ಆ್ಯಪ್ನಗರ

4 ಕುಟುಂಬದ ಮುಗಿಲು ಮುಟ್ಟಿದ ಆಕ್ರಂದನ

ಎಂ.ಎಚ್‌.ನದಾಫ್‌ ಮುಧೋಳ 'ಬಡತನದ ಬವಣೆಯಲ್ಲಿ ಕುಟುಂಬದ ಜೀವನ ನಿರ್ವಹಣೆಗೆ ಸಕ್ಕರೆ ಕಾರ್ಖನೆಯಲ್ಲಿ ನೋವುಗಳ, ಸಂಕಷ್ಟಗಳ ಮಧ್ಯೆ ಉಪಜೀವನಕ್ಕೆ ಕಾರ್ಮಿಕರಾಗಿ ಕೆಲಸ ಮಾಡುತ್ತ ಆಧಾರವಾಗಿದ್ದವರು ಈಗ ಸಾವಿನ ದವಡೆಗೆ ಸಿಲುಕಿದ್ದಾರೆ. ಮೃತರು ಆ ಕುಟುಂಬಗಳಿಗೆ, ಸಂಬಂಧಿಕರಿಗೆ, ಮಾಲೀಕರಿಗೆ ಹಾಗೂ ಸ್ನೇಹಿತರಿಗೆ ಇನ್ನು ನೆನಪು ಮಾತ್ರ.

Vijaya Karnataka 17 Dec 2018, 5:00 am
ಎಂ.ಎಚ್‌.ನದಾಫ್‌ ಮುಧೋಳ
Vijaya Karnataka Web 4 the family touched the door
4 ಕುಟುಂಬದ ಮುಗಿಲು ಮುಟ್ಟಿದ ಆಕ್ರಂದನ


'ಬಡತನದ ಬವಣೆಯಲ್ಲಿ ಕುಟುಂಬದ ಜೀವನ ನಿರ್ವಹಣೆಗೆ ಸಕ್ಕರೆ ಕಾರ್ಖನೆಯಲ್ಲಿ ನೋವುಗಳ, ಸಂಕಷ್ಟಗಳ ಮಧ್ಯೆ ಉಪಜೀವನಕ್ಕೆ ಕಾರ್ಮಿಕರಾಗಿ ಕೆಲಸ ಮಾಡುತ್ತ ಆಧಾರವಾಗಿದ್ದವರು ಈಗ ಸಾವಿನ ದವಡೆಗೆ ಸಿಲುಕಿದ್ದಾರೆ. ಮೃತರು ಆ ಕುಟುಂಬಗಳಿಗೆ, ಸಂಬಂಧಿಕರಿಗೆ, ಮಾಲೀಕರಿಗೆ ಹಾಗೂ ಸ್ನೇಹಿತರಿಗೆ ಇನ್ನು ನೆನಪು ಮಾತ್ರ.

ನಿರಾಣಿ ಸಕ್ಕರೆ ಕಾರ್ಖಾನೆಯ ಡಿಸ್ಟಲರಿ ಸಂಸ್ಕರಣಾ ಘಟಕದಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ನಾಲ್ವರು ಮೃತಪಟ್ಟ ಕುಟುಂಬಗಳ ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು.

15 ವರ್ಷಗಳಿಂದಲೂ ನಾನಾ ವಿಭಾಗದಲ್ಲಿ ಕಾರ್ಮಿಕನಾಗಿದ್ದ ಕುಳಲಿ ಗ್ರಾಮದ ನಾಗಪ್ಪ ಬಾಳಪ್ಪ ಧರ್ಮಟ್ಟಿ (41)ಪತ್ನಿ, ಮಕ್ಕಳಿಗೆ ಆಧಾರವಾಗಿದ್ದನು ಎಂದು ಸಂಬಂಧಿಕರು ಹೇಳಿದರೆ, ಉದ್ಯೋಗದಲ್ಲಿ ನಿಪುಣತೆ ಹೊಂದಿದ ನಾಗಪ್ಪ ಯಾವಾಗಲೂ ಕ್ರಿಯಾಶೀಲತೆ ಹೊಂದಿದ್ದನ್ನು ಎಂದು ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಮತ್ತೊಬ್ಬ ಬೆಳಗಾವಿ ಜಿಲ್ಲೆಯ ಸೋಪಡ್ಲ ಗ್ರಾಮದ ಹಾಲಿ ವಸ್ತಿ ಯಡಹಳ್ಳಿಯ ಶಿವಯ್ಯ ಈರಯ್ಯ ಹೊಸಮಠ (40)ನಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಪುತ್ರ ಇದ್ದಾನೆ. ಮದುವೆಯಾಗಿ 18 ವರ್ಷಗಳಿಂದಲೂ ಯಡಹಳ್ಳಿಯಲ್ಲಿ ವಾಸವಾಗಿದ್ದನು. ಯಾವುದೇ ಆಸ್ತಿಯಿಲ್ಲ. ಬಡತನದ ಬವಣೆಯಲ್ಲಿ ಜೀವನ ಸಾಗಿಸಲು ಇದೊಂದೇ ಉದ್ಯೋಗ ಸಿಕ್ಕಿತ್ತು. 5, 7 ಹಾಗೂ 8 ನೇ ತರಗತಿಯಲ್ಲಿ ಮಕ್ಕಳು ಶಿಕ್ಷ ಣ ಕಲಿಯುತ್ತಿದ್ದಾರೆ. 9 ವರ್ಷದ ಮನೋಜ ಶಿವಯ್ಯ ಹೊಸಮಠ ತಂದೆ ಜತೆ ತೆರಳಿದ್ದಾಗ ಗಾಯಗೊಂಡಿದ್ದಾನೆ.

ಕಾರ್ಖಾನೆಯ ಉಸಿರು ಎಂದು ನಂಬಿಕೊಂಡಿದ್ದ ಜಮಖಂಡಿ ತಾಲೂಕಿನ ನಾವಲಗಿಯ ಜಗದೀಶ ಶಂಕರ ಪಟ್ಟಣಶೆಟ್ಟಿ (32), 8 ವರ್ಷಗಳಿಂದಲೂ ಅಲ್ಲಿಯೇ ಕೆಲಸ ಮಾಡುತ್ತಿದ್ದ, ಶಂಕರಗೆ ಪತ್ನಿ ಲಕ್ಷ್ಮಿ, ಗಂಡು, ಹೆಣ್ಣು ಮಕ್ಕಳಿದ್ದಾರೆ. ನಿತ್ಯ ನಾವಲಗಿಯಿಂದ ಕಾರ್ಖಾನೆಗೆ ಹೋಗಿ ಬರುತ್ತಿದ್ದ. ತಾಯಿ ಸುನಂದಾ ಪಟ್ಟಣಶೆಟ್ಟಿ ಅವರಿಗೆ ಕೆಲಸ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದನ್ನು ಎಂದು ಸಂಬಂಧಿ ಪ್ರಕಾಶ ಹೇಳುತ್ತಾರೆ.

ಘಟಕದಲ್ಲಿ ಮುಖ್ಯ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೊಳೆಬಸಪ್ಪ ತೋಟದ (35)ಎಂದು ಗುರುತಿಸಲಾಗಿದೆ. ಎಲ್ಲ ಕಾರ್ಮಿಕರನ್ನು ಮುಂದೆ ಮಾಡಿಕೊಂಡು ಘಟಕ ನಿರ್ವಹಿಸುತ್ತಿದ್ದನ್ನು ಎಂದು ಗಾಯಾಳುಗಳು ಹೇಳಿದ್ದಾರೆ. ಅದೆಷ್ಟೋ ಮನೆಯ ಕಷ್ಟಗಳು, ನೋವುಗಳಿದ್ದರೂ ಜವಾಬ್ದಾರಿಯಲ್ಲಿದ್ದವರಿಗೆ ಕೆಲಸ ತಪ್ಪಿಸಲು ಸಾಧ್ಯವಾಗದೇ ಪ್ರಾಮಾಣಿಕತೆಯಿಂದ ಹೊಳೆಬಸಪ್ಪ ಕೆಲಸ ನಿರ್ವಹಿಸುತ್ತಿದ್ದನು ಎಂದು ಗಾಯಾಳು ರಮೇಶ ಹೇಳತ್ತಾರೆ.

ಆಕ್ರಂದನ:

ನಾಲ್ವರು ಸಂಬಂಧಿಕರ, ಸ್ನೇಹಿತರು ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಪತ್ನಿಯರು, ಮಕ್ಕಳು, ವೃದ್ಧ ತಂದೆ ತಾಯಂದಿರು ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಎಂಥವರ ಮನಕಲಕುವಂತಿತ್ತು.

ಅಧಿಕಾರಿಗಳ ಭೇಟಿ:

ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ತಹಸೀಲ್ದಾರ್‌ ಡಿ.ಜಿ.ಮಹಾತ್‌, ಪೌರಾಯುಕ್ತ ರಮೇಶ ಜಾಧವ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತರಾವ, ಡಾ.ಅಶೋಕ ಸೂರ್ಯವಂಶಿ ಆರೋಗ್ಯ ವಿಚಾರಿಸಿದರು. ಸರಕಾರಿ ಕೆಇಎಂ ಆಸ್ಪತ್ರೆಯಿಂದ 5 ಜನ ಗಾಯಾಳುಗಳನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.

ಮೃತರ ಕುಟುಂಬಗಳಿಗೆ ಕಾರ್ಖಾನೆಯಿಂದ ವಿಮೆ ಮಾಡಿಸಲಾಗಿದೆ. ಸರಕಾರದಿಂದ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡಲಾಗುವುದು.
ಎಸ್‌.ಆರ್‌.ಪಾಟೀಲ, ವಿಧಾನ ಪರಿಷತ್‌ ಸದಸ್ಯರು,

ಕಾರ್ಖಾನೆಯಲ್ಲಿ ಆಗಿರುವ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ದುರದೃಷ್ಟಕರ ಘಟನೆ ನಡೆದಿದೆ. ನಾಲ್ವರು ಯುವಕರು ಮೃತ ಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು. ವಿಮೆ ಹಾಗೂ ಪಿಎಫ್‌ ಕೊಡಿಸಲಾಗುವುದು. ಮೃತರ ಮನೆಯಲ್ಲಿ ಶಿಕ್ಷ ಣ ಪೂರೈಸಿದರೆ ಕೆಲಸ ನೀಡಲಾಗುವುದು.

ಮುರಗೇಶ ನಿರಾಣಿ, ಸಕ್ಕರೆ ಕಾರ್ಖಾನೆ ಮಾಲೀಕರು, ಶಾಸಕರು, ಬೀಳಗಿ.

-

ಫೋಟೊ: 16 ಎಂಡಿಎಲ್‌ 2

ಮುಧೋಳ ಹೊರವಲಯದ ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಪರಿಷ್ಕರಣೆ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟ ಶಿವಯ್ಯ ಹೊಸಮಠ ಅವರ ಪತ್ನಿ ರೋದನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ