ಆ್ಯಪ್ನಗರ

ಖಾಸಗಿ ವಾಹನದಲ್ಲಿ ಇವಿಎಂ ಸಾಗಾಟ: ಜಮಖಂಡಿ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದು, ದೂರಿನಲ್ಲಿ 10 ಅಂಶಗಳ ಮಾಹಿತಿ ಕೇಳಿದ್ದಾರೆ. ಅಲ್ಲದೇ ಫಲಿತಾಂಶಕ್ಕೂ ಮುನ್ನ ಉತ್ತರಿಸುವಂತೆ ಮನವಿ ಮಾಡಿದ್ದಾರೆ.

Vijaya Karnataka 4 Nov 2018, 3:47 pm
ಬಾಗಲಕೋಟ : ಜಿಲ್ಲೆಯ ಜಮಖಂಡಿ ಉಪಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳನ್ನು ಖಾಸಗಿ ವಾಹನದಲ್ಲಿ ಸಾಗಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜಮಖಂಡಿ ಬಿಜೆಪಿ ಘಟಕ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.
Vijaya Karnataka Web evm voting


ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದು, ದೂರಿನಲ್ಲಿ 10 ಅಂಶಗಳ ಮಾಹಿತಿ ಕೇಳಿದ್ದಾರೆ. ಅಲ್ಲದೇ ಫಲಿತಾಂಶಕ್ಕೂ ಮುನ್ನ ಉತ್ತರಿಸುವಂತೆ ಮನವಿ ಮಾಡಿದ್ದಾರೆ.

1) ಪ್ರಮುಖವಾಗಿ ಮತಯಂತ್ರಗಳ ಸಾಗಾಟಕ್ಕೆ ಖಾಸಗಿ ವಾಹನ ಬಳಕೆ ಯಾಕೆ ?

2) ಆಡಳಿತ ಪಕ್ಷಕ್ಕೆ ಸೇರಿದ ಶಾಸಕರ ಶಿಕ್ಷಣ ಸಂಸ್ಥೆಗಳಿಂದ ಬಸ್ ಬಳಕೆ ಮಾಡಿದ ಉದ್ದೇಶವೇನು?

3) ಕೊಣ್ಣೂರು ಗ್ರಾಮದಲ್ಲಿ ಒಂದೇ ಮತಗಟ್ಟೆಯ ಮತಯಂತ್ರಗಳನ್ನು ಎರಡೆರಡು ವಾಹನಗಳಲ್ಲಿ ಕಳಿಸಿದ್ದು ಯಾಕೆ? ಇದರ ಉದ್ದೇಶವೇನು?

ಇಷ್ಟು ಅಂಶಗಳ ಜೊತೆಗೆ ಒಟ್ಟು ಹತ್ತು ಪ್ರಶ್ನೆಗೆ ಉತ್ತರಿಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾರೆ. ಈ ಪ್ರಶ್ನೆಗಳಿಗೆ ಚುನಾವಣಾ ಅಧಿಕಾರಿಗಳಿಂದ ಉತ್ತರ ಸಿಕ್ಕ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಶ್ರೀಕಾಂತ್ ಕುಲಕರ್ಣಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ