ಆ್ಯಪ್ನಗರ

ವಿಕಲಚೇತನ ಪ್ರಮಾಣಪತ್ರಕ್ಕಾಗಿ ಲಂಚ: ಎಸಿಬಿ ಬಲೆಗೆ ಜಿಲ್ಲಾಸ್ಪತ್ರೆ ವೈದ್ಯ

ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ವೈದ್ಯರೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

Vijaya Karnataka 17 Aug 2018, 7:39 am
ಬಾಗಲಕೋಟ: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ವೈದ್ಯರೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
Vijaya Karnataka Web Bribe


ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಮೋದ ಭಿಸೆ ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ಅಧಿಕಾರಿಗಳಿಂದ ಬಂಧಿತರಾಗಿದ್ದಾರೆ. ಪ್ರಮೋದ ಅವರ ಸಹೋದರ ಪ್ರಹ್ಲಾದ ಲಂಚ ಸ್ವೀಕರಿಸಲು ನೆರವು ನೀಡಿದ್ದಕ್ಕಾಗಿ ಅವರನ್ನೂ ಬಂಧಿಸಲಾಗಿದೆ. ಬೀಳಗಿ ತಾಲೂಕಿನ ಹೆರಕಲ್‌ ಗ್ರಾಮದ ಪುಂಡಲೀಕ ತುಪ್ಪದ ಅವರ ಪುತ್ರನಿಗೆ ವಿಕಲಚೇತನ ಪ್ರಮಾಣ ಪತ್ರ ನೀಡಲು ಡಾ.ಪ್ರಮೋದ ಲಂಚ ಕೇಳಿದ್ದರು. ದೃಷ್ಟಿ ವಿಕಲಚೇತನನಾಗಿರುವ ಬಾಲಕ ಸರಕಾರದ ಸೌಲಭ್ಯ ಪಡೆಯಲು ಶೇ.45 ರಷ್ಟು ವೈಕಲ್ಯತೆಯ ಪ್ರಮಾಣಪತ್ರ ನೀಡುತ್ತೇನೆ ಎಂದು ಪ್ರಮೋದ ಭರವಸೆ ನೀಡಿದ್ದರು. ಪ್ರಮಾಣ ಪತ್ರ ನೀಡಲು ಪುಂಡಲೀಕ ಅವರಿಂದ 10 ಸಾವಿರ ರೂ. ಲಂಚ ಕೇಳಿದ್ದರು. ಕೊನೆಗೆ 8ಸಾವಿರ ರೂ. ನೀಡಲು ಪುಂಡಲೀಕ ಒಪ್ಪಿದ್ದರು.

ಜಿಲ್ಲಾಸ್ಪತ್ರೆಯ ಸರ್ಕಲ್‌ನಲ್ಲಿದ್ದ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಡುವಂತೆ ಡಾ.ಪ್ರಮೋದ ತಿಳಿಸಿದ್ದರು. ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಏಕ ಕಾಲಕ್ಕೆ ದಾಳಿ ನಡೆಸಿದ ಎಸಿಬಿ ಪೊಲೀಸರು ಪ್ರಮೋದ ಹಾಗೂ ಸಹೋದರನನ್ನು ಬಂಧಿಸಿದರು. ಡಿಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐಗಳಾದ ರಾಘವೇಂದ್ರ ಹಳ್ಳೂರ, ಸಿ.ಜೆ.ಮಠಪತಿ ದಾಳಿ ನಡೆಸಿದ್ದರು. ಇತ್ತೀಚೆಗಷ್ಟೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ