ಆ್ಯಪ್ನಗರ

ಕೆರೆಗೆ ತಡೆ ಗೋಡೆ: 1.5 ಕೋಟಿ ಅನುದಾನ

ತೇರದಾಳ : ಪಟ್ಟಣದ ಜಿರಗೇರಿಗೆ ತಡೆಗೋಡೆ ಮತ್ತು ರಸ್ತೆ ಅಗಲೀಕರಣಕ್ಕಾಗಿ 1.5ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್‌ ಕೂಡ ಆಗಿದೆ. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 13 Jun 2018, 5:00 am
ತೇರದಾಳ : ಪಟ್ಟಣದ ಜಿರಗೇರಿಗೆ ತಡೆಗೋಡೆ ಮತ್ತು ರಸ್ತೆ ಅಗಲೀಕರಣಕ್ಕಾಗಿ 1.5ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್‌ ಕೂಡ ಆಗಿದೆ. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web barrier to the lake 1 5 crore grants
ಕೆರೆಗೆ ತಡೆ ಗೋಡೆ: 1.5 ಕೋಟಿ ಅನುದಾನ


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಲಾಖೆ ಜಮಖಂಡಿ ವಿಭಾಗದ ಎಇಇ ಎಸ್‌.ಬಿ.ಚೌಡನ್ನವರ, 2017-18ನೇ ಸಾಲಿನಲ್ಲಿ ಈ ಯೋಜನೆ ಮಂಜೂರಾಗಿದ್ದು, ಹಿಂದಿನ ಮುಖ್ಯಮಂತ್ರಿ ಈ ಕಾಮಗಾರಿ ಯೋಜನೆಗೆ ಚಾಲನೆ ನೀಡಿದ್ದರು. ಕಾಮಗಾರಿಯ ಟೆಂಡರ್‌ ಕೂಡ ಆಗಿದ್ದು, ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು. ಸುಮಾರು 150 ಮೀಟರ್‌ ತಡೆಗೋಡೆ ನಿರ್ಮಿಸಲಾಗುವುದು. ಜೊತೆಗೆ ಸಿಸಿ ರಸ್ತೆ ಮತ್ತು ರಸ್ತೆ ವಿಭಜಕ ಅಳವಡಿಸುವ ಕ್ರಮ ಕೈಗೊಳ್ಳಲಾಗುವುದು. ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಮಾರ್ಗ ಆಗಿದ್ದರಿಂದ ಕೆರೆಯ ದಂಡೆ ಹತ್ತಿರ ಸಾಕಷ್ಟು ರಸ್ತೆ ಇಕ್ಕಟ್ಟಾಗಿತ್ತು. ಇದರಿಂದ ವಾಹನಗಳಿಗೆ ತೀವ್ರ ತೊಂದರೆ ಆಗುತ್ತಿತ್ತು. ಆದ್ದರಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ವಾಹನಸವಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲಾಖೆ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಜಿ.ಪಾಟೀಲ, ಜೋಗಿ, ಎಇ ಬಿರಾದಾರ, ಶೆಟ್ಟೆಪ್ಪ ಸುಣಗಾರ, ರಾಜೇಸಾಬ ನಗಾರ್ಜಿ ಸೇರಿದಂತೆ ಇನ್ನಿತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ