ಆ್ಯಪ್ನಗರ

ನಂಬರ್‌ ಕೇಳಿ 3.91ಲಕ್ಷ ರೂ.ಎಗರಿಸಿದ ಖದೀಮರು

ನಿಮ್ಮ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದೆ. ಕಾರ್ಡ್‌ ನಂಬರ್‌ ಹೇಳಿದರೆ ತಕ್ಷಣ ಆನ್‌ಲೈನ್‌ ಮೂಲಕ ಆ್ಯಕ್ಟಿವ್‌ ಮಾಡುತ್ತೇವೆ....

Vijaya Karnataka 16 Sep 2017, 8:46 am

ನಂಬರ್‌ ಕೇಳಿ 3.91ಲಕ್ಷ ರೂ.ಎಗರಿಸಿದ ಖದೀಮರು

ಇಳಕಲ್‌: ನಿಮ್ಮ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದೆ. ಕಾರ್ಡ್‌ ನಂಬರ್‌ ಹೇಳಿದರೆ ತಕ್ಷಣ ಆನ್‌ಲೈನ್‌ ಮೂಲಕ ಆ್ಯಕ್ಟಿವ್‌ ಮಾಡುತ್ತೇವೆ....

ಇಂಥ ಫೋನ್‌ ಕರೆಗಳು ಬಂದರೆ ಹುಷಾರಾಗಿರಿ. ಯಾವುದೇ ಮಾಹಿತಿ ನೀಡಬೇಡಿ. ನೀಡಿದರೆ ಮೋಸ ಹೋಗುವುದು ಗ್ಯಾರಂಟಿ.

ಹೌದು, ನಗರದಲ್ಲಿ ಇಂಥದೊಂದು ಘಟನೆ ನಡೆದಿದೆ. ಎಲ್‌.ನೇಹಾ ಎಂಬ ಯುವತಿ ಮೊಬೈಲ್‌ಗೆ ಗುರುವಾರ ರಾತ್ರಿ ಕರೆ ಮಾಡಿದ ದುಷ್ಕರ್ಮಿಗಳು, 'ಬ್ಯಾಂಕ್‌ ಕಸ್ಟಮರ್‌ ಕೇರ್‌ನಿಂದ ಮಾತನಾಡುತ್ತಿದ್ದೇವೆ, ನಿಮ್ಮ ಕಾರ್ಡ್‌ ಬ್ಲಾಕ್‌ ಆಗಿದೆ, ಎಟಿಎಂ ಕಾರ್ಡ್‌ ನಂಬರ್‌ ಹೇಳಿ, ಆನ್‌ಲೈನ್‌ ಮೂಲಕ ಆ್ಯಕ್ಟಿವ್‌ ಮಾಡುತ್ತೇವೆ' ಎಂದು ಕೇಳಿದ್ದಾರೆ. ಆಗ ಯುವತಿ ಮಾಹಿತಿ ನೀಡುತ್ತಿದ್ದಂತೆ ಕೆಲವೇ ಕ್ಷಣದಲ್ಲಿ 3.91ಲಕ್ಷ ರೂ.ಎಗರಿಸಿದ್ದಾರೆ.

ನಂತರ ಗಾಬರಿಗೊಂಡ ಯುವತಿ ಶುಕ್ರವಾರ ಬೆಳಗ್ಗೆ ಸಹೋದರನೊಂದಿಗೆ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ತಮ್ಮ ಉಳಿತಾಯ ಖಾತೆಯಿಂದ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಒಟ್ಟು 3.91ಲಕ್ಷ ರೂ.ಡ್ರಾ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಿಷಯ ತಿಳಿದು ಯುವತಿ ಶುಕ್ರವಾರ ಸಂಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಸೈ ನಾಗರಾಜ ಕಿಲಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಎಸ್ಪಿ ಲಕ್ಷ್ಮೇಪ್ರಸಾದ ಅವರ ಮರ್ಗದರ್ಶನದಂತೆ ಸಿಪಿಐ ಜೆ.ಕರುಣೇಶಗೌಡ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ