ಆ್ಯಪ್ನಗರ

ಕೃಷ್ಣಾ ನದಿಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ:ಮುನ್ನೆಚ್ಚರಿಕೆ

ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿ ಪಾತ್ರದ ಪ್ರದೇಶಗಳಲ್ಲಿ ಮತ್ತೆ ಮಳೆ ಹೆಚ್ಚಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹ ಸ್ಥಿತಿ ಎದುರಿಸಲು ಸರಕಾರ ಸಿದ್ಧ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಕ ಸುದ್ದಿಲೋಕ 9 Sep 2019, 8:30 am
ವಿಕ ಸುದ್ದಿಲೋಕ ಬಾಗಲಕೋಟೆ
Vijaya Karnataka Web ಗೊವಿಂದ  ಕಾರಜೋಳ

ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿ ಪಾತ್ರದಲ್ಲಿ ಮತ್ತೆ ಮಳೆ ಹೆಚ್ಚಾಗಿ ಪ್ರವಾಹ ಭೀತಿ ನಮ್ಮನ್ನು ಕಾಡುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾನಯನ ಪ್ರದೇಶದಲ್ಲಿಹೆಚ್ಚಿನ ಮಳೆಯಿಂದಾಗಿ ಕೊಣ್ಣೂರು ಸೇತುವೆ ಸೇರಿ ಈಗಾಗಲೆ 14 ಸೇತುವೆಗಳು ಮುಳುಗಿ ಹೋಗಿವೆ. ಹೀಗಾಗಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈ ಪರಿಸ್ಥಿತಿ ಎದುರಿಸಲು ಸರಕಾರ ಸನ್ನದ್ಧವಾಗಿದ್ದು 2 ಎನ್‌ಡಿಆರ್‌ಎಫ್‌ ತಂಡ ಸೇರಿದಂತೆ ರಕ್ಷಣಾ ತಂಡಗಳನ್ನು ಬರಮಾಡಿಕೊಳ್ಳಲಾಗಿದೆ ಎಂದರು.

ನೀರು ಬರಬಹುದಾದ ಹಳ್ಳಿಗಳಲ್ಲಿಮುನ್ನೆಚ್ಚರಿಕೆಯಾಗಿ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಗ್ರಾಮದಲ್ಲಿಡಂಗುರ ಸಾರುವ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ. ಜಿಲ್ಲೆಯ ನಂದಗಾಂವ ಮತ್ತು ಅಸ್ಕಿ ಗ್ರಾಮಕ್ಕೆ ನೀರು ಬಂದಿದ್ದು ಜನರನ್ನು ಅಲ್ಲಿಂದ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಘಟಪ್ರಭಾದಲ್ಲಿಇಂದು ಪ್ರವಾಹ ಹೆಚ್ಚಾಗುವ ಲಕ್ಷಣವಿಲ್ಲಎಂದರು.

ನೀರು ಬಿಡುವ ವಿಚಾರದಲ್ಲಿಸಿಎಂ ಯಡಿಯೂರಪ್ಪ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಡಿಸಿಎಂ ಕಾರಜೋಳ, ಕೃಷ್ಣಾದಲ್ಲಿಇನ್ನೂ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ನಾವಾಗಲಿ, ಮಹಾರಾಷ್ಟ್ರ ಸಿಎಂ ಆಗಲಿ ಬಂದ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ರತ್ನಗಿರಿ ಹಾಗೂ ಕೊಂಕಣಿ ಜಿಲ್ಲೆಯಲ್ಲಿಈ ಭಾರಿ ಆದ ಮಳೆ ಬಹುಶ: ಹಿಂದಿನ ನೂರು ವರ್ಷದಲ್ಲಿಆಗಿರಲಿಕ್ಕಿಲ್ಲ. ಹೀಗಾಗಿ ಹರಿಯುವ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ಅದನ್ನು ನದಿ ಮೂಲಕವೇ ಹರಿ ಬಿಡಬೇಕಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂಸದ ಶ್ರೀನಿವಾಸಪ್ರಸಾದ ಅಸಮಾಧಾನ, ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರವೇ ಹೆಚ್ಚಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಕೇಳಿದ್ದಕ್ಕೆ ಈ ಬಗ್ಗೆ ಸದ್ಯ ಬೇಡ. ಬಿಜೆಪಿ ರಾಜ್ಯಾಧ್ಯಕ್ಷರು ಕಾಯುತ್ತಿದ್ದಾರೆ ಎಂದು ನುಣುಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ