹೊನ್ನೇಶ್‌ ವಡೆಯರ್‌, ವಾಗೀಶ್‌ ಹೆಚ್‌ ಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ