ಆ್ಯಪ್ನಗರ

ಬನಶಂಕರಿದೇವಿ ಜಾತ್ರೆ ಇಂದು

ಬಾದಾಮಿ: ಜಗನ್ಮಾತೆ ಶಾಕಾಂಬರಿ, ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಲಿದೆ.

Vijaya Karnataka 21 Jan 2019, 5:00 am
ಬಾದಾಮಿ: ಜಗನ್ಮಾತೆ ಶಾಕಾಂಬರಿ, ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ನಡೆಯಲಿದೆ.
Vijaya Karnataka Web banashankari devi jatre is today
ಬನಶಂಕರಿದೇವಿ ಜಾತ್ರೆ ಇಂದು


ಈಗಾಗಲೇ ತಾಲೂಕಿನ ಚೊಳಚಗುಡ್ಡ ಗ್ರಾಮ ಪಂಚಾಯಿತಿಯು ಸಕಲ ಸಿದ್ಧತೆ ಕೈಗೊಂಡಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ, ಯಾತ್ರಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿದೆ.

ತಾಪಂ ಅಧಿಕಾರಿ ಭೀಮಪ್ಪ ಲಾಳಿ, ತಾಪಂ ವತಿಯಿಂದ 4ಪಿಡಿಒ, 3 ಎಸ್‌ಡಿಎ, 4 ಜನ ಬಿಲ್‌ ಕಲೆಕ್ಟರ್‌ ಒಟ್ಟು 11 ಜನ ಜಾತ್ರಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜಿಪಂ ಮಾಜಿ ಉಪಾಧ್ಯಕ್ಷ ಡಾ.ಎಂ.ಎಚ್‌.ಚಲವಾದಿ ನೇತೃತ್ವದಲ್ಲಿ 50 ಜನ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಕ್ಯಾಮೆರಾ ಅಳವಡಿಕೆ:

ಜಾತ್ರೆ ಸುತ್ತಲಿನ ಆವರಣದಲ್ಲಿ ಆಯಾ ಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ. ಜಾತ್ರೆಯಲ್ಲಿ ಸ್ವಚ್ಛತೆಗಾಗಿ 200 ಕೂಲಿ ಕಾರ್ಮಿಕರ ನಿಯೋಜನೆ ಮಾಡಲಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಶಿವಯೋಗಮಂದಿರ, ಶಿವಪುರ ರಸ್ತೆಯಲ್ಲಿ ಎರಡು ಕೊಳವೆ ಬಾವಿ ಕೊರೆಸಲಾಗಿದ್ದು, ನೀರಿನ ಟ್ಯಾಂಕ್‌ ಶುಚಿಗೊಳಿಸಿ ನೀರು ಬಳಕೆಗೆ ಪೈಪ್‌ಲೈನ್‌ ಹಾಗೂ ನಲ್ಲಿಗಳ ಜೋಡಿಸಲಾಗಿದೆ. ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ತೆರೆಯಲಾಗಿದೆ. ತುರ್ತು 108 ವಾಹನ ದಿನದ 24 ಗಂಟೆ ವ್ಯವಸ್ಥೆ. ಅಗ್ನಿಶಾಮಕ ವಾಹನ ಜಾತ್ರೆ ಮುಕ್ತಾಯದವರೆಗೂ ಠಿಕಾಣೆ ಹೂಡಲಿದೆ.

ಪಾರ್ಕಿಂಗ್‌ ವ್ಯವಸ್ಥೆ

ಹೆರಕಲ್‌(ಬಾದಾಮಿ) 10 ಎಕೆರೆ, ಗ್ರಾಮ ಪಂಚಾಯಿತಿ ಜಾಗೆ 1.5 ಎಕರೆ(ಶಿವಪುರ ರಸ್ತೆ), ಹಂಪಿಹೊಳಿ(ಶಿವಯೋಗಮಂದಿರ ರಸ್ತೆ) 2 ಎಕರೆ, ಬಡಿಗೇರ ಹಾಗೂ ಹಂಪಿಹೊಳಿ 5 ಎಕರೆ(ಗದಗ ರಸ್ತೆ) ಜಮೀನುಗಳಲ್ಲಿ ಜಾತ್ರೆಗೆ ಬರುವ ವಾಹನಗಳ ಪಾರ್ಕಿಂಗ್‌ಗಾಗಿ ಪಂಚಾಯಿತಿಯಿಂದ ಸೌಲಭ್ಯ ಕಲ್ಪಿಸಲಾಗಿದೆ.

ನೀರಿನ ವ್ಯವಸ್ಥೆ

ನಾಗರಾಳ ಎಸ್ಪಿ ಗ್ರಾಮದ ಜಾಕ್‌ವೇಲ್‌ದಿಂದ ಹರಿದ್ರಾತೀರ್ಥಕ್ಕೆ ನೀರು ಸರಬರಾಜು ಕಾರ್ಯ. ನವೀಲುತೀರ್ಥ ಜಲಾಶಯದಿಂದ ಈಗಾಗಲೆ ಹರಿದ್ರಾತೀರ್ಥಕ್ಕೆ ನೀರು ಹರಿಯುವಿಕೆಯಾಗುತ್ತಿದ್ದು. ಜಾತ್ರೆಗೆ ನೀರಿನ ಅಭಾವತೆಯನ್ನು ತಡೆದು ಭಕ್ತ ಸಮೂಹಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ರಥೋತ್ಸವ ದಿನ ಮುಂಚಿತವಾಗಿ ಕಳಸ ಇಳಿಯುವವರೆಗೂ ಜಾತ್ರೆಯ ಒಳಗೆ ಯಾವುದೆ ವಾಹನಗಳು ಪ್ರವೇಶಕ್ಕೆ ತಡೆಒಡ್ಡಿ ಬಿಗಿ ಬಂದೂಬಸ್ತ್‌ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ