ಆ್ಯಪ್ನಗರ

ಬಾಗಲಕೋಟೆ ಓಪನ್‌

ಒಂದೂವರೆ ತಿಂಗಳಿನಿಂದ ಬಹುತೇಕ ಬಂದ್‌ ಆಗಿದ್ದ ನಗರದಲ್ಲಿಶುಕ್ರವಾರ ಸಡಿಲಿಕೆ ದೊರೆತಿದ್ದು ಅಂಗಡಿಗಳು ಬಾಗಿಲು ತೆರೆದಿವೆ.

Vijaya Karnataka Web 9 May 2020, 5:00 am
ಬಾಗಲಕೋಟೆ : ಒಂದೂವರೆ ತಿಂಗಳಿನಿಂದ ಬಹುತೇಕ ಬಂದ್‌ ಆಗಿದ್ದ ನಗರದಲ್ಲಿಶುಕ್ರವಾರ ಸಡಿಲಿಕೆ ದೊರೆತಿದ್ದು ಅಂಗಡಿಗಳು ಬಾಗಿಲು ತೆರೆದಿವೆ.
Vijaya Karnataka Web BAGALKOT OPEN-BGK-8-2_41


ನಗರದ ಎಂಜಿ ರಸ್ತೆ, ವಿದ್ಯಾಗಿರಿ ಹಾಗೂ ನವನಗರಗಳಲ್ಲಿಅಂಗಡಿ, ಮುಂಗಟ್ಟುಗಳಲ್ಲಿವ್ಯಾಪಾರ ಆರಂಭಗೊಂಡಿದೆ. ಹಳೆಯ ಬಾಗಲಕೋಟೆ, ವಿದ್ಯಾಗಿರಿಗಳಲ್ಲಿಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಲಾಗಿದೆ. ಬೆಳಗಾವಿ-ಹೈದರಾಬಾದ್‌ ಹೆದ್ದಾರಿಯಲ್ಲಿಮೂರು ಕಡೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿಅಂಗಡಿ, ಮುಂಗಟ್ಟುಗಳಲ್ಲಿವಹಿವಾಟು ಆರಂಭಗೊಂಡಿದೆ.

ಎಂಜಿ ರಸ್ತೆಯಲ್ಲಿಎಲೆಕ್ಟ್ರಾನಿಕ್‌, ಬಟ್ಟೆ, ಶೂ ಅಂಗಡಿ ಸೇರಿದಂತೆ ಬಹುತೇಕ ಅಂಗಡಿಗಳು ಶುಕ್ರವಾರ ಸಂಜೆಗೆ ಬಾಗಿಲು ತೆರೆದಿವೆ. ವಿದ್ಯಾಗಿರಿ ಪ್ರದೇಶದ 19ನೇ ಕ್ರಾಸ್‌ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ ತೆರವು ಮಾಡಿದ್ದರಿಂದ ಸಂಚಾರ ಸುಗಮವಾಗಿದೆ. ಈವರೆಗೆ ಸುತ್ತು ಬಳಸಿ ಸಂಚರಿಸುತ್ತಿದ್ದ ಜನರು ಈಗ ನೇರವಾಗಿ ಮುಖ್ಯ ರಸ್ತೆಯ ಮೂಲಕ ತೆರಳುತ್ತಿದ್ದಾರೆ. ಈಗಾಗಲೇ ಹೊಟೇಲ್‌ಗಳಲ್ಲಿಪಾರ್ಸಲ್‌ ಸೇವೆ ಆರಂಭಗೊಂಡಿದ್ದು, ಪಿಜ್ಜಾ ಅಂಗಡಿಗಳೂ ಸೇವೆ ಒದಗಿಸುತ್ತಿವೆ. ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾ.ಡಾ.ರಾಜೇಂದ್ರ, ಎಸ್‌ಪಿ ಲೋಕೇಶ್‌ ಜಗಲಾಸರ್‌ ಶುಕ್ರವಾರ ಬೆಳಗ್ಗೆ ಎಂಜಿ ರಸ್ತೆ, ವಲ್ಲಭಭಾಯಿ ಚೌಕ್‌ ಪ್ರದೇಶದಲ್ಲಿಸಂಚರಿಸಿ ಸ್ಥಿತಿಯ ಮಾಹಿತಿ ಪಡೆದುಕೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ