ಆ್ಯಪ್ನಗರ

ಬಾಗಲಕೋಟೆ: ಹೆಣ್ಣು ಮಕ್ಕಳ ತಲೆ ಮೇಲೆ ಬೀಳ್ತಿದೆ ಕಲ್ಲು! ಭಾನಾಮತಿ ಭಯದಲ್ಲಿ ಪೋಷಕರು

ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಬೀಳುತ್ತಿದೆ ಕಲ್ಲು! ಅದೂ ಕೂಡಾ ಹೆಣ್ಣು ಮಕ್ಕಳ ಮೇಲೇ ಕಲ್ಲುಗಳು ಬೀಳುತ್ತಿವೆ. ಹೀಗಾಗಿ ಇದು ಭಾನಾಮತಿ ಕಾಟ ಇರಬಹುದು ಎಂದು ಸ್ಥಳೀಯರು ಭಾವಿಸಿದ್ದಾರೆ. ಬಾಗಲಕೋಟೆಯ ಗುಳೇದಗುಡ್ಡ ತಾಲ್ಲೂಕಿನಲ್ಲಿ ಈಗ ಭಾನಾಮತಿಯದ್ದೇ ಮಾತು.

Vijaya Karnataka Web 11 Sep 2019, 5:10 pm
ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಗ್ರಾಮದಲ್ಲಿ ಭಾನಾಮತಿ ಭೀತಿ ಆವರಿಸಿದೆ. ಶಾಲಾ ಮಕ್ಕಳ ಮೇಲೆ ಕಲ್ಲು ಬೀಳುತ್ತಿದ್ದು, ಭಾನಾಮತಿ ಶಂಕೆ ವ್ಯಕ್ತವಾಗಿದೆ.
Vijaya Karnataka Web head


ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಕಳೆದೊಂದು ತಿಂಗಳಿಂದ ಕಲ್ಲು ಬೀಳುತ್ತಿದೆ. ಹೀಗಾಗಿ ಹೆಣ್ಣು ಮಕ್ಕಳು, ಪಾಲಕರು, ಗ್ರಾಮಸ್ಥರು ಹಾಗೂ ಶಿಕ್ಷಕರು ಆತಂಕಕ್ಕೀಡಾಗಿದ್ದಾರೆ. ಘಟನೆ ಕುರಿತಂತೆ ಗುಳೇದಗುಡ್ಡ ಪೊಲೀಸ್ ಠಾಣೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಶಾಲೆ ಶಿಕ್ಷಕರು.


ದಿನನಿತ್ಯ ಪಾಠ ಮಾಡುವ ವೇಳೆ ಕಲ್ಲು ಬೀಳುತ್ತಿದ್ದು, ಕೆಲ ಶಿಕ್ಷಕರಿಗೂ ತೊಂದರೆ ಆಗಿದೆ. ಈ ವಿಷಯವಾಗಿ ಗ್ರಾಮಸ್ಥರಿಗೆ ತಿಳಿಸಿದಾಗ ಗ್ರಾಮಸ್ಥರೇ ಸೇರಿ ತನಿಖೆಯನ್ನೂ ಮಾಡಿದ್ದಾರೆ. ಶಾಲೆಯ ಕೊಠಡಿಯಲ್ಲಿ ಮಕ್ಕಳು ಹಾಗೂ ಶಿಕ್ಷಕರನ್ನು ಇರಲು ತಿಳಿಸಿ ಬಾಗಿಲು, ಕಿಟಕಿ ಹಾಕಿ ಹೊರಗಡೆ ಯಾರಾದರೂ ಕಲ್ಲು ಎಸೆಯುತ್ತಿದ್ದಾರಾ ಎಂದು ಪರಿಶೀಲನೆ ನಡೆಸಿದ್ದಾರೆ. ಹೀಗಿದ್ದರೂ ಕೋಣೆಯೊಳಗೆ ಕಲ್ಲು ಕಾಣಿಸಿಕೊಂಡಿವೆ. ಮಕ್ಕಳು ಶೌಚಕ್ಕೆ ತೆರಳಿದಾಗಲೂ ಕಲ್ಲು ಬಿದ್ದಿವೆ.

ಒಂದೇ ಪ್ರೌಢ ಶಾಲೆಗೆ ಮೂವರು ಮುಖ್ಯಶಿಕ್ಷಕರು

ಭಾನಾಮತಿ ಕಾಟದಿಂದಾಗಿ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಶಾಲೆಯಲ್ಲಿ 24 ಮಕ್ಕಳಿದ್ದು, ಕಲ್ಲುಗಳು ಹೆಚ್ಚಾಗಿ ಹೆಣ್ಣುಮಕ್ಕಳಿಗೇ ಬೀಳುತ್ತಿವೆ. ಈ ಘಟನೆಯಿಂದ ಇಂಜಿನವಾರಿ ಗ್ರಾಮ ಆತಂಕದಲ್ಲಿ ಮುಳುಗಿದೆ.

ಪ್ರವಾಹ ವಿಚಾರದಲ್ಲಿ ರಾಜಕಾರಣ ಬೇಡ: ಕಾಂಗ್ರೆಸ್‌ಗೆ ಚಾಟಿ ಬೀಸಿದ ಸಚಿವ ಸಿ ಸಿ ಪಾಟೀಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ