ಆ್ಯಪ್ನಗರ

ಇಲ್ಲದ ಬೇಟಿ ಹಣಕ್ಕೆ ಅರ್ಜಿ ಭರಾಟೆ

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ 'ಬೇಟಿ ಬಚಾವೋ ಬೇಟಿ ಪಡಾವೋ'ಯೋಜನೆಯಡಿ ಹೆಣ್ಣು ಮಕ್ಕಳ ಬ್ಯಾಂಕ್‌ ಖಾತೆಗೆ 2 ಲಕ್ಷ ರೂ. ಪಾವತಿಸಲಾಗುತ್ತದೆ ಎಂದು ನಂಬಿ ಮಹಿಳೆಯರು ಫಾಮ್‌ರ್‍ ಭರ್ತಿ ಮಾಡುತ್ತಿರುವ ಪ್ರಕರಣಗಳು ನಡೆದಿವೆ.

Vijaya Karnataka 21 Dec 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ
Vijaya Karnataka Web application for money
ಇಲ್ಲದ ಬೇಟಿ ಹಣಕ್ಕೆ ಅರ್ಜಿ ಭರಾಟೆ


'ಬೇಟಿ ಬಚಾವೋ ಬೇಟಿ ಪಡಾವೋ'ಯೋಜನೆಯಡಿ ಹೆಣ್ಣು ಮಕ್ಕಳ ಬ್ಯಾಂಕ್‌ ಖಾತೆಗೆ 2 ಲಕ್ಷ ರೂ. ಪಾವತಿಸಲಾಗುತ್ತದೆ ಎಂದು ನಂಬಿ ಮಹಿಳೆಯರು ಫಾಮ್‌ರ್‍ ಭರ್ತಿ ಮಾಡುತ್ತಿರುವ ಪ್ರಕರಣಗಳು ನಡೆದಿವೆ.

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಲ್ಲಿಹೆಣ್ಣು ಮಕ್ಕಳ ಬ್ಯಾಂಕ್‌ ಅಕೌಂಟಿಗೆ 2 ಲಕ್ಷ ರೂ.ನೀಡಲಾಗುತ್ತದೆ ಎಂಬ ವದಂತಿಯೇ ಈ ಗೊಂದಲಕ್ಕೆ ಕಾರಣವಾಗಿದೆ. ವಾಟ್ಸ್‌ ಆ್ಯಪ್‌ ಹಾಗೂ ಫೇಸ್‌ ಬುಕ್‌ಗಳಲ್ಲಿಹರಿದಾಡಿರುವ ವದಂತಿಯ ಪೋಸ್ಟ್‌ಗಳು ಜನರು ಫಾಮ್‌ರ್‍ ಭರ್ತಿ ಮಾಡಿ ಕಳಿಸುವಂತೆ ಪ್ರೇರೇಪಿಸುತ್ತಿವೆ.

ಏನಿದು ವದಂತಿ ?


ಬೇಟಿ ಬಚಾವೋ ಯೋಜನೆಯಡಿ ಕೇಂದ್ರ ಸರಕಾರದಿಂದ 8 ರಿಂದ 32 ವರ್ಷದ ಮಹಿಳೆಯವರೆಗೆ 2 ಲಕ್ಷ ರೂ. ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಹಿಂದಿ ಭಾಷೆಯಲ್ಲಿರುವ ಫಾಮ್‌ರ್‍ ತುಂಬಿ, ಜನ್ಮ ದಿನಾಂಕ ಪ್ರಮಾಣಪತ್ರದೊಂದಿಗೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಬೇಕು ಎಂದು ವದಂತಿ ಹಬ್ಬಿದೆ.

ಒಬ್ಬರಿಂದೊಬ್ಬರಿಗೆ ಗಾಳಿ ಸುದ್ದಿಯಾಗಿ ಪಸರಿಸಿದ ಈ ವದಂತಿ ನಿಜ ರೂಪ ಪಡೆದಿದೆ. ಮಹಿಳೆಯರು ತಾವು ಕಲಿತ ಶಾಲೆ, ಮಕ್ಕಳು ಕಲಿತ ಶಾಲೆಗಳಿಗೆ ತೆರಳಿ ಜನ್ಮ ದಿನಾಂಕದ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ನಂತರ ಹಿಂದಿಯಲ್ಲಿರುವ ಫಾಮ್‌ರ್‍ ತುಂಬಿ ಹೊಸದಿಲ್ಲಿಯ ಮಹಿಳಾ ಅಭಿವೃದ್ಧಿ ಇಲಾಖೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುತ್ತಿದ್ದಾರೆ. ಅಂದ ಹಾಗೆ ಜನ್ಮ ದಿನಾಂಕ ಪ್ರಮಾಣ ಪತ್ರ ನೀಡುವ ಶಾಲೆಯ ಮುಖ್ಯ ಶಿಕ್ಷಕರು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. 'ಇಂತಹ ಯೋಜನೆಯಿಲ್ಲಎಂದು ಹೇಳಿದರೂ ಪಾಲಕರು ಕೇಳುವುದಿಲ್ಲ. ಜನ್ಮದಿನಾಂಕ ಪ್ರಮಾಣಪತ್ರಕ್ಕಾಗಿ ಪಟ್ಟು ಹಿಡಿಯುತ್ತಾರೆ. ನಾವು ಕೊಟ್ಟು ಕಳುಹಿಸುತ್ತೇವೆ' ಎಂದು ಮುಖ್ಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ವೈರಲ್‌ ಸತ್ಯವೇನು ?

ಸಾಮಾಜಿಕ ತಾಣಗಳಲ್ಲಿವೈರಲ್‌ ಆಗಿರುವ ವದಂತಿಯ ಹಿಂದಿರುವ ಸತ್ಯ ಹುಡುಕಿದರೆ ಇದೆಲ್ಲಸುಳ್ಳು ಎನ್ನುವುದು ಬಯಲಾಗುತ್ತದೆ. ಕೇಂದ್ರ ಸರಕಾರದ ಬೇಟಿ ಬಚಾವೋ ಯೋಜನೆ ಅಧಿಕೃತ ವೆಬ್‌ಸೈಟ್‌ನಲ್ಲಿಇದು ಸುಳ್ಳು ಎಂದು ಸ್ಪಷ್ಟನೆ ಅಳವಡಿಸಲಾಗಿದೆ. 'ಕೆಲವು ಅನಧಿಕೃತ ಸಂಘಟನೆಗಳು 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಫಾಮ್‌ರ್‍ಗಳನ್ನು ವಿತರಿಸುತ್ತಿರುವ ಬಗ್ಗೆ ವರದಿಯಾಗಿದೆ. ಯೋಜನೆಯಲ್ಲಿಪ್ರೋತ್ಸಾಹ ಧನ ನೀಡುವ ಯಾವುದೇ ನಿಯಮವಿಲ್ಲ. ಯೋಜನೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. ಇಂತಹ ಪ್ರಕರಣ ಬಂದರೆ ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ಉತ್ತರಪ್ರದೇಶದ ಮೀರತ್‌ ಹಾಗೂ ಮುಜಫರಾಬಾದ್‌ಗಳಲ್ಲಿಈಗಾಗಲೇ ಫಾಮ್‌ರ್‍ ವಿತರಣೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ' ಎಂದು ಸ್ಪಷ್ಟಪಡಿಸಲಾಗಿದೆ.

ಸಾಮಾಜಿಕ ತಾಣಗಳಲ್ಲಿವ್ಯಾಪಕವಾಗಿರುವ ಫಾಮ್‌ರ್‍ಗಳನ್ನೇ ಡೌನ್‌ಲೋಡ್‌ ಮಾಡಿಕೊಂಡು ಕೆಲವರು ಭರಿಸುತ್ತಿದ್ದಾರೆ. ಇನ್ನು ಹಣ ಬರುತ್ತದೆ ಎಂದು ನಂಬಿಸಿ ಕೆಲವರು ಮಹಿಳೆಯರಿಂದ ಫಾಮ್‌ರ್‍ ಭರ್ತಿಗೆ 200 ರೂ. ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ.

ಬೇಟಿ ಬಚಾವೋ ಯೋಜನೆಯಲ್ಲಿಯಾವುದೇ ಹಣ ಫಲಾನುಭವಿಗೆ ನೀಡಲಾಗುವುದಿಲ್ಲ. ಜನರು ಇಂತಹ ವದಂತಿ ನಂಬಿ ಫಾಮ್‌ರ್‍ ತುಂಬಿ ಕಳುಹಿಸಬಾರದು. ಕೇಂದ್ರ ಸರಕಾರದ ಮಹಿಳಾ ಅಭಿವೃದ್ಧಿ ಇಲಾಖೆಯೂ ಇಂತಹ ಯಾವುದೇ ಆದೇಶ ಹೊರಡಿಸಿಲ್ಲ.
-ಎ.ಕೆ.ಬಸಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ.

ಹೆಣ್ಣು ಮಗಳಿಗೆ 2 ಲಕ್ಷ ರೂ. ಅಕೌಂಟಿಗೆ ಪಾವತಿಸಲಾಗುತ್ತದೆ ಎಂದು ಹೇಳಿದ್ದರು. ಸಂಬಂಧಿಕರ ಊರಲ್ಲಿಫಾಮ್‌ರ್‍ ತುಂಬುವುದು ನೋಡಿ ನಾವೂ ಕಳುಹಿಸಿದ್ದೇವೆ.
-ಸಂಗಣ್ಣ ಈರಣ್ಣವರ, ಹೊನ್ನರಹಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ