ಆ್ಯಪ್ನಗರ

ಹಯವನೇರಿ ಭಿಕ್ಷೆಗೆ ಬಂದ ಬಾಲಶ್ರೀ

ಕಲಾದಗಿ: ತನ್ನದೇ ಆದ ಗತ್ತಿನಿಂದ ಹೆಜ್ಜೆಹಾಕುತ್ತ ನಡೆಯುತ್ತಿರುವ ಕಪ್ಪುಬಿಳುಪಿನ ಚುರುಕಿನ ಕುದುರೆ. ಹಸಿರು ಪಟಾಗ ಮುಡಿಗೇರಿಸಿಕೊಂಡು, ಕೊರಳಲ್ಲಿರುದ್ರಾಕ್ಷಿ ಸರ ಹಾಕಿಕೊಂಡು,ಕೊರಳಲ್ಲೊಂದು ಕೇಸರಿ ಶಲ್ಯ ಹಾಕಿಕೊಂಡು, ಅಚ್ಚಬಿಳಿಯ ಧೋತರವನ್ನುಟ್ಟು ಆ ಕುದುರೆಯನ್ನೇರಿ ಬರುತ್ತಿರುವ ಬಾಲ ಶ್ರೀಗಳು, ಭಕ್ತಿಯಿಂದ ಅವರ ಕಾಲಿಗೆರಗುತ್ತಿರುವ ರೈತರು..!

Vijaya Karnataka 24 Sep 2019, 5:00 am
ಕಲಾದಗಿ: ತನ್ನದೇ ಆದ ಗತ್ತಿನಿಂದ ಹೆಜ್ಜೆಹಾಕುತ್ತ ನಡೆಯುತ್ತಿರುವ ಕಪ್ಪುಬಿಳುಪಿನ ಚುರುಕಿನ ಕುದುರೆ. ಹಸಿರು ಪಟಾಗ ಮುಡಿಗೇರಿಸಿಕೊಂಡು, ಕೊರಳಲ್ಲಿರುದ್ರಾಕ್ಷಿ ಸರ ಹಾಕಿಕೊಂಡು,ಕೊರಳಲ್ಲೊಂದು ಕೇಸರಿ ಶಲ್ಯ ಹಾಕಿಕೊಂಡು, ಅಚ್ಚಬಿಳಿಯ ಧೋತರವನ್ನುಟ್ಟು ಆ ಕುದುರೆಯನ್ನೇರಿ ಬರುತ್ತಿರುವ ಬಾಲ ಶ್ರೀಗಳು, ಭಕ್ತಿಯಿಂದ ಅವರ ಕಾಲಿಗೆರಗುತ್ತಿರುವ ರೈತರು..!
Vijaya Karnataka Web balashree who came to beg
ಹಯವನೇರಿ ಭಿಕ್ಷೆಗೆ ಬಂದ ಬಾಲಶ್ರೀ


ಎಲ್ಲರ ಗಮನ ಸೆಳೆಯುತ್ತಿರುವ ಇಂಥಹ ದೃಶ್ಯ ಕಳೆದೆರೆಡು ದಿನಗಳಿಂದ ಸಮೀಪದ ಕಳಸಕೊಪ್ಪ ಹಾಗೂ ಚಿಕ್ಕಶೆಲ್ಲಿಕೇರಿಗಳ ವ್ಯಾಪ್ತಿಯ ಹೊಲಗಳಲ್ಲಿಕಂಡುಬರುತ್ತಿದೆ. ಮಠದ ಪರಂಪರೆಯಂತೆ ಕುದರೆಯನ್ನೇರಿ ಭಕ್ತರ ಮನೆ, ಹೊಲಗಳಿಗೆ ಗದ್ದನಕೇರಿಯ ಗುಡ್ಡದ ಮೇಲಿರುವ ಶ್ರೀ ಮಳೆರಾಜೇಂದ್ರ ಮಠದ ಬಾಲ ಅಖಂಡಯ್ಯ ಮಹಾಪುರುಷ ಮಹಾಸ್ವಾಮಿಗಳು 'ಭಿಕ್ಷಾ ಸಂಚಾರ'ಮಾಡುತ್ತಿದ್ದಾರೆ. ಮಳೆಭವಿಷ್ಯ ಹೇಳುವ ಈ ಭಾಗದ ಅಸಂಖ್ಯಾತ ರೈತರ ಶ್ರದ್ಧಾಭಕ್ತಿ ಕೇಂದ್ರದವಾದ ಶ್ರೀ ಮಳೆರಾಜೇಂದ್ರ ಮಠಕ್ಕೂ ಈ ಭಾಗಕ್ಕೂ ಅವಿನಾಭಾವ ಸಂಬಂಧವಿದೆ. ಇದರ ದ್ಯೂತಕವಾಗಿ ಪರಂಪರಯಂತೆ ಮಠದ ಶ್ರೀಗಳು 'ಭಿಕ್ಷೆ'ಗಾಗಿ ಸಂಚರಿಸುತ್ತ ಎಲ್ಲರ ಗಮನ ಸೇಳುತ್ತಿದ್ದಾರೆ.

ಭಕ್ತರೇ ಕೊಡಿಸಿದ ಕುದುರೆ:

ಕಳಸಕೊಪ್ಪ,ಚಿಕ್ಕಶೆಲ್ಲಿಕೇರಿಯ ಭಕ್ತರೇ ಇತ್ತೀಚೆಗೆ ಕೊಡಿಸಿರುವ ಕುದರೆ'ಲಕ್ಷಿತ್ರ್ಮೕ'ಯನ್ನೇರಿ ಉಳ್ಳಾಗಡ್ಡಿ ರಾಶಿ ನಡೆಯುತ್ತಿರುವ ಭಕ್ತರ ಹೊಲಗಳಿಗೆ ಸಂಚರಿಸುತ್ತಿರುವುದು ಅಂಥಃಕರಣದ ಮಾತುಗಳನ್ನಾಡುತ್ತ ರೈತರು ಮಳೆ ಬೆಳೆ ಬಗ್ಗೆ ಕೇಳುತ್ತಿದ್ದರೆ 'ಎಲ್ಲಾಛಲೋ ಆಗತದ'ಎಂದು ಭವಿಷ್ಯ ಹೇಳುತ್ತ ಸಾಗುತ್ತಿದ್ದಾರೆ.

ಭಕ್ತರು ಖುಷ್‌:

ಶ್ರೀಗಳು ತಮ್ಮೂರು, ಮನೆ, ಹೊಲಗಳಿಗೆ ಬಂದು ಆಶೀರ್ವಾದ ಮಾಡುತ್ತಿರುವುದು, ಅದರಲ್ಲೂಈ ಬಾರಿ ಕುದುರೆಯನ್ನೇರಿ ಬಂದಿರುವುದು ರೈತ ಭಕ್ತರ ಸಂತಸಕ್ಕೆ ಕಾರಣವಾಗಿದೆ. ತಮ್ಮ ಹೊಲಗಳಲ್ಲಿಬೆಳೆದ ಬೆಳೆಯಲ್ಲಿಶಕ್ತಾತ್ರ್ಯನುಸಾರ ಭಾಗವನ್ನು ಅವರಿಗೆ ಸಮರ್ಪಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ